ಹಿಂದೂ ಧರ್ಮದಲ್ಲಿ ಶಿವನನ್ನು ವಿವಿಧ ರೂಪಗಳಲ್ಲಿ, ವಿಶೇಷವಾಗಿ ಶಿವಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಬೆಳ್ಳಿ, ಹಿತ್ತಾಳೆ, ಪಂಚಲೋಹ, ಕಲ್ಲು ಇತ್ಯಾದಿಗಳಿಂದ ಮಾಡಿದ ಶಿವಲಿಂಗಗಳನ್ನು ಪೂಜಿಸುವ ಪದ್ಧತಿ ಅನಾದಿ ಕಾಲದಿಂದಲೂ ಇದೆ. ಆದರೆ, ತಕ್ಷಣವೇ ಸಂಪೂರ್ಣ ಶಿವಾನುಗ್ರಹಕ್ಕೆ ಪಾತ್ರರಾಗಲು ಒಂದು ವಿಶೇಷವಾದ ಶಿವಲಿಂಗ ಪೂಜಾ ವಿಧಾನವಿದೆ, ಅದುವೇ ಪಾದರಸ ಶಿವಲಿಂಗ ಪೂಜೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಯಾರಿಗೆ ಜೀವನದಲ್ಲಿ ಸಂಕಷ್ಟಗಳು ಎದುರಾಗಿವೆಯೋ, ದಾರಿ ಕಾಣದೆ ದಿಕ್ಕು ತೋಚದಂತಾಗಿರುತ್ತದೆಯೋ ಅಂತಹವರಿಗೆ ಪಾದರಸ ಶಿವಲಿಂಗದ ಆರಾಧನೆಯು ಅತ್ಯಂತ ಪರಿಣಾಮಕಾರಿ ಎಂದು ನಂಬಲಾಗಿದೆ. ಯಾರು ಸತತವಾಗಿ 48 ದಿನಗಳ ಕಾಲ ಪಾದರಸ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ, ಅವರಿಗೆ ಎಂತಹದೇ ಸಂಕಷ್ಟಗಳಿದ್ದರೂ ಅವು ನಿವಾರಣೆಯಾಗಿ ಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಶಿವನು ಅಭಿಷೇಕ ಪ್ರಿಯನಾಗಿದ್ದಾನೆ ಎಂಬುದು ಇದರ ಹಿಂದಿನ ಮುಖ್ಯ ಕಾರಣ. ವಿಷ್ಣು ಅಲಂಕಾರ ಪ್ರಿಯ, ಗಣಪತಿ ನೈವೇದ್ಯ ಪ್ರಿಯ, ಭಾಸ್ಕರ ನಮಸ್ಕಾರ ಪ್ರಿಯರಾದಂತೆ, ಶಿವನಿಗೆ ಕೇವಲ ಸ್ವಲ್ಪ ನೀರನ್ನು ಅರ್ಪಿಸಿ ಪ್ರಾರ್ಥಿಸಿದರೆ ತಕ್ಷಣವೇ ಭೋಳಾಶಂಕರನು ಒಲಿಯುತ್ತಾನೆ.
ಪುರಾಣಗಳ ಪ್ರಕಾರ, ಚಿನ್ನದ ಶಿವಲಿಂಗವನ್ನು ಪೂಜಿಸುವುದರಿಂದ ದೊರೆಯುವ ಫಲಕ್ಕಿಂತ ಪಾದರಸ ಶಿವಲಿಂಗವನ್ನು ಪೂಜಿಸುವುದರಿಂದ ಒಂದು ಕೋಟಿ ಪಟ್ಟು ಹೆಚ್ಚಿನ ಫಲ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಹಿಂದಿನ ಜನ್ಮದ ಕರ್ಮಗಳನ್ನು, ಪಾಪಗಳನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಹೊಂದಿದೆ. ಯಾರು ಪ್ರತಿ ಸೋಮವಾರ ಸಂಧ್ಯಾಕಾಲದಲ್ಲಿ ಪಾದರಸ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಆ ಅಭಿಷೇಕದ ನೀರನ್ನು ತೀರ್ಥವಾಗಿ ಸ್ವೀಕರಿಸುತ್ತಾರೋ, ಅಂತಹವರ ಪೂರ್ವ ಜನ್ಮದ ಕರ್ಮಗಳು ಮತ್ತು ಪಾಪಗಳು ಕಡಿಮೆಯಾಗುತ್ತವೆ. ಇದು ಔಷಧಿ ಸೇವಿಸಿದಂತೆ ತಕ್ಷಣಕ್ಕೆ ಪರಿಹಾರ ನೀಡಿ, ಕ್ರಮೇಣ ಸಮಸ್ಯೆಗಳನ್ನು ನಿವಾರಿಸುತ್ತದೆ.
ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ
ಪಾದರಸ ಶಿವಲಿಂಗ ಪೂಜೆಯಿಂದ ಕೇವಲ ಶಿವನ ಅನುಗ್ರಹ ಮಾತ್ರವಲ್ಲದೆ, ಸರ್ವ ದೇವತೆಗಳ ಆಶೀರ್ವಾದವೂ ದೊರೆಯುತ್ತದೆ. ಶಾಸ್ತ್ರಗಳ ಪ್ರಕಾರ, ಈ ಶಿವಲಿಂಗವನ್ನು ಪೂಜಿಸುವುದರಿಂದ ಲಕ್ಷ್ಮಿ ಮತ್ತು ಕುಬೇರರ ಕೃಪೆಯೂ ಲಭಿಸುತ್ತದೆ. ಈ ಪಾದರಸ ಶಿವಲಿಂಗವನ್ನು ಮನೆಯಲ್ಲೂ ಕೂಡ ಇಟ್ಟು ಪೂಜಿಸಬಹುದು. ಅನಾರೋಗ್ಯದಿಂದ ಬಳಲುತ್ತಿರುವವರು ಈ ಶಿವಲಿಂಗದ ಅಭಿಷೇಕದ ನೀರನ್ನು ಸ್ನಾನದ ನೀರಿಗೆ ಸೇರಿಸಿ ಸ್ನಾನ ಮಾಡುವುದರಿಂದ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಪಾದರಸ ಶಿವಲಿಂಗ ಪೂಜೆಗೆ ಯಾವುದೇ ವಿಧಿವಿಧಾನಗಳಲ್ಲಿ ಅಥವಾ ಮಂತ್ರಗಳಲ್ಲಿ ವಿಶೇಷ ಮಾರ್ಪಾಡುಗಳಿಲ್ಲ. ಕೇವಲ ಶ್ರದ್ಧೆಯಿಂದ ನೀರಿನ ಅಭಿಷೇಕವನ್ನು ಮಾಡುವುದರಿಂದಲೇ ಶುಭ ಫಲಗಳು ದೊರೆಯುತ್ತವೆ ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ