
ತನ್ನನ್ನು ತಾನು ತುಂಬಾ ಬುದ್ಧಿವಂತ ಎಂದುಕೊಳ್ಳುತ್ತಿದ್ದ ಕಳ್ಳ. ತಡರಾತ್ರಿ ಯಾರೂ ಇಲ್ಲದ ಸಮಯ ನೋಡಿ, ರಸ್ತೆಯ ಪಕ್ಕದಲ್ಲಿದ್ದ ದಪ್ಪನೆಯ ವಿದ್ಯುತ್ ಕೇಬಲ್ಗಳನ್ನು ಕತ್ತರಿಸಿ, ಅವುಗಳನ್ನು ಮಾರಿ ಭಾರಿ ಹಣ ಗಳಿಸುವುದು ಅವನ ಪ್ಲಾನ್ ಆಗಿತ್ತು. ತನ್ನ ಯೋಜನೆಯಂತೆ, ಆತ ಕತ್ತರಿ ಮತ್ತು ಉಪಕರಣಗಳೊಂದಿಗೆ ಕಂಬದ ಮೇಲಿದ್ದ ಪವರ್ ಕೇಬಲ್ ಏರಿ ಅದನ್ನು ಕತ್ತರಿಸಲು ಶುರು ಮಾಡಿದ್ದ. ತನ್ನ ಕೆಲಸದಲ್ಲಿ ಎಷ್ಟು ಮಗ್ನನಾಗಿದ್ದ ಎಂದರೆ ತಾನು ನಿಂತಿರುವ ತಂತಿಯನ್ನೇ ಕತ್ತರಿಸಿರುವುದರ ಬಗ್ಗೆ ಅರಿವಿರಲಿಲ್ಲ. ಕೇಬಲ್ ಕತ್ತರಿಸಿದ ತಕ್ಷಣ ದೊಪ್ಪೆಂದು ಕೆಳಗೆ ಬಿದ್ದಿದ್ದಾನೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ