ಅಜ್ಜ ಅಜ್ಜಿಯಂದಿರ (grandparents) ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ. ಮಕ್ಕಳಿದ್ದಾಗ ತಮಗೆ ಬೇಕಾದದ್ದು ಕೊಡಿಸಿದ್ದ ಈ ಹಿರಿಜೀವಗಳನ್ನು ವಯಸ್ಸಾದ ಕಾಲಘಟ್ಟದಲ್ಲಿ ನೋಡಿಕೊಳ್ಳುವುದು ಕರ್ತವ್ಯ. ಈ ಕೆಲಸವನ್ನು ಮೊಮ್ಮಗನು ಚಾಚು ತಪ್ಪದೇ ಮಾಡಿದ್ದಾನೆ. ಹೌದು, 100ರ ಹರೆಯದ ಅಜ್ಜನನ್ನು ತನ್ನ ಕಾರಿನಲ್ಲಿ ಹೊರಗಡೆ ಕರೆದುಕೊಂಡು ಹೋಗಿದ್ದಾನೆ. ಊರು ಸುತ್ತಿಸಿ ಅಜ್ಜನಿಗೆ ತಿಂಡಿ ಕೊಡಿಸಿದ್ದು ಅವರೊಂದಿಗೆ ಅಮೂಲ್ಯ ಸಮಯ ಕಳೆದಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಅಜ್ಜ ಅಜ್ಜಿಯನ್ನು ನೆನಪಿಸಿಕೊಂಡಿದ್ದಾರೆ.
ನಯನ್ ಸೂರ್ಯ (Nayan surya) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಯುವಕನೊಬ್ಬ ತನ್ನ 100ರ ಹರೆಯದ ಅಜ್ಜನನ್ನು ಊರು ಸುತ್ತಿಸಲು ಕರೆದುಕೊಂಡು ಹೋಗಿದ್ದಾನೆ. ಇಲ್ಲಿ ನೀವು ತನ್ನ ಮೊಮ್ಮಕ್ಕಳ ಜತೆಗೆ ಕಾರಿನಲ್ಲಿ ತೆರಳುತ್ತಿರುವ ಅಜ್ಜನನ್ನು ಕಾಣಬಹುದು. ಇದೇ ವೇಳೆ ಹೋಟೆಲ್ಗೆ ಕರೆದುಕೊಂಡು ಹೋಗಿ ಚಹಾ ಹಾಗೂ ತಿಂಡಿಯನ್ನು ಕೊಡಿಸಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಮನೆಗೆ ಮರಳುತ್ತಿದ್ದಂತೆ ಅಜ್ಜಿಯನ್ನು ಕಂಡು ಕುಣಿದು ಕುಪ್ಪಳಿಸಿದ ಯುವಕ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಜ್ಜ ಅಜ್ಜಿಯೊಂದಿಗೆ ಅಮೂಲ್ಯ ಸಮಯ ಕಳೆಯುವ ನೀವೇ ಪುಣ್ಯವಂತರು ಎಂದಿದ್ದಾರೆ. ಮತ್ತೊಬ್ಬರು, ಹಿರಿಜೀವಕ್ಕೆ ಎಷ್ಟು ಖುಷಿಯಾಗಿರಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ವಿಡಿಯೋ ನೋಡಿ ಖುಷಿ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ