ಹುಟ್ಟಿದ ಮಕ್ಕಳು (little kids) ಕೂಡ ಮೊದಲು ಈ ಮೊಬೈಲ್ ನ್ನೇ ಹುಡುಕುತ್ತಾರೆ. ಇನ್ನು ಮಕ್ಕಳು ಅತ್ತರೆ, ಊಟ ಮಾಡಲ್ಲ ಅಂತ ಹಠ ಮಾಡಿದ್ರೆ ಪೋಷಕರು ಮೊಬೈಲ್ ಕೊಟ್ಟು ಸಮಾಧಾನ ಪಡಿಸ್ತಾರೆ. ನೀವು ನಿಮ್ಮ ಮಕ್ಕಳಿಗೆ ಫೋನ್ ಕೊಟ್ಟು ಸಮಾಧಾನ ಪಡಿಸುವ ಮುನ್ನ ಈ ಸ್ಟೋರಿ ಓದೋದು ಒಳ್ಳೆಯದು. ಹೌದು, ಬೋಟಿಂಗ್ ಗೆ ಹೋಗಿದ್ದ ವೇಳೆ ಮಹಿಳೆ ಪುಟಾಣಿಯನ್ನು ಸಮಾಧಾನ ಪಡಿಸಲು ತನ್ನ ಕೈಯಲ್ಲಿದ್ದ ಐಫೋನ್ ಕೊಟ್ಟಿದ್ದಾಳೆ. ಆದರೆ ಪುಟ್ಟ ಹುಡುಗನು ತನ್ನ ಕೈಯಲ್ಲಿದ್ದ ಫೋನ್ ನೀರಿಗೆ ಎಸೆದಿರುವ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಒಂದು ಕ್ಷಣ ಶಾಕ್ ಆಗಿದ್ದಾರೆ.
ಯಜ್ಞಶ್ರೀ (@yajnashri) ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಬೋಟಿಂಗ್‌ಗೆ ತೆರಳಿದ್ದ ತಾಯಿ ತನ್ನ ಪುಟ್ಟ ಮಗುವನ್ನು ಸಮಾಧಾನಪಡಿಸಲು ಐಫೋನ್ ಕೈಗೆ ಕೊಡುವುದನ್ನು ಕಾಣಬಹುದು. ಕೈಯಲ್ಲಿ ಫೋನ್ ಹಿಡಿದು ಆಟವಾಡುತ್ತಿದ್ದ ಪುಟ್ಟ ಕಂದಮ್ಮ ನೋಡ ನೋಡುತ್ತಿದ್ದಂತೆ ನದಿಗೆ ಎಸೆದಿದೆ. ಮಹಿಳೆ ಮೊಬೈಲ್‌ನ್ನು ಕೈಯಲ್ಲಿ ಹಿಡಿಯಲು ಪ್ರಯತ್ನಿಸುತ್ತಿದ್ದಂತೆ ನೀರಿಗೆ ಬಿದ್ದಿದೆ. ಮಗನ ಕೆಲಸ ನೋಡಿ ಮಹಿಳೆ ಕೆಲ ಕಾಲ ಗಾಬರಿಗೊಂಡು ಕುಳಿತಿರುವ ದೃಶ್ಯವನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
Kid throws his mom’s iPhone into the lake during a boat ride 😂 pic.twitter.com/Bg22E4J2Vs
— Tehxi (@yajnshri) June 18, 2026
ಇದನ್ನೂ ಓದಿ: ಚಪಾತಿ ಮಾಡಲು ಹೋಗಿ ಮೈ ತುಂಬಾ ಹಿಟ್ಟು ಮೆತ್ತಿಕೊಂಡ ಪುಟಾಣಿ
ಈ ವಿಡಿಯೋ 1.2 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮೊಬೈಲ್ ಗೆ ದಾಸರಾಗಿರುವ ಹೆತ್ತವರಿಗೆ ಈ ರೀತಿಯೇ ಬುದ್ಧಿ ಕಲಿಸಬೇಕು ಎಂದಿದ್ದಾರೆ. ಮತ್ತೊಬ್ಬರು, ಮಗುವಿಗೆ ಲೈಫ್ ಜಾಕೆಟ್ ಹಾಕಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಬೋಟಿಂಗ್ ಗೆ ಹೋಗುವಾಗ ಲೈಫ್ ಜಾಕೆಟ್ ನಂತಹ ಸುರಕ್ಷತಾ ಸಾಧನಗಳನ್ನು ಬಳಸುವುದು ಕಡ್ಡಾಯ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ