Headlines

Video: ಅಮೆರಿಕದಿಂದ ಮನೆಗೆ ಮರಳಿದ ಮಗಳು, ಯುವತಿಯ ಸರ್ಪ್ರೈಸ್ ವಿಸಿಟ್‌ಗೆ ಮನೆ ಮಂದಿ ಭಾವುಕ – Kannada News | Parents shed tears upon seeing their daughter return home from America without giving any clues

ಹೆತ್ತವರು ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂದು ಓದಿಗಾಗಿ, ಉದ್ಯೋಗಕ್ಕಾಗಿ ದೂರದ ಊರಿಗೆ ಕಳುಹಿಸಿಕೊಡುತ್ತಾರೆ. ಮಕ್ಕಳು ಮನೆಗೆ ಬರುತ್ತಾರೆ ಎಂದು ತಿಳಿದರೆ ಅವರ ಖುಷಿಗೆ ಪಾರಾವೇ ಇರಲ್ಲ. ಆದರೆ ಯುವತಿಯೊಬ್ಬಳು ಮನೆ ಮಂದಿಗೆ ಯಾವುದೇ ರೀತಿ ಸುಳಿವು ನೀಡದೇನೇ ಮೂರು ವರ್ಷಗಳ ಬಳಿಕ ಅಮೆರಿಕದಿಂದ (America) ಮನೆಗೆ ಮರಳಿದ್ದಾಳೆ. ಆಕೆಯನ್ನು ಕಂಡ ಮನೆ ಮಂದಿಯೆಲ್ಲರೂ ಖುಷಿಯಿಂದ ಕುಣಿದಾಡಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರ ಕಣ್ಣು ತುಂಬಿ ಬಂದಿದೆ.

ಮೈತ್ರಿ ಪಟೇಲ್ (Maitri Patel) ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತಕ್ಕೆ ಮರಳುವ ವಿಡಿಯೋ ಹಂಚಿಕೊಳ್ಳಲಾಗಿದೆ. ಇದು ಅದ್ಭುತ ಕ್ಷಣಗಳು. ಈ ಪ್ರತಿಕ್ರಿಯೆಗಳು ತುಂಬಾ ಅಮೂಲ್ಯ! ಈ ಕ್ಷಣಕ್ಕೆ ಸಾಕ್ಷಿಯಾಗಲು ತುಂಬಾ ಸಮಯ ಕಾಯುತ್ತಿದ್ದೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್ ನಲ್ಲಿ ಈ ಯುವತಿಯೂ ಅಮೆರಿಕದಿಂದ ಭಾರತಕ್ಕೆ ಮರಳುವುದನ್ನು ಕಾಣಬಹುದು. ಮೂರು ವರ್ಷಗಳ ಬಳಿಕ ಮನೆಗೆ ಮರಳಿದ್ದು ಸರ್ಪ್ರೈಸ್ ವಿಸಿಟ್ ನೀಡಿದ್ದಾಳೆ. ಸುಳಿವು ನೀಡದೇ ಮನೆಗೆ ಬಂದ ಮಗಳನ್ನು ಕಂಡು ಹೆತ್ತವರು ಹಾಗೂ ಮನೆ ಮಂದಿಯೆಲ್ಲಾ ಖುಷಿಯಿಂದಲೇ ಅಪ್ಪಿ ಮುದ್ದಾಡಿದ್ದಾರೆ. ಯುವತಿಯ ಭಾವನಾತ್ಮಕ ಪುನರ್ಮಿಲನದ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಭಾರತಕ್ಕೆ ಹೋಲಿಸಿದ್ರೆ ಸ್ವಿಟ್ಜರ್‌ಲ್ಯಾಂಡ್‌ ಬಲು ದುಬಾರಿ; ಕಾಸ್ಟ್ಲಿ ಜೀವನಶೈಲಿ ಬಗ್ಗೆ ವಿವರಿಸಿದ ದಂಪತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮನೆ ಮಂದಿಯ ಖುಷಿಗೆ ಪಾರಾವೇ ಇಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮನೆಗೆ ಮರಳುವಾಗ ಆಗುವ ಖುಷಿಯೇ ಬೇರೆ, ವಿವರಿಸಲು ಪದಗಳು ಸಾಲಲ್ಲ ಎಂದಿದ್ದಾರೆ. ಇನ್ನೊಬ್ಬರು, ಈ ದೃಶ್ಯ ನೋಡುವಾಗ ಕಣ್ಣೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *