Headlines

Video: ದೆಹಲಿ ಮೆಟ್ರೋದೊಳಗೆ ಕಪಿಚೇಷ್ಟೆ – Kannada News | Monkey’s Surprise Metro Ride Sparks Safety Debate Among Delhi Passengers

ನವದೆಹಲಿ, ಜೂನ್ 21: ದೆಹಲಿ ಮೆಟ್ರೋದಲ್ಲಿ ಯಾವಾಗಲೂ ಯಾರೋ ಡ್ಯಾನ್ಸ್​ ಮಾಡಿದ್ದು, ಇನ್ಯಾರೋ ವಿಚಿತ್ರ ಉಡುಗೆಗಳನ್ನು ತೊಟ್ಟು ಬಂದಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಪ್ರಾಣಿಗಳ ಆಟಕ್ಕೂ ವೇದಿಕೆಯಾದಂತಾಗಿದೆ. ಕೋತಿ(Monkey)ಯೊಂದು ಮೆಟ್ರೋದೊಳಗೆ ಬಂದು ಚೇಷ್ಟೆ ಮಾಡಿದೆ.

ಮೆಟ್ರೋ ಬೋಗಿಯೊಳಗೆ ನಡೆದಿದ್ದೇನು?
ಜನದಟ್ಟಣೆಯಿಂದ ಕೂಡಿದ್ದ ಮೆಟ್ರೋ ಕೋಚ್‌ ಒಳಗೆ ನುಗ್ಗಿದ ಕೋತಿ, ಮೊದಲು ಸೀಟುಗಳ ಮೇಲೆಲ್ಲಾ ಓಡಾಡಿದೆ. ಯುವತಿಯ ಬಳಿಕ ಕೋತಿ ಅಲ್ಲಿದ್ದ ಇತರ ಪ್ರಯಾಣಿಕರ ಮೇಲೂ ಹಾರಿ ಹೆದರಿಸಲು ಶುರು ಮಾಡಿದೆ. ಕೋತಿಯ ಆಟ ಕಂಡು ಬೋಗಿಯಲ್ಲಿದ್ದ ಜನರು ಪ್ರಾಣಭಯದಿಂದ ಕಿರುಚುತ್ತಾ ಇತ್ತ ಇತ್ತ ಓಡಿದ್ದಾರೆ.

ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ನಲ್ಲಿ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ: ಕೆಲವರು “ದೆಹಲಿ ಮೆಟ್ರೋದಲ್ಲಿ ಪ್ರತಿದಿನವೂ ಹೊಸ ಮನೋರಂಜನೆ ಸಿಗುತ್ತದೆ” ಎಂದು ತಮಾಷೆ ಮಾಡುತ್ತಿದ್ದಾರೆ.

ವಿಡಿಯೋ

ಇನ್ನು ಕೆಲವರು, ಇದು ನಗುವ ವಿಷಯವಲ್ಲ, ಅತ್ಯಂತ ಅಪಾಯಕಾರಿ. ಒಂದು ವೇಳೆ ಕೋತಿ ಯಾರಿಗಾದರೂ ಕಚ್ಚಿ, ಯಾವುದಾದರೂ ರೋಗ ಹರಡಿದ್ದರೆ ಯಾರು ಹೊಣೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅತ್ಯಾಧುನಿಕ ಸ್ವಯಂಚಾಲಿತ ಬಾಗಿಲುಗಳು ಹಾಗೂ ಕಟ್ಟುನಿಟ್ಟಿನ ತಪಾಸಣೆ ಇರುವ ಮೆಟ್ರೋ ನಿಲ್ದಾಣದೊಳಗೆ, ಚಲಿಸುವ ರೈಲಿಗೆ ಕೋತಿ ಹೇಗೆ ಪ್ರವೇಶಿಸಿತು ಎಂಬುದು ದೊಡ್ಡ ನಿಗೂಢವಾಗಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಮೆಟ್ರೋ ಅಧಿಕಾರಿಗಳು ಇಂತಹ ಕಾಡು ಪ್ರಾಣಿಗಳು ಒಳಗೆ ಬರದಂತೆ ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ತೀವ್ರ ಒತ್ತಾಯ ಮಾಡುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *