Headlines

Video: ಮಹಿಳೆಯರಿಗೆ ಇದು ಸುರಕ್ಷಿತ ದೇಶ; ಬೆಳಗ್ಗಿನ ಜಾವ 4.30 ಕ್ಕೆ ಒಂಟಿಯಾಗಿ ಫ್ರಾನ್ಸ್ ಬೀದಿಯಲ್ಲಿ ಓಡಾಡಿದ ಯುವತಿ – Kannada News | France: Young woman says France is safer for girls compared to India

ಫ್ರಾನ್ಸ್, ಜೂನ್ 23: ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸೇಫ್ಟಿ ಅನ್ನೋದೇ ಇಲ್ಲ. ಹೀಗಾಗಿರುವಾಗ ಫ್ರಾನ್ಸ್ ನಲ್ಲಿ (France) ನೆಲೆಸಿರುವ ಯುವತಿಗೆ (young woman) ಈ ದೇಶ ಸುರಕ್ಷಿತ ಎನ್ನುವ ಅನುಭವವಾಗಿದೆ. ಭಾರತೀಯ ಯುವತಿ ಬೆಳಗಿನ ಜಾವ 4.30 ಕ್ಕೆ ಕಾಲೇಜು ಘಟಿಕೋತ್ಸವ ಮುಗಿಸಿ ಮನೆಗೆ ನಡೆದುಕೊಂಡೇ ಹೋಗಿದ್ದಾಳೆ. ತನಗೆ ಯಾವುದೇ ಸಮಸ್ಯೆ ಆಗಿಲ್ಲ, ಯಾರು ತೊಂದರೆ ಮಾಡಿಲ್ಲ ಎಂದು ಹೇಳಿದ್ದಾಳೆ. ಈ ವಿಡಿಯೋ ಸದ್ಯ ಆನ್ಲೈನ್‌ನಲ್ಲಿ ಚರ್ಚೆ ಹುಟ್ಟು ಹಾಕಿದೆ. ನೆಟ್ಟಿಗರು ಈ ಯುವತಿಯ ಮಾತನ್ನು ಒಪ್ಪಿಕೊಂಡಿದ್ದಾರೆ.

ಶುಭಂಗಿ ವ್ಯಾಸ್ (Shubhangi Vyas) ಎಂಬ ಯುವತಿ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ಈ ಕ್ಲಿಪಿಂಗ್ ನಲ್ಲಿ ಯುವತಿ ಘಟಿಕೋತ್ಸವ ಸಮಾರಂಭದ ನಂತರ ಕಾಲೇಜು ವಿದ್ಯಾರ್ಥಿಗಳಿಗಾಗಿ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಹೀಗಾಗಿ ಈ ಕಾರ್ಯಕ್ರಮ ಮುಗಿದ ನಂತರ ಬೆಳಗಿನ ಜಾವ 4.30 ಕ್ಕೆ ಮನೆಗೆ ನಡೆದುಕೊಂಡು ಹೋಗಲು ನಿರ್ಧಾರ ಮಾಡಿದೆ. ಈಗ ಸಮಯ ಬೆಳಗ್ಗೆ 4:30 ಆಗಿದೆ. ನಾನು ಮನೆಗೆ ನಡೆಯುತ್ತಾ ಹೋಗುತ್ತಿದ್ದೇನೆ. ಯಾರೂ ನನಗೆ ಇಲ್ಲಿ ತೊಂದರೆ ನೀಡುತ್ತಿಲ್ಲ, ಕಿರುಕುಳ ನೀಡುತ್ತಿಲ್ಲ, ನನ್ನನ್ನು ಯಾರು ಕೂಡ ಪ್ರಶ್ನಿಸುತ್ತಿಲ್ಲ. ಈ ರೀತಿಯ ಸುರಕ್ಷತೆ ಮತ್ತು ಸ್ವಾತಂತ್ರ್ಯವನ್ನು ನಾವು ಬೇರೆಲ್ಲಿ ಸಿಗುತ್ತದೆ ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: Video: ಮೊದಲ ಬಾರಿಗೆ ಅಜ್ಜ ಅಜ್ಜಿಯನ್ನು ಲಂಡನ್‌ಗೆ ಕರೆದೊಯ್ದ ಮೊಮ್ಮಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಭಾರತಕ್ಕೆ ಹೋಲಿಸಿದ್ರೆ ವಿದೇಶವೇ ಹೆಣ್ಣು ಮಕ್ಕಳಿಗೆ ಸೇಫ್ ಎಂದಿದ್ದಾರೆ. ಇನ್ನೊಬ್ಬರು, ನಮ್ಮ ದೇಶದಲ್ಲಿ ರಾತ್ರಿ ಬಿಡಿ ಹಗಲಿನಲ್ಲಿ ಓಡಾಡುವುದೇ ಕಷ್ಟ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಮ್ಮ ದೇಶದಲ್ಲಿ ಇಷ್ಟು ಸುರಕ್ಷಿತವಾಗಿ ಓಡಾಡುವುದು ಕನಸಿನ ಮಾತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *