ಐಪಿಎಲ್ 2026 ರ 61 ನೇ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯುತ್ತಿದೆ. ಕಳೆದ ಐಪಿಎಲ್ ಫೈನಲ್ನಲ್ಲಿ ಮುಖಾಮುಖಿಯಾಗಿದ್ದ ಈ ಎರಡೂ ತಂಡಗಳು ಆ ಪಂದ್ಯದ ನಂತರ ಇದೇ ಮೊದಲ ಬಾರಿಗೆ ಎದುರು ಬದುರಾಗಿವೆ. ಒಂದೆಡೆ ಆರ್ಸಿಬಿ ಫೈನಲ್ನಲ್ಲಿ ಸೋಲಿಸಿದಂತೆ ಈ ಪಂದ್ಯದಲ್ಲೂ ಸೋಲಿಸಿ ಪ್ಲೇಆಫ್‌ಗೆ ಟಿಕೆಟ್ ಖಚಿತಪಡಿಸುವ ಇರಾದೆಯಲ್ಲಿದ್ದರೆ, ಇತ್ತ ಪಂಜಾಬ್ ಕಳೆದ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಪ್ಲೇಆಫ್ ರೇಸ್ನಲ್ಲಿ ಜೀವಂತವಾಗಿರಲು ಯತ್ನಿಸಲಿದೆ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ ಅಗ್ರಸ್ಥಾನದಲ್ಲಿದ್ದರೆ, ಪಂಜಾಬ್ ತಂಡ ನಾಲ್ಕನೇ ಸ್ಥಾನದಲ್ಲಿದೆ.