Video: ಬೇಸಿಗೆ ರಜೆ ಮುಗಿಸಿ ಅಜ್ಜಿ ಮನೆಯಿಂದ ಹೊರಟ ಮೊಮ್ಮಗನನ್ನು ಕಂಡು ಭಾವುಕರಾದ ಅಜ್ಜಿ 

ಅಜ್ಜಿ ಮನೆ ಎಂದರೆ ಎಲ್ಲಾ ಮೊಮ್ಮಕ್ಕಳಿಗೂ (grandchildren) ಸ್ವರ್ಗ. ಬಾಲ್ಯದ ಸುಂದರ ಬೇಸಿಗೆ ನೆನಪುಗಳು ಬೆಸೆದುಕೊಂಡಿರುವುದು ಅದೇ ಮನೆಯಲ್ಲಿ. ಬೇಸಿಗೆ ರಜೆ (summer vacation) ಶುರುವಾಗುತ್ತಿದ್ದಂತೆ ಯಾವಾಗ ಅಜ್ಜಿ ಮನೆಗೆ ಹೋಗುತ್ತೇನೆ ಎಂದು ಅದೆಷ್ಟೋ ಮಕ್ಕಳು ಕಾಯುತ್ತಾರೆ. ಅಜ್ಜಿಯ ಮಡಿಲಲ್ಲಿ ಮಲಗಿ ಕಥೆಗಳನ್ನು ಕೇಳುವುದು, ಅಜ್ಜನ ಜತೆಗೆ ಊರು ಸುತ್ತುವುದು ಇಂತಹ ನೆನಪುಗಳು ಒಂದೆರಡಲ್ಲ. ಹಳ್ಳಿಗಳಲ್ಲಿನ ಅಜ್ಜಿ ಮನೆಯ ಅನುಭವವು ಇಂದಿಗೂ ಅಷ್ಟೇ ಅಮೂಲ್ಯ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಬೇಸಿಗೆ ರಜೆ ಮುಗಿಸಿ ತನ್ನ ಮನೆಗೆ ಹೊರಡು ನಿಂತಿರುವ ಮೊಮ್ಮಗನನ್ನು ತಬ್ಬಿಕೊಂಡು ಅಳುತ್ತಾ ನಿಂತಿರುವ ಹಿರಿಜೀವದ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಅಪೋಲೋ ಇಂಗ್ಲಿಷ್ ಸ್ಕೂಲ್ ದೊಂಬರಹಳ್ಳಿ (Apollo English School Dombarahalli) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ಬೇಸಿಗೆ ರಜೆ ತನ್ನ ಅಜ್ಜಿ ಮನೆಗೆ ಬಂದ ಮೊಮ್ಮಗ ಮತ್ತೆ ಮನೆಗೆ ಕಳುಹಿಸಿ ಕೊಡುವ ದೃಶ್ಯ ಕಾಣಬಹುದು. ಕಾರು ಹತ್ತಿ ಕುಳಿತಿರುವ ಮೊಮ್ಮಗನನ್ನು ತಬ್ಬಿಕೊಂಡು ಕಣ್ಣೀರು ಸುರಿಸುತ್ತಿರುವ ಅಜ್ಜಿಯನ್ನು ನೀವಿಲ್ಲಿ ಕಾಣಬಹುದು. ಅಜ್ಜಿಯನ್ನು ಬಿಟ್ಟು ಹೋಗಲು ಮನಸ್ಸಿಲ್ಲದೇ ಮೊಮ್ಮಗನು ಕಣ್ಣೀರು ಹಾಕುತ್ತಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನನ್ನ ಅಜ್ಜಿ ಪಿಜ್ಜಾ ಪ್ರಿಯೆ; ಬಾಯಿ ಚಪ್ಪರಿಸಿಕೊಂಡು ಪಿಜ್ಜಾ ತಿಂದ ಅಜ್ಜಿ

ಈ ವಿಡಿಯೋ ಇಪ್ಪತ್ತೆಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಆ ದಿನಗಳು ಮತ್ತೆ ಮರಳಿ ಕೇಳುವೆ ಎಂದಿದ್ದಾರೆ. ಇನ್ನೊಬ್ಬರು, ನನ್ನ ಅಜ್ಜಿಯ ಮನೆಯ ನೆನಪಾಯಿತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಜ್ಜಿ ತಾತ ಇದ್ರೆ ಅಪ್ಪ ಅಮ್ಮನನ್ನೇ ಮರೆತು ಬಿಡ್ತೇವೆ ಅಂತಹ ಪ್ರೀತಿ ಅದು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *