ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯವಿರಲಿ, ಮೊದಲು ವಿಘ್ನನಿವಾರಕನಾದ ಗಣೇಶನನ್ನು ಪೂಜಿಸುವುದು ಅನಾದಿ ಕಾಲದಿಂದಲೂ ನಡೆದುಬಂದಿರುವ ಸಂಪ್ರದಾಯ. ಗಣಪತಿಯನ್ನು ಭಕ್ತಿಯಿಂದ ಆರಾಧಿಸಿದರೆ ಜೀವನದ ಎಲ್ಲ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಗಣೇಶನ ಹಲವು ರೂಪಗಳಲ್ಲಿ ‘ಪಂಚಮುಖಿ ಗಣೇಶ’ (ಐದು ಮುಖದ ಗಣಪತಿ) ಅತ್ಯಂತ ಶಕ್ತಿಶಾಲಿ ಮತ್ತು ಮಂಗಳಕರ ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಪಂಚಮುಖಿ ಗಣೇಶನ ಮೂರ್ತಿ ಅಥವಾ ಫೋಟೋ ಇಡುವುದರಿಂದ ಸಿಗುವ ಲಾಭಗಳೇನು ಮತ್ತು ಅದರ ಹಿಂದಿರುವ ದಿವ್ಯ ರಹಸ್ಯವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ವಾಸ್ತು ದೋಷಗಳಿಗೆ ರಾಮಬಾಣ:
ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷಗಳಿದ್ದರೆ, ಅದನ್ನು ನಿವಾರಿಸಲು ಪಂಚಮುಖಿ ಗಣೇಶನ ಆರಾಧನೆ ಅತ್ಯಂತ ಸೂಕ್ತ. ಮನೆಯ ಮುಖ್ಯ ದ್ವಾರದ ಮೇಲೆ ಪಂಚಮುಖಿ ಗಣೇಶನ ಫೋಟೋ ಅಥವಾ ಮೂರ್ತಿಯನ್ನು ಪ್ರತಿಷ್ಠಾಪಿಸುವುದರಿಂದ ಮನೆಗೆ ಯಾವುದೇ ನೆಗೆಟಿವ್ ಎನರ್ಜಿ ಅಥವಾ ದೃಷ್ಟಿ ದೋಷಗಳು ಪ್ರವೇಶಿಸುವುದಿಲ್ಲ. ಇದು ಮನೆಯ ಸುತ್ತಲೂ ಒಂದು ರಕ್ಷಣಾ ಕವಚವನ್ನು ಸೃಷ್ಟಿಸುತ್ತದೆ.
ಇದನ್ನೂ ಓದಿ: ಗರುಡ ಪುರಾಣದ ಪ್ರಕಾರ ಈ 4 ಕೆಟ್ಟ ಅಭ್ಯಾಸಗಳಿದ್ದರೆ ಕೋಟ್ಯಧಿಪತಿಯೂ ಭಿಕ್ಷುಕನಾಗುತ್ತಾನೆ!
ಪಂಚಮುಖಿ ಗಣೇಶನ ಪೂಜೆಯಿಂದ ಸಿಗುವ ಲಾಭಗಳು:
ವಿದ್ಯಾರ್ಥಿಗಳು ಅಥವಾ ಉದ್ಯೋಗದಲ್ಲಿ ಪ್ರಗತಿ ಬಯಸುವವರು ಪಂಚಮುಖಿ ಗಣೇಶನನ್ನು ಪೂಜಿಸುವುದರಿಂದ ಏಕಾಗ್ರತೆ ಮತ್ತು ಬುದ್ಧಿಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಸದಾ ಹಣದ ಕೊರತೆ ಎದುರಿಸುತ್ತಿರುವವರು ಈ ರೂಪದ ಗಣಪತಿಯನ್ನು ಆರಾಧಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಸಾಲದ ಬಾಧೆಯಿಂದ ಮುಕ್ತಿ ಸಿಗುತ್ತದೆ. ಜಾತಕದಲ್ಲಿರುವ ರಾಹು-ಕೇತು ಅಥವಾ ಶನಿ ದೋಷಗಳ ಪ್ರಭಾವವನ್ನು ಕಡಿಮೆ ಮಾಡಲು ಪಂಚಮುಖಿ ಗಣೇಶನ ಪೂಜೆ ಸಹಕಾರಿಯಾಗಿದೆ.
ಪೂಜಿಸುವಾಗ ನೆನಪಿರಲಿ ಈ ನಿಯಮಗಳು:
- ಪಂಚಮುಖಿ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಇಡುವಾಗ ಅದರ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರುವಂತೆ ನೋಡಿಕೊಳ್ಳಿ.
- ಮೂರ್ತಿಯ ಸೊಂಡಿಲು ಎಡಭಾಗಕ್ಕೆ ಇರುವುದು ಗೃಹಸ್ಥರಿಗೆ ಅತ್ಯಂತ ಮಂಗಳಕರ.
- ನಿತ್ಯವೂ ಗಣೇಶನಿಗೆ ಗರಿಕೆ ಹುಲ್ಲು ಮತ್ತು ಮೋದಕ ನೈವೇದ್ಯವಾಗಿ ಅರ್ಪಿಸುವುದರಿಂದ ಗಣಪತಿ ಬೇಗನೆ ಪ್ರಸನ್ನನಾಗುತ್ತಾನೆ.
- ನಿಮ್ಮ ಮನೆಯಲ್ಲೂ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಬೇಕಾದರೆ, ಈ ಪವಿತ್ರ ಪಂಚಮುಖಿ ಗಣೇಶನ ಆರಾಧನೆಯನ್ನು ಇಂದಿನಿಂದಲೇ ಆರಂಭಿಸಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ