
ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026) ರ 10ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮಣಸಿದ ಲಕ್ನೋ ಸೂಪರ್ಜೈಂಟ್ಸ್ ಈ ಆವೃತ್ತಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು. ಸನ್ರೈಸರ್ಸ್ ನೀಡಿದ 157 ರನ್ಗಳ ಗುರಿಯನ್ನು ಬೆನ್ನಟ್ಟಲು ಸಾಕಷ್ಟು ಕಷ್ಟಪಟ್ಟ ಲಕ್ನೋ, ನಾಯಕ ರಿಷಭ್ ಪಂತ್ ಅವರ ತಾಳ್ಮೆಯ ಆಟದಿಂದಾಗಿ ಕೊನೆಯ ಓವರ್ನಲ್ಲಿ ಗೆಲುವು ದಾಖಲಿಸಿತು. ಕೊನೆಯ ಓವರ್ವರೆಗೂ ರೋಚಕತೆಯಿಂದ ಕೂಡಿದ ಈ ಪಂದ್ಯವನ್ನು ಲಕ್ನೋ ತಂಡ ಗೆಲ್ಲುತ್ತಿದ್ದಂತೆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ತುಂಬಾ ಭಾವುಕರಾಗಿ ಕಾಣಿಸಿಕೊಂಡರು. ತಂಡದ ಗೆಲುವನ್ನು ಚಪ್ಪಾಳೆ ತಟ್ಟುತ್ತ ಸಂಭ್ರಮಿಸಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.