Headlines

TV9 ಬಿಗ್ ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್

TV9 ಬಿಗ್ ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್

ಚಾಮರಾಜನಗರ, (ಜೂನ್ 24): ಅದೆಷ್ಟೋ ಆದಿವಾಸಿಗಳು ಕರ್ನಾಟಕದಲ್ಲೂ ಸಹ ಬದುಕಿದ್ದು ಸತ್ತಂತೆ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಚಾಮರಾಜನಗರದ ಕಾಡಿನಲ್ಲಿ ವಾಸಿಸುತ್ತಿರುವ ಆನೆ ದಿಂಬ ಹಾಡಿಯ ಜನರಿಗೆ ಮೂಲಸೌಲಭ್ಯಗಳು, ರೇಷನ್ ಕಾರ್ಡ್​​ ಸೇರಿದಂತೆ ಇನ್ನಿತರ ಸರ್ಕಾರದ ಯೋಜನೆಗಳೇ ಸಿಗುತ್ತಿಲ್ಲ. ಕಳೆದ 10 ವರ್ಷಗಳಿಂದ ಹಾಡಿಯ ವಾಸಿಗಳು ರೇಷನ್ ಕಾರ್ಡ್ ಗಾಗಿ ಕಚೇರಿಯಿಂದ ಕಚೇರಿ ಅಲೆದು ರೋಸಿ ಹೋಗಿದ್ದರು. ಆದರೂ ರೇಷನ್ ಕಾರ್ಡ್​ ಸಿಕ್ಕಿಲಲ್. ಹೀಗಾಗಿ ಈ ಬಗ್ಗೆ ನಿಮ್ಮ ಟಿವಿ9, ಆದಿವಾಸಿ ಸೋಲಿಗರು ಶೀರ್ಷಿಕೆ ಅಡಿ ಸುದ್ದಿ ಬಿತ್ತರಿಸಿತ್ತು. ಈ ಸುದ್ದಿ ಬೆನ್ನಲ್ಲೇ ಆದಿವಾಸಿಗಳ ಹೊಟ್ಟೆಗೆ ಅನ್ನ ಸಿಕ್ಕಿದೆ. ಹೌದು…ಟಿವಿ9 ವರದಿ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವರದಿ ಕೇಳಿದ್ದಾರೆ. ಅಲ್ಲದೇ ಅಧಿಕಾರಿ ವರ್ಗ, ಆನೆದಿಂಬ ಹಾಡಿಗೆ ದೌಡಾಯಿಸಿದ್ದು, ರೇಷನ್ ಕಾರ್ಡ್​ ನೀಡದಿದ್ದಕ್ಕೆ ಟ್ರೈಬಲ್ ಆಫೀಸರ್ ಬಿಂದ್ಯಾಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ರೇಷನ್ ಕಾರ್ಡ್​ ನೀಡುವ ಭರವಸೆ ನೀಡಲಾಗಿದ್ದು, ಸದ್ಯಕ್ಕೆ ಜಿಲ್ಲಾಡಳಿತ, 10 ಕುಟುಂಬಕ್ಕೆ ತಾತ್ಕಾಲಿಕ ದಿನಸಿ ವ್ಯವಸ್ಥೆ ಮಾಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *