Vasthu Tips: ಸೌಂದರ್ಯಕ್ಕೆ ಮಾತ್ರವಲ್ಲ, ಸಮೃದ್ಧಿಗೂ ಅಲೋವೆರಾ; ಈ ದಿಕ್ಕಿನಲ್ಲಿ ಗಿಡವಿದ್ದರೆ ಬದಲಾಗುತ್ತೆ ನಿಮ್ಮ ಲಕ್!

Vasthu Tips: ಸೌಂದರ್ಯಕ್ಕೆ ಮಾತ್ರವಲ್ಲ, ಸಮೃದ್ಧಿಗೂ ಅಲೋವೆರಾ; ಈ ದಿಕ್ಕಿನಲ್ಲಿ ಗಿಡವಿದ್ದರೆ ಬದಲಾಗುತ್ತೆ ನಿಮ್ಮ ಲಕ್!

ಅಲೋವೆರಾ ಎಂದರೆ ತಕ್ಷಣ ನೆನಪಾಗುವುದು ಚರ್ಮ ಮತ್ತು ಕೂದಲಿನ ಸೌಂದರ್ಯ. ಆದರೆ, ಭಾರತೀಯ ಪರಂಪರೆ ಮತ್ತು ವಾಸ್ತು ಶಾಸ್ತ್ರದಲ್ಲಿ ಅಲೋವೆರಾಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಇದನ್ನು ಲಕ್ಷ್ಮಿ ದೇವಿಯ ಸಾಕಾರ ರೂಪವೆಂದು ಪರಿಗಣಿಸಲಾಗಿದ್ದು, ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ ಆರ್ಥಿಕ ಸಂಕಷ್ಟಗಳು ದೂರವಾಗಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ.

ಪುರಾಣಗಳಲ್ಲಿ ಮರ-ಗಿಡಗಳ ಮಹತ್ವ:

ದ್ವಾಪರ ಯುಗದಲ್ಲಿ ಶ್ರೀಕೃಷ್ಣನು ಬಲರಾಮನಿಗೆ ಗಿಡಮರಗಳ ಶ್ರೇಷ್ಠತೆಯನ್ನು ವಿವರಿಸುತ್ತಾ, “ಪ್ರತಿಯೊಂದು ಸಸ್ಯವೂ ಮನುಷ್ಯನಿಗೆ ಉಪಯುಕ್ತವಾಗಿದ್ದು, ಅವು ದೇವರಿಗೆ ಸಮಾನ” ಎಂದು ಹೇಳಿದ್ದಾನೆ. ಮರಗಳು ಕೆಟ್ಟ ಗಾಳಿಯನ್ನು ಹೀರಿಕೊಂಡು ನಮಗೆ ಜೀವವಾಯುವನ್ನು ನೀಡುವ ಮೂಲಕ ನಮ್ಮನ್ನು ರಕ್ಷಿಸುತ್ತವೆ. ಮರಗಳನ್ನು ಪ್ರೀತಿಸುವವನು ಭೂಮಿಯ ಮೇಲೆ ಸುಖವಾಗಿ ಬಾಳುತ್ತಾನೆ ಎಂಬುದು ಶ್ರೀಕೃಷ್ಣನ ನುಡಿ.

ಅಲೋವೆರಾದಲ್ಲಿ ಮುಕ್ಕೋಟಿ ದೇವತೆಗಳ ವಾಸ:

ಶಾಸ್ತ್ರಗಳ ಪ್ರಕಾರ ಅಲೋವೆರಾ ಗಿಡದ ಪ್ರತಿಯೊಂದು ಮುಳ್ಳು ಒಬ್ಬೊಬ್ಬ ದೇವತೆಯ ಶಿರಸ್ಸಿಗೆ ಸಮಾನ. ಈ ಸಸ್ಯದಲ್ಲಿ ತ್ರಿಮೂರ್ತಿಗಳು ಸೇರಿದಂತೆ ಮುಕ್ಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಮನೆಯಲ್ಲಿ ಈ ಗಿಡವಿದ್ದರೆ ಸಂಪತ್ತಿನ ಕೊರತೆಯಾಗುವುದಿಲ್ಲ ಮತ್ತು ಎಂಟು ಬಗೆಯ ಆಶೀರ್ವಾದಗಳು ಲಭಿಸುತ್ತವೆ. ಇದಲ್ಲದೇ ಅಲೋವೆರಾ ತಿರುಳನ್ನು ಆಯುರ್ವೇದದಲ್ಲಿ ಸಂಜೀವಿನಿ ಎನ್ನಲಾಗುತ್ತದೆ. ಇದನ್ನು ಹಸುವಿನ ಹಾಲಿನೊಂದಿಗೆ ಸೇವಿಸುವುದರಿಂದ ತೂಕ ಇಳಿಕೆಯಾಗುತ್ತದೆ ಮತ್ತು ಅನೇಕ ರೋಗಗಳು ನಿಯಂತ್ರಣಕ್ಕೆ ಬರುತ್ತವೆ.

ದುಷ್ಟ ಶಕ್ತಿಗಳ ನಿವಾರಣೆಗೆ ಅಲೋವೆರಾ ತಂತ್ರ:

ಮನೆಗೆ ತಗುಲುವ ದೃಷ್ಟಿ ಅಥವಾ ನಕಾರಾತ್ಮಕ ಶಕ್ತಿಗಳನ್ನು ತಡೆಯಲು ಅಲೋವೆರಾ ಅತ್ಯಂತ ಪರಿಣಾಮಕಾರಿ. ಅಮಾವಾಸ್ಯೆಯ ದಿನ ಒಂದು ಅಲೋವೆರಾ ಗಿಡವನ್ನು ಬೇರುಸಹಿತ ತಂದು, ಸ್ವಚ್ಛಗೊಳಿಸಿ, ಅರಿಶಿನ-ಕುಂಕುಮ ಮತ್ತು ಶ್ರೀಗಂಧದಿಂದ ಅಲಂಕರಿಸಿ ದೇವರಿಗೆ ಅರ್ಪಿಸಬೇಕು. ಮರುದಿನ (ಪಾಡ್ಯಮಿ) ಈ ಗಿಡವನ್ನು ದಾರದ ಸಹಾಯದಿಂದ ಮನೆಯ ಹೊಸ್ತಿಲಿನ ಬಲಭಾಗಕ್ಕೆ ಕಟ್ಟಬೇಕು. ಇದು ಮನೆಗೆ ಬರುವ ದುಷ್ಟ ಕಣ್ಣು ಮತ್ತು ಕೆಟ್ಟ ಆಲೋಚನೆಗಳನ್ನು ಹೀರಿಕೊಳ್ಳುತ್ತದೆ. ಪ್ರತಿ ತಿಂಗಳು ಅಮಾವಾಸ್ಯೆಯಂದು ಈ ಸಸ್ಯವನ್ನು ಬದಲಾಯಿಸುವುದು ಉತ್ತಮ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿರಬೇಕು?

ಅಲೋವೆರಾ ಸಸ್ಯವು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಅದನ್ನು ಸರಿಯಾದ ದಿಕ್ಕಿನಲ್ಲಿಡುವುದು ಮುಖ್ಯ. ವಾಸ್ತು ತಜ್ಞರ ಪ್ರಕಾರ, ಅಲೋವೆರಾವನ್ನು ಮನೆಯ ಈಶಾನ್ಯ (North-East) ಭಾಗದಲ್ಲಿ ಇರಿಸುವುದು ಶ್ರೇಷ್ಠ. ಈ ಸಸ್ಯವನ್ನು ನೇತುಹಾಕುವಾಗ ಬೇರುಗಳು ಮೇಲ್ಮುಖವಾಗಿ ಮತ್ತು ಎಲೆಗಳು ಕೆಳಮುಖವಾಗಿ ಇರುವಂತೆ ಜೋಡಿಸುವುದು ವಾಸ್ತು ದೋಷಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೀಗೆ ಮಾಡುವುದರಿಂದ ವೈವಾಹಿಕ ಸಮಸ್ಯೆಗಳು, ಆರ್ಥಿಕ ಮುಗ್ಗಟ್ಟು ಮತ್ತು ಗ್ರಹಗತಿಗಳ ಕೆಟ್ಟ ಪ್ರಭಾವಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *