
ನಾಡಿನೆಲ್ಲೆಡೆ ಯುಗಾದಿ (Ugadi) ಹಬ್ಬದ ಸಂಭ್ರಮ, ಹಿಂದೂಗಳ ಪಾಲಿನ ವರ್ಷದ ಮೊದಲ ಹಬ್ಬ. ಯುಗಾದಿ ಹಬ್ಬ ಹಿಂದೂಗಳ ಪಾಲಿನ ವರ್ಷದ ಮೊದಲ ಹಬ್ಬ. ಹೊಸ ವರ್ಷದ ಆರಂಭವನ್ನು ಸೂಚಿಸುವ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬದ ದಿನ ಹೊಸ ಬಟ್ಟೆ ತೊಟ್ಟು, ಮನೆಯನ್ನು ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಿ, ಪ್ರತಿಯೊಬ್ಬರೂ ಬೇವು ಬೆಲ್ಲವನ್ನು ಹಂಚುತ್ತಾರೆ.ಇಂತಹ ಸಂಭ್ರಮದ ಗಳಿಗೆಯಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಮನಸಾರೆ ಹಬ್ಬದ ಶುಭಾಶಯಗಳನ್ನು ಕೋರಲು ಬಯಸಿದರೆ ನಿಮಗಾಗಿ ಇಲ್ಲಿದೆ ಅರ್ಥಪೂರ್ಣ ಸಂದೇಶಗಳು.
ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಹಬ್ಬದ ಶುಭಾಶಯಗಳನ್ನು ತಿಳಿಸಿ:
- ಹೊಸತನವ ಹೊತ್ತು ಯುಗಾದಿ ಬಂದಿದೆ, ಈ ಯುಗಾದಿ ಎಲ್ಲರ ಬಾಳಲ್ಲಿ ಹೊಸ ಹರ್ಷ ತರಲಿ, ಬದುಕಿನಲ್ಲಿ ನೆಮ್ಮದಿ ಇರುವಂತೆ ಮಾಡಲಿ… ಯುಗಾದಿ ಹಬ್ಬದ ಶುಭಾಶಯಗಳು.
- ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ, ಬೇವು ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ, ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
- ಬೇವು ಬೆಲ್ಲ ಸವಿಯುತ್ತ ಕಹಿ ನೆನಪು ಮರೆಯುತ, ಸಿಹಿ ನೆನಪು ಚಿಗುರಲಿ, ನೀವು ಕಂಡ ಕನಸುಗಳೆಲ್ಲಾ ನನಸಾಗಲಿ, ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
- ಹೊಸ ವರ್ಷವು ನಿಮ್ಮೆಲ್ಲಾ ಕನಸುಗಳನ್ನು ನನಸು ಮಾಡಲಿ, ಶಾಂತಿ, ಸಮೃದ್ಧಿ, ಸಂತೋಷ ತರಲಿ. ಯುಗಾದಿ ಹಬ್ಬದ ಶುಭಾಶಯಗಳು.
- ಬೇವು ಬೆಲ್ಲದಂತೆ ನೋವು-ನಲಿವು ಬೆರೆಯಲಿ, ಸುಖ, ಶಾಂತಿ, ಸಂತೋಷ ತುಂಬಿದ ಬದುಕು ನಿಮ್ಮದಾಗಲಿ, ಹೊಸ ವರ್ಷದ ಶುಭಾಶಯಗಳು.
- ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ… ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
- ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲಿ ನೀವು ಕಂಡ ಕನಸು ನನಸಾಗಲಿ, ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
- ಬದುಕಿನ ಕಷ್ಟಗಳೆಂಬ ಕಹಿ ದೂರವಾಗಲಿ, ಬರೀ ಖುಷಿ ಸಿಹಿಯಷ್ಟೇ ತುಂಬಿರಲಿ. ಎಲ್ಲರಿಗೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು.
- ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ, ನಿಮ್ಮ ಬಾಳಲ್ಲಿ ಹೊಸ ಚೇತನ, ಉತ್ಸಾಹ, ನೆಮ್ಮದಿ ಇರಲಿ ಯುಗಾದಿ ಹಬ್ಬದ ಶುಭಾಶಯಗಳು. ಯುಗಾದಿ ಹಬ್ಬದ ಸಂಭ್ರಮದಲ್ಲಿ ನೋವೆಲ್ಲಾ ಬತ್ತು ಹೋಗಲಿ, ನಿಮ್ಮೆಲ್ಲರ ಬಾಳಲ್ಲಿ ಸಂತೋಷ ಚಿಮ್ಮಲಿ, ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
- ಹಳೆಯ ನೋವನ್ನೆಲ್ಲಾ ಮರೆಸಿ, ಹೊಸ ಆಶಯಗಳ ಕೊಟ್ಟು ಎಲ್ಲರಿಗೂ ಶುಭವ ತರಲಿ ಯುಗಾದಿ, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
- ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು.
- ಬೇವು ಬೆಲ್ಲ ತಿಂದು ಒಳ್ಳೆ ಮಾತಾಡಿ. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
- ಬೇವು ಬೆಲ್ಲದಂತೆ ಜೀವನದಲ್ಲಿ ಬರುವ ಕಹಿ, ಸಿಹಿಗಳನ್ನು ಸಮನಾಗಿ ಸ್ವೀಕರಿಸೋಣ, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
- ನಿಮ್ಮ ಬಾಳಲ್ಲಿ ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಾಗಲಿ. ಸುಖ, ಶಾಂತಿ, ಸಮೃದ್ಧಿ, ಯಶಸ್ಸು ನಿಮ್ಮ ಜೀವನದಲ್ಲಿ ಹೆಚ್ಚಾಗಲಿ. ಯುಗಾದಿಯ ಶುಭಾಶಯಗಳು.
- ಯುಗಾದಿಯ ಸೂರ್ಯನ ಬೆಳಕು ಅಂಧಕಾರವನ್ನು ಹೋಗಲಾಡಿಸಿ, ನಿಮಗೆ ಉಜ್ವಲ ಭವಿಷ್ಯದ ಹಾದಿಯನ್ನು ಬೆಳಗಿಸಲಿ, ಯುಗಾದಿ ಹಬ್ಬದ ಶುಭಾಶಯಗಳು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ