RCB vs CSK Turning Point: ಟಿಮ್ ಡೇವಿಡ್​ಗೆ ಜೀವದಾನ ನೀಡಿ ಕೆಟ್ಟ ಸಿಎಸ್​ಕೆ

RCB vs CSK Turning Point: ಟಿಮ್ ಡೇವಿಡ್​ಗೆ ಜೀವದಾನ ನೀಡಿ ಕೆಟ್ಟ ಸಿಎಸ್​ಕೆ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಐಪಿಎಲ್ 11ನೇ ಪಂದ್ಯದಲ್ಲಿ ಆರ್​ಸಿಬಿ ತಂಡದ ಸ್ಫೋಟಕ ದಾಂಡಿಗ ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 70 ರನ್ ಬಾರಿಸಿದರು. ಇವರ ಈ ಅಬ್ಬರದ ಬ್ಯಾಟಿಂಗ್​ನಿಂದ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ ಬರೋಬ್ಬರಿ 250 ರನ್ ಕಲೆಹಾಕಿತು. ಮಾತ್ರವಲ್ಲದೆ ತಂಡ ಕೊನೆಯ 5 ಓವರ್​ಗಳಲ್ಲಿ 90 ಕ್ಕೂ ಅಧಿಕ ರನ್ ಪೇರಿಸಿತು.

ವಾಸ್ತವವಾಗಿ ಟಿಮ್ ಡೇವಿಡ್ ಕೇವಲ 26 ರನ್ ಕಲೆಹಾಕಿದ್ದಾಗ ವಿಕೆಟ್ ಕೈಚೆಲ್ಲಿದ್ದರು. ಸಿಎಸ್​ಕೆ ವೇಗಿ ಅನ್ಶುಲ್ ಕಾಂಬೋಜ್ ಮಾಡಿದ 18ನೇ ಓವರ್​ನಲ್ಲಿ ಡೇವಿಡ್ ಕ್ಲೀನ್ ಬೌಲ್ಡ್ ಆಗಿದ್ದರು. ಆಗ ತಂಡದ ಮೊತ್ತ 199 ರನ್​ಗಳಾಗಿತ್ತು. ಆದರೆ ಕಾಂಬೋಜ್ ಮಾಡಿದ 18ನೇ ಓವರ್​ನ 5ನೇ ಎಸೆತ ನೋ ಬಾಲ್ ಆಗಿತ್ತು. ಇದರಿಂದ ಡೇವಿಡ್ ಔಟಾಗುವುದರಿಂದ ಪಾರಾದರು.

ಈ ಜೀವದಾನದ ಲಾಭ ಪಡೆದ ಡೇವಿಡ್ 19ನೇ ಓವರ್​ನಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 30 ರನ್ ಕಲೆಹಾಕಿದರು. ಇದರ ಜೊತೆಗೆ ತಮ್ಮ ಅರ್ಧಶತಕವನ್ನು ಪೂರೈಸಿದರು. ಹಾಗೆಯೇ 20ನೇ ಓವರ್​ನಲ್ಲೂ ಬೌಂಡರಿ ಬಾರಿಸಿದರು. ಅಂದರೆ ಕಾಂಬೋಜ್ ಮಾಡಿದ ಅದೊಂದು ನೋ ಬಾಲ್ ಸಿಎಸ್​ಕೆಗೆ 50 ಕ್ಕೂ ಅಧಿಕ ರನ್​ಗಳ ದಂಡ ವಿಧಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *