ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಕ್ಸರ್ಗಳ ಮಳೆ ಸುರಿಸಿ 29 ಎಸೆತಗಳಲ್ಲಿ 97 ರನ್ಗಳ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್ನಲ್ಲಿ 12 ಸಿಕ್ಸರ್ಗಳು ಮತ್ತು 5 ಬೌಂಡರಿಗಳನ್ನು ಬಾರಿಸಿದರು, ಆದರೆ ಸೂರ್ಯವಂಶಿ ಕೇವಲ 3 ರನ್ಗಳಿಂದ ಶತಕ ವಂಚಿತರಾದರು. ಅಬ್ಬರದ ಬ್ಯಾಟಿಂಗ್ ಮಾಡಿ ಸನ್ರೈಸರ್ಸ್ ಬೌಲರ್ಗಳನ್ನು ಹೈರಾಣಾಗಿಸಿದ ವೈಭವ್ ಔಟಾದ ಕೂಡಲೇ ಒಂದೆಡೆ ಸನ್ರೈಸರ್ಸ್ ಪಾಳಯದಲ್ಲಿ ಸಂತಸ ಮನೆ ಮಾಡಿದರೆ, ಇತ್ತ ರಾಜಸ್ಥಾನ್ ತಂಡದ ಅಭಿಮಾನಿಗಳ ಮುಖದಲ್ಲಿ ಬೇಸರ ಎದ್ದು ಕಾಣಿಸುತ್ತಿತ್ತು.
ವೈಭವ್ ಸೂರ್ಯವಂಶಿ 97 ರನ್ ಗಳಿಸಿ ಪ್ರಫುಲ್ ಹಿಂಗೇಗೆ ವಿಕೆಟ್ ಒಪ್ಪಿಸಿದಾಗ ಇಡೇ ಕ್ರೀಡಾಂಗಣವೇ ನಿರಾಶೆಗೊಂಡಿತು. ಇತ್ತ ಅಭಿಷೇಕ್ ಶರ್ಮಾ ಸೇರಿದಂತೆ ಕೆಲವು ಸನ್ರೈಸರ್ಸ್ ಹೈದರಾಬಾದ್ ಆಟಗಾರರು ವೈಭವ್ ಅವರ ಉತ್ತಮ ಇನ್ನಿಂಗ್ಸ್ಗಾಗಿ ಅವರನ್ನು ಅಭಿನಂದಿಸಿದರು. ಹಾಗೆಯೇ ಸ್ಟ್ಯಾಂಡ್ನಲ್ಲಿ ಕುಳಿತಿದ್ದ ಸನ್ರೈಸರ್ಸ್ ತಂಡದ ಮಾಲೀಕಿ ಕಾವ್ಯ ಮಾರನ್ ಕೂಡ ತಮ್ಮ ಆಸನದಿಂದಲೇ ಬೇಸರದ ಮುಖದಲ್ಲಿ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.