Headlines

Video: ಗುರಗಾಂವ್‌ನಿಂದ ಬೆಂಗಳೂರಿಗೆ ಸ್ಥಳಾಂತರ; ಹೊಸ ಬಾಡಿಗೆ ಮನೆಯ ಬಗ್ಗೆ ಮಹಿಳೆ ಹೇಳಿದ್ದೇನು ಗೊತ್ತಾ? – Kannada News

ಬದುಕು ನಿಂತ ನೀರಲ್ಲ, ಸದಾ ಹರಿಯುತ್ತಿರಬೇಕು. ಶಿಕ್ಷಣ, ಉದ್ಯೋಗ ಹುಟ್ಟೂರಿನಿಂದ ಅಪರಿಚಿತ ಊರಿಗೆ ತೆರಳುವುದು ಅನಿರ್ವಾಯವಾಗುತ್ತದೆ. ಆದರೆ ದಿನ ಕಳೆದಂತೆ ಅಪರಿಚಿತ ಊರು, ಅಲ್ಲಿನ ಜನರು ನಮ್ಮವರಾಗಿ ಬಿಡುತ್ತಾರೆ. ಇದೀಗ ಮಹಿಳೆಯೊಬ್ಬರು ಗುರಗಾಂವ್‌ನಿಂದ (Gurgaon) ಬೆಂಗಳೂರಿಗೆ (Bengaluru) ಸ್ಥಳಾಂತರಗೊಂಡಿದ್ದಾರೆ. ಬೆಂಗಳೂರಿನಲ್ಲಿರುವ ತನ್ನ ಹೊಸ ಅಪಾರ್ಟ್‌ಮೆಂಟ್‌ನನ್ನು ಆರಾಮದಾಯಕ ಸ್ಥಳವನ್ನಾಗಿ ಹೇಗೆ ಪರಿವರ್ತಿಸಿಕೊಂಡಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ. ಈ ಕ್ಲಿಪಿಂಗ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

karishma.koul.kakroo ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕರಿಷ್ಮಾ ಕೌಲ್ ಎಂಬ ಮಹಿಳೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ಗೆ  ನಮ್ಮ ಬೆಂಗಳೂರು, ನಮ್ಮ ಜೀವನದ ಮುಂದಿನ ತಾಣ. ಭವಿಷ್ಯ ಏನಾಗುತ್ತದೆ ಎಂದು ನೋಡಲು ಉತ್ಸುಕನಾಗಿದ್ದೇನೆ, ಹೊಸ ಕೆಫೆಗಳನ್ನು ಪ್ರಯತ್ನಿಸಲು ಉತ್ಸುಕನಾಗಿದ್ದೇನೆ, ಅದ್ಭುತ ಹವಾಮಾನಕ್ಕಾಗಿ ಉತ್ಸುಕನಾಗಿದ್ದೇನೆ, ಹೊಸ ಜನರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ, ಹೊಸ ನೆನಪುಗಳನ್ನು ಸೃಷ್ಟಿಸಲು ಉತ್ಸುಕನಾಗಿದ್ದೇನೆ ಎಂಬ ಶೀರ್ಷಿಕೆ ನೀಡಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್‌ನಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್‌ಗೆ ಸ್ವಾಗತ. 13 ವರ್ಷಗಳ ಕಾಲ ಗುರಗಾಂವ್‌ನಲ್ಲಿ ವಾಸಿಸಿದ ಬಳಿಕ, ನಾವು ನಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ, ನಮ್ಮ ಮೊದಲ ಮನೆಯನ್ನು ಬಿಟ್ಟು ಬೆಂಗಳೂರಿಗೆ ಹೋಗಲು ನಿರ್ಧರಿಸಿದ್ದೆವು. ನಮ್ಮ ಸ್ವಂತ ಮನೆಯಿಂದ ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಳ್ಳುವುದು ದೊಡ್ಡ ಸವಾಲಲ್ಲ, ಬದಲಾಗಿ ಸಣ್ಣ ಜಾಗಕ್ಕೆ ಹೊಂದಿಕೊಳ್ಳುವುದು ಸಮಸ್ಯೆಯಾಗಿತ್ತು. ಮಲಗುವ ಕೋಣೆಯಲ್ಲಿ ವಾರ್ಡ್ರೋಬ್ ಹೊಂದಿದ್ದ 4 ಬಿಹೆಚ್ ಕೆ ಮನೆಯನ್ನು 3 ಬಿ ಹೆಚ್ ಕೆ ಮನೆಗೆ ಅಳವಡಿಸಬೇಕಾಗಿತ್ತು, ಇಲ್ಲಿ ಕೇವಲ ಎರಡು ಮಲಗುವ ಕೋಣೆಗಳಲ್ಲಿ ಮಾತ್ರ ವಾರ್ಡ್ರೋಬ್‌ಗಳಿವೆ ಎಂದು ಹೇಳಿದ್ದಾರೆ.

ಅದಕ್ಕಾಗಿ ನಾವು ಗುರಗಾಂವ್‌ನಲ್ಲಿರುವ ನಮ್ಮ ಮನೆಯ ಸಹಾಯಕಿ ಮತ್ತು ವಾಚ್ ಮ್ಯಾನ್ ಗೆ ನಮ್ಮಲ್ಲಿಂದ ಹೆಚ್ಚಿನ ವಸ್ತುಗಳನ್ನು ನೀಡಿದ್ದೆವು. ಈ ಬಾಡಿಗೆ ಮನೆ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸಬೇಕು. ಈ ಬದಲಾವಣೆಯ ಹೊರತಾಗಿಯೂ, ಬಾಡಿಗೆ ಅಪಾರ್ಟ್ಮೆಂಟ್ ಅನ್ನು ಬೆಚ್ಚಗಿನ ಮತ್ತು ವೈಯಕ್ತಿಕವಾಗಿ  ಅನುಭವಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

ಅದು ನಮ್ಮ ಬಾಡಿಗೆ ಮನೆಯಾಗಿದ್ದರೂ, ಅದನ್ನು ನಮ್ಮ ಸ್ವಂತ ಮನೆಯಂತೆ ಅಲಂಕರಿಸುತ್ತೇವೆ. ಏಕೆಂದರೆ ಮನೆ ನಿಮ್ಮದೇ ಆಗಿರಲಿ ಅಥವಾ ಬಾಡಿಗೆಗೆ ಪಡೆದಿರಲಿ, ಅದು ಶಾಂತಿಯನ್ನು ನೀಡಬೇಕು. ಅದು ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ವಿವರಿಸಿದ್ದಾರೆ. ಇದುವರೆಗೆ ಡ್ರಾಯಿಂಗ್ ರೂಮ್ ಮಾತ್ರ ಸಿದ್ಧವಾಗಿದ್ದು, ನನಗೆ ಹೊಸ ಮನೆಗೆ ಬಂದಿರುವುದು ನಿಜಕ್ಕೂ ಸಂತೋಷವಾಗಿದೆ ಎಂದು ಹೇಳಿರುವುದನ್ನು ಕಾಣಬಹುದು.

ಇದನ್ನೂ ಓದಿ: ಅಮೆರಿಕದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಬೆಂಗಳೂರಲ್ಲಿ ಕೆಫೆ ತೆರೆದ ಸ್ನೇಹಿತರು!

ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜೀವನದ ಈ ಹೊಸ ಪ್ರಯಾಣವನ್ನು ಆರಂಭಿಸಿದ್ದಕ್ಕಾಗಿ ಮತ್ತು ನಿಮ್ಮ ಸೌಕರ್ಯ ವಲಯದಿಂದ ಹೊರಬಂದಿದ್ದಕ್ಕಾಗಿ ಅಭಿನಂದನೆಗಳು ಎಂದಿದ್ದಾರೆ. ಇನ್ನೊಬ್ಬರು, ವಾಹ್! ಬೆಂಗಳೂರಿಗೆ ಸ್ವಾಗತ. ನೀವು ಇಲ್ಲಿ ಅದ್ಭುತ ಅನುಭವವನ್ನು ಪಡೆಯುತ್ತೀರಿ. ನಿಮ್ಮ ಹೊಸ ಮನೆ ಮತ್ತು ನಗರದಲ್ಲಿ ಸಾಕಷ್ಟು ಅದ್ಭುತ ನೆನಪುಗಳನ್ನು ಸೃಷ್ಟಿಸುತ್ತೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೊಸ ಮನೆಯನ್ನು ನಿಮ್ಮ ಮನೆಯನ್ನಾಗಿಸಲು ನೀವು ಹಾಕಿದ ಶ್ರಮವನ್ನು ನಾನು ಮೆಚ್ಚುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:31 am, Wed, 3 June 26

Source link

Leave a Reply

Your email address will not be published. Required fields are marked *