Headlines

RCB ಗೆಲ್ಲಬೇಕಿದ್ದರೆ ಈ ಎರಡು ಬದಲಾವಣೆ ಮಾಡಲೇಬೇಕು! – Kannada News | IPL 2026: 2 Crucial Changes RCB Must Make to Strengthen Playing XI

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಿಶ್ರ ಫಲಿತಾಂಶಗಳನ್ನು ಕಾಣುತ್ತಿದೆ. ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆರ್​ಸಿಬಿ, ದ್ವಿತೀಯಾರ್ಧದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ತಂಡದ ಪ್ಲೇಯಿಂಗ್ ಇಲೆವೆನ್​​ನಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ ಎಂಬ ಮಾತುಗಳು ಕೇಳಿ ಬಂದಿವೆ. ಆ ಬದಲಾವಣೆಗಳಾವುವು? ಅದರಿಂದ ಆರ್​ಸಿಬಿ ತಂಡಕ್ಕೆ ಆಗುವ ಲಾಭಗಳೇನು ಎಂದು ನೋಡುವುದಾದರೆ...  (PC: IPL)

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಿಶ್ರ ಫಲಿತಾಂಶಗಳನ್ನು ಕಾಣುತ್ತಿದೆ. ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಆರ್​ಸಿಬಿ, ದ್ವಿತೀಯಾರ್ಧದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ತಂಡದ ಪ್ಲೇಯಿಂಗ್ ಇಲೆವೆನ್​​ನಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ ಎಂಬ ಮಾತುಗಳು ಕೇಳಿ ಬಂದಿವೆ. ಆ ಬದಲಾವಣೆಗಳಾವುವು? ಅದರಿಂದ ಆರ್​ಸಿಬಿ ತಂಡಕ್ಕೆ ಆಗುವ ಲಾಭಗಳೇನು ಎಂದು ನೋಡುವುದಾದರೆ…  (PC: IPL)

ರೊಮಾರಿಯೊ ಶೆಫರ್ಡ್​: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ರೊಮಾರಿ ಶೆಫರ್ಡ್ ಈ ಬಾರಿ 10 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 55 ಎಸೆತಗಳನ್ನು ಎದುರಿಸಿದ ರೊಮಾರಿಯೊ ಕಲೆಹಾಕಿರುವುದು ಕೇವಲ 79 ರನ್​ಗಳು. ಅದು ಕೂಡ 143.64ರ ಸ್ಟ್ರೈಕ್ ರೇಟ್​ನಲ್ಲಿ. ಇನ್ನು ಬೌಲಿಂಗ್​ನಲ್ಲಿ 102 ಎಸೆತಗಳನ್ನು ಎಸೆದಿರುವ ಅವರು ಬರೋಬ್ಬರಿ 222 ರನ್ ನೀಡಿದ್ದಾರೆ. ಅಂದರೆ ಪ್ರತಿ ಓವರ್​ಗೆ 12.94ರ ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ. ಅಲ್ಲದೆ ಪಡೆದಿರುವುದು ಕೇವಲ 5 ವಿಕೆಟ್ ಮಾತ್ರ.  (PC: IPL)

ಜಿತೇಶ್ ಶರ್ಮಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅವರ ಬ್ಯಾಟ್ ಈವರೆಗೆ ಸದ್ದು ಮಾಡಿಲ್ಲ. ಆಡಿದ 10 ಪಂದ್ಯಗಳಲ್ಲಿ ಕೇವಲ 59 ಎಸೆತಗಳನ್ನು ಎದುರಿಸಲಷ್ಟೇ ಶಕ್ತರಾಗಿರುವ ಜಿತೇಶ್ ಕಲೆಹಾಕಿದ್ದು ಕೇವಲ 64 ರನ್​ಗಳು ಮಾತ್ರ. ಅಂದರೆ 10ರ ಸರಾಸರಿಯಲ್ಲಿ ಮಾತ್ರ ರನ್​ ಗಳಿಸಿದ್ದಾರೆ.  (PC: IPL)

ಅಂದರೆ ಇಲ್ಲಿ ಆಲ್​ರೌಂಡರ್ ಆಗಿ ರೊಮಾರಿಯೊ ಶೆಫರ್ಡ್ ಹಾಗೂ ಬ್ಯಾಟರ್ ಆಗಿ ಜಿತೇಶ್ ಶರ್ಮಾ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಈ ಇಬ್ಬರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡುವುದು ಸೂಕ್ತ. ಅವರ ಬದಲಿಗೆ... (PC: IPL)

ಅಂದರೆ ಇಲ್ಲಿ ಆಲ್​ರೌಂಡರ್ ಆಗಿ ರೊಮಾರಿಯೊ ಶೆಫರ್ಡ್ ಹಾಗೂ ಬ್ಯಾಟರ್ ಆಗಿ ಜಿತೇಶ್ ಶರ್ಮಾ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಈ ಇಬ್ಬರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡುವುದು ಸೂಕ್ತ. ಅವರ ಬದಲಿಗೆ… (PC: IPL)

ವೆಂಕಟೇಶ್ ಅಯ್ಯರ್: ರೊಮಾರಿಯೊ ಶೆಫರ್ಡ್ ಬದಲಿಗೆ ಆರ್​ಸಿಬಿ ವೆಂಕಟೇಶ್ ಅಯ್ಯರ್ ಅವರನ್ನು ಆಲ್​ರೌಂಡರ್​ ಆಗಿ ಕಣಕ್ಕಿಳಿಸುವುದು ಉತ್ತಮ. ವೆಂಕಿ ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಅದರ ಜೊತೆ ಒಂದೆರಡು ಓವರ್​ಗಳನ್ನು ಸಹ ಎಸೆಯಬಲ್ಲರು. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ರೊಮಾರಿಯೊ ಬದಲಿಗೆ ವೆಂಟಕೇಶ್ ಅಯ್ಯರ್​ಗೆ ಚಾನ್ಸ್ ನೀಡುವುದು ಉತ್ತಮ. (PC: IPL)

ಜೋರ್ಡನ್ ಕಾಕ್ಸ್​: ವಿಕೆಟ್ ಕೀಪರ್ ಜಿತೇಶ್ ಶರ್ಮಾ ಬದಲಿಗೆ ಆರ್​ಸಿಬಿ ಇಂಗ್ಲೆಂಡ್​ನ ಸ್ಫೋಟಕ ದಾಂಡಿಗ ಜೋರ್ಡನ್ ಕಾಕ್ಸ್ ಅವರನ್ನು ಕಣಕ್ಕಿಳಿಸಬಹುದು. ಕಾಕ್ಸ್ ಕೂಡ ವಿಕೆಟ್ ಕೀಪರ್ ಬ್ಯಾಟರ್ ಆಗಿರುವುದರಿಂದ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಮಿಡಲ್ ಆರ್ಡರ್‌ನಲ್ಲಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿರುವ ಕಾರಣ ಇವರು ತಂಡಕ್ಕೆ ಹೊಸ ಶಕ್ತಿ ತುಂಬಬಲ್ಲರು. ಜಿತೀಶ್‌ ಅವರ ಲಯ ತಪ್ಪಿರುವುದರಿಂದ ಕಾಕ್ಸ್ ಅವರನ್ನು ಕಣಕ್ಕಿಳಿಸುವುದು ತಂಡಕ್ಕೆ ಲಾಭದಾಯಕವಾಗಬಹುದು. (PC: IPL)

ಒಟ್ಟಾರೆಯಾಗಿ ಹೇಳುವುದಾದರೆ, ಆರ್​​ಸಿಬಿ ಕೇವಲ ಟಾಪ್-ಆರ್ಡರ್ ಬ್ಯಾಟರ್‌ಗಳ ಮೇಲೆ ಅವಲಂಬಿತವಾಗಿ ಪಂದ್ಯ ಗೆಲ್ಲುವ ಕಾಲ ಈಗ ಉಳಿದಿಲ್ಲ. ಮಧ್ಯಮ ಕ್ರಮಾಂಕದ ವೈಫಲ್ಯ ತಂಡಕ್ಕೆ ಪದೇ ಪದೇ ಮುಳುವಾಗುತ್ತಿದೆ. ಹೀಗಾಗಿ, ಜೋರ್ಡನ್ ಕಾಕ್ಸ್ ಮತ್ತು ವೆಂಕಟೇಶ್ ಅಯ್ಯರ್ ಅವರಂತಹ ಪ್ರತಿಭಾವಂತ ಆಟಗಾರರಿಗೆ ಅವಕಾಶ ನೀಡುವ ಮೂಲಕ ತಂಡದ ಬ್ಯಾಟಿಂಗ್ ಆಳವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ಈ ಎರಡು ಮಹತ್ವದ ಬದಲಾವಣೆಗಳು ತಂಡದ ಸಮತೋಲನವನ್ನು ಸುಧಾರಿಸುವುದಲ್ಲದೆ, 2026ರ ಐಪಿಎಲ್‌ನಲ್ಲಿ ಕಪ್ ಗೆಲ್ಲುವ ಆರ್​​ಸಿಬಿಯ ಕನಸಿಗೆ ಭದ್ರ ಬುನಾದಿ ಹಾಕಬಲ್ಲವು. ಹೀಗಾಗಿ ಆರ್​ಸಿಬಿ ತಂಡಕ್ಕೆ ಎರಡು ಬದಲಾವಣೆ ಅತ್ಯಗತ್ಯ. (PC: IPL)

Published On – 12:12 pm, Sat, 9 May 26

Source link

Leave a Reply

Your email address will not be published. Required fields are marked *