Headlines

Video: ಕಾಗೆಯನ್ನು ಮಡಿಲಿನಲ್ಲಿ ಮಲಗಿಸಿ ಮಗುವಿನಂತೆ ಮುದ್ದಿಸಿದ ಮಹಿಳೆ – Kannada News | Woman cuddles a crow while it lies on her lap, video goes viral

ಬಹುತೇಕರ ಮನೆಯಲ್ಲಿ ನಾಯಿ, ಬೆಕ್ಕು, ದನ, ಕೋಳಿ ಹೀಗೆ ಈ ಪ್ರಾಣಿ ಪಕ್ಷಿಗಳನ್ನು ಸಾಕುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬರು ಮಹಿಳೆ ಕಾಗೆಯನ್ನು (crow) ಮುದ್ದು ಮಾಡಿದ್ದಾರೆ. ಹೌದು, ಈ ಕಾಗೆಗಳು ಮನುಷ್ಯರನ್ನು ಕಂಡರೆ ದೂರ ಓಡುವುದರ ನಡುವೆ ಈ ದೃಶ್ಯ ಇದಕ್ಕೆ ವ್ಯತಿರಿಕ್ತವಾಗಿದೆ. ಮಹಿಳೆ ಹಾಗೂ ಕಾಗೆಯ ನಡುವಿನ ನಿಷ್ಕಲ್ಮಶ ಬಾಂಧವ್ಯದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

ವೆಲ್ಲು (Wellu) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋಗೆ ಇಂತಹ ಕೆಲಸಗಳನ್ನು ಕೇವಲ ಭಾರತೀಯ ಅಮ್ಮಂದಿರು ಮಾತ್ರ ಮಾಡಲು ಸಾಧ್ಯ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮಹಿಳೆಯೊಬ್ಬರು ಕಾಗೆಯನ್ನು ಮುದ್ದಿಸುತ್ತಿರುವುದನ್ನು ಕಾಣಬಹುದು. ಅಂಗಳದಲ್ಲಿ ಕಾಗೆಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಅದಕ್ಕೆ ಮಸಾಜ್ ಮಾಡುತ್ತಿದ್ದಾರೆ. ಕಾಗೆ ಈ ಮಹಿಳೆಗೆ ಭಯ ಪಡದೇ ಆರಾಮದಾಯಕವಾಗಿ ಮಲಗಿಕೊಂಡಿದೆ. ಮಹಿಳೆ ಕಾಗೆಗೆ ಕಚಗುಳಿ ಇಡುತ್ತಿದ್ದಂತೆ ಪ್ರತಿಕ್ರಿಯಿಸಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕೊಕ್ಕು ಮುರಿದುಕೊಂಡು ಆಹಾರ ತಿನ್ನಲು ಕಷ್ಟಪಡುತ್ತಿದ್ದ ಹಕ್ಕಿಯ ನೆರವಿಗೆ ಬಂದ ಮತ್ತೊಂದು ಪಕ್ಷಿ

ಈ ವಿಡಿಯೋ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನನ್ನ ಕಣ್ಣನ್ನು ನಂಬಲು ಆಗುತ್ತಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಭಾರತದ ಯಾವುದೇ ಪ್ರಾಣಿ ಪಕ್ಷಿಗಳೇ ಇರಲಿ, ಅವುಗಳು ಸಾಕು ಪ್ರಾಣಿಗಳಾಗುತ್ತವೆ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ. ಮತ್ತೊಬ್ಬರು, ಕಾಗೆಗೆ ಈ ಮಹಿಳೆಗೆ ಎಷ್ಟು ನಂಬಿಕೆಯಿದೆ ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *