T20 World Cup 2026: ನೆದರ್ಲ್ಯಾಂಡ್ಸ್ ವಿರುದ್ಧ ತಿಣುಕಾಡಿ ಗೆದ್ದ ಪಾಕಿಸ್ತಾನ – Kannada News | 2026 T20 World Cup: Faheem Ashraf Heroics Lead Pakistan to Thrilling Win vs Netherlands

2026 ರ ಟಿ20 ವಿಶ್ವಕಪ್ ಇಂದಿನಿಂದ ಆರಂಭವಾಗಿದೆ. ಮೊದಲ ದಿನ ಮೂರು ಪಂದ್ಯಗಳು ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್ಲ್ಯಾಂಡ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಕೊನೆಯ ಓವರ್​ವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇತ್ತ 19ನೇ ಓವರ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ನೆದರ್ಲ್ಯಾಂಡ್ಸ್ ರೋಚಕ ಗೆಲುವಿನಿಂದ ವಂಚಿತವಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ಸ್ 147 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 18 ನೇ ಓವರ್ ವೇಳೆಗೆ ಸೋಲಿನ ಸನಿಹಕ್ಕೆ ತಲುಪಿತ್ತು. ಆದರೆ 19 ನೇ ಓವರ್‌ನಲ್ಲಿ ಫಹೀಮ್ ಅಶ್ರಫ್ ಮೂರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿ ತಂಡದ ಗೆಲುವು ಖಚಿತಪಡಿಸಿದರು. ಇದೇ ಓವರ್​ನಲ್ಲಿ ಅಶ್ರಫ್​ಗೆ ಜೀವದಾನವೂ ಸಿಕ್ಕಿತು. ಇದರ ಪರಿಣಾಮವಾಗಿ ಪಾಕಿಸ್ತಾನ 20 ನೇ ಓವರ್‌ನಲ್ಲಿ ಪಂದ್ಯ ಗೆದ್ದು ಗೆಲುವಿನೊಂದಿಗೆ ಅಭಿಯಾನವನ್ನು ಪ್ರಾರಂಭಿಸಿತು.

Source link

Leave a Reply

Your email address will not be published. Required fields are marked *