Video: ತಿಂಗಳಿಗೆ 75,000 ರೂ ಸಂಪಾದಿಸುವ ಮುಂಬೈ ಆಟೋ ಚಾಲಕ

Video: ತಿಂಗಳಿಗೆ 75,000 ರೂ ಸಂಪಾದಿಸುವ ಮುಂಬೈ ಆಟೋ ಚಾಲಕ

ಮುಂಬೈ, ಮಾರ್ಚ್ 27: ಈಗಿನ ಕಾಲದಲ್ಲಿ ಓದಿಕೊಂಡವರು ಕಾರ್ಪೊರೇಟ್ ಉದ್ಯೋಗಗಳತ್ತ (Corporate job) ಆಸಕ್ತಿ ತೋರಿಸುತ್ತಾರೆ. ಸ್ವ ಉದ್ಯೋಗಕ್ಕೆ ಕೈ ಹಾಕುವುದು ಕಡಿಮೆಯೇ. ಆದರೆ, ಸ್ವಂತ ದುಡಿಮೆಯಿಂದಲೂ ಲಕ್ಷಾನುಗಟ್ಟಲೆ ದುಡಿಯಬಹುದು ಅನೇಕರಿಗೆ ತಿಳಿದೇ ಇಲ್ಲ. ಆದರೆ ಮುಂಬೈ (Mumbai) ಆಟೋಚಾಲಕರೊಬ್ಬರ ದಿನದ ಸಂಪಾದನೆ ಕೇಳಿದ್ರೆ ನೀವು ಶಾಕ್ ಆಗ್ತೀರಾ. ದಿನಕ್ಕೆ 2500 ರೂ ಸಂಪಾದಿಸುವ ಈ ಆಟೋಚಾಲಕ ತಿಂಗಳಿಗೆ 75,000 ರೂ ಸಂಪಾದನೆ ಮಾಡ್ತಾರಂತೆ. ಈ ವಿಡಿಯೋ ಕಾರ್ಪೊರೇಟ್ ಸಂಬಳದ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.

@uvichar_ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮುಂಬೈ ಹೇಗೆ ದುಬಾರಿ ನಗರ ಎಂಬುದರ ಬಗ್ಗೆ ಚಾಲಕನೊಂದಿಗೆ ಮಾತನಾಡುತ್ತಿದ್ದೇನೆ ಎಂದು ವರ್ಮಾ ಹೇಳುವುದರೊಂದಿಗೆ  ಈ ವೀಡಿಯೊ ಪ್ರಾರಂಭವಾಗುತ್ತದೆ. ಮಾತಿಗಿಳಿದ ಈ ಆಟೋ ಚಾಲಕ, ಸಾಕಷ್ಟು ಹಣವನ್ನು ಗಳಿಸಬೇಕು. ಆದರೆ ಸರಿಯಾದ ಅವಕಾಶವನ್ನು ಕಂಡುಹಿಡಿಯುವುದು ಒಂದೇ ಸವಾಲು. ದೈನಂದಿನ ಗಳಿಕೆಯು ಖರ್ಚು ವೆಚ್ಚಗಳನ್ನು ಕಳೆದು ಸುಮಾರು 2,500 ರೂ ಆಗುತ್ತದೆ ಎಂದು ಹೇಳುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

 

View this post on Instagram

 

A post shared by @uvichar_

ವರ್ಮಾರವರು ದಿನದ ಗಳಿಕೆಯ ಆಧಾರದ ಮೇಲೆ ಮಾಸಿಕ ಆದಾಯವು ಸರಿಸುಮಾರು 75,000 ರೂ ಆಗುತ್ತದೆ ಎನ್ನುವುದನ್ನು ಗಮನಿಸಿದ್ದಾರೆ. ಈ ಮುಂಬೈನಲ್ಲಿ ಆಟೋ ಓಡಿಸುವುದರಿಂದ ದೈನಂದಿನ ಸಂವಹನ ಮತ್ತು ನೆಟ್‌ವರ್ಕಿಂಗ್ ಅವಕಾಶಗಳ ಜೊತೆಗೆ ಉತ್ತಮ ಆದಾಯದ ಗಳಿಸಬಹುದು ಎಂದು ಸೂಚಿಸುತ್ತಾರೆ. ತಿಂಗಳಿಗೆ ಸರಾಸರಿ 75,000. ನೀವು ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಿದರೆ, ನೀವು ಸುಮಾರು 1 ಲಕ್ಷ ರೂ ಗಳಿಸಬಹುದು. ಕನಿಷ್ಠ 60,000 ರೂ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಹೋಗಲು ಇಷ್ಟವಿಲ್ಲ; 34 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ಯುವಕ

ಈ ವಿಡಿಯೋ ಅಧಿಕ ವೀಕ್ಷಣೆಗಳೊಂದಿಗೆ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ ಯಾವುದೇ ದುಡಿಮೆ ಹೇಳುವಷ್ಟು ಸುಲಭವಲ್ಲ, ಕಷ್ಟ ಪಟ್ಟು ದುಡಿದರೆ ಮಾತ್ರ ಹಣ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಸಂಬಳದೊಂದಿಗೆ ನೀವು ಹೊಸಬರ ಸಂಬಳವನ್ನು ಹೇಗೆ ಹೋಲಿಸಬಹುದು?. ನೀವು ಆರಂಭಿಕ ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದರೆ 2 ವರ್ಷಗಳ ನಂತರ ನಿಮಗೆ ಸುಲಭವಾಗಿ ಹೆಚ್ಚಳ ಸಿಗುತ್ತದೆ. ನೀವು ಗಳಿಸುವ ಈಗಿನಕ್ಕಿಂತ ಕನಿಷ್ಠ ಎರಡು ಅಥವಾ ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಆಟೋ ತಿಂಗಳಿಗೆ ಹೆಚ್ಚು ಸಂಬಳ ಗಳಿಸಬಹುದು. ದಿನವಿಡೀ ಬಿಸಿಲಿನಲ್ಲಿ ಸಂಚಾರ, ಅನಿಶ್ಚಿತತೆ, ನಿಗದಿತ ಸಮಯವಿಲ್ಲದೆ ಇರುತ್ತಾನೆ. 20–30 ಸಾವಿರ ಸಂಬಳದ ಕೆಲಸವು ಸಾಮಾನ್ಯವಾಗಿ ಸ್ಥಿರತೆ, ದಿನಚರಿ ಮತ್ತು ಸ್ವಲ್ಪ ಹೆಚ್ಚು ಸೌಕರ್ಯದೊಂದಿಗೆ ಬರುತ್ತದೆ. ವಿಭಿನ್ನ ಜೀವನ, ವಿಭಿನ್ನ ವಿನಿಮಯಗಳು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *