ಶಾಜಾಪುರ, ಜೂನ್ 17: ಮಹಿಳೆ ಅಡುಗೆ ಮಾಡುತ್ತಿರುವ ಹೊತ್ತಲ್ಲೇ ಪ್ರೆಶರ್ ಕುಕ್ಕರ್(Cooker) ಸ್ಫೋಟಗೊಂಡು, ಕುಕ್ಕರ್ನಲ್ಲಿರುವ ಪದಾರ್ಥ ಮಹಿಳೆಯ ಮೇಲೆ ಹಾರಿರುವ ವಿಡಿಯೋ ವೈರಲ್ ಆಗಿದ್ದು, ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವಿಡಿಯೋದಲ್ಲಿ ಕಾಣಿಸುವಂತೆ ಆರಂಭದಲ್ಲಿ ಎಲ್ಲವೂ ಸಾಮಾನ್ಯವಾಗಿ ಇರುತ್ತದೆ. ಮಹಿಳೆ ಕುಕ್ಕರ್ ಪಕ್ಕದ ಮತ್ತೊಂದು ಒಲೆಯ ಮೇಲೆ ಪಾತ್ರೆಯೊಂದನ್ನು ಇಡಲು ಹೋದ ತಕ್ಷಣವೇ, ಪ್ರೆಶರ್ ಕುಕ್ಕರ್ ಭೀಕರವಾಗಿ ಸ್ಫೋಟಗೊಂಡಿದೆ.
ಸ್ಫೋಟದ ತೀವ್ರತೆಗೆ ಇಡೀ ಅಡುಗೆಮನೆ ಕ್ಷಣಾರ್ಧದಲ್ಲಿ ದಟ್ಟವಾದ ಹೊಗೆಯಿಂದ ತುಂಬಿಹೋಗುತ್ತದೆ. ವಿಡಿಯೋ ನೋಡಿದಾಗ ಮಹಿಳೆಗೆ ತೀವ್ರ ಗಾಯಗಳಾಗಿರುವ ಸಾಧ್ಯತೆ ದಟ್ಟವಾಗಿ ಕಾಣಿಸುತ್ತದೆ
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಅಡುಗೆಮನೆಯ ಸುರಕ್ಷತೆಯ ಬಗ್ಗೆ ತೀವ್ರ ಚರ್ಚೆ ಆರಂಭಿಸಿದ್ದಾರೆ ಮತ್ತು ತಮ್ಮದೇ ಆದ ಕಾರಣ ಹಾಗೂ ಸಲಹೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಜನರು ಕೆಲವು ರೂಪಾಯಿಗಳನ್ನು ಉಳಿಸಲು ಐಎಸ್‌ಐ (ISI) ಮುದ್ರೆ ಇಲ್ಲದ ಕಳಪೆ ಗುಣಮಟ್ಟದ ಅಥವಾ ಸ್ಥಳೀಯ ಕುಕ್ಕರ್‌ಗಳನ್ನು ಖರೀದಿಸುವುದೇ ಇಂತಹ ಸ್ಫೋಟಗಳಿಗೆ ಮುಖ್ಯ ಕಾರಣ ಎಂದು ಹಲವರು ಹೇಳಿದ್ದಾರೆ.
ಕುಕ್ಕರ್ ಹಳೆಯದಾದರೂ ಅದರ ವಾಷರ್ (Gasket) ಮತ್ತು ಸೇಫ್ಟಿ ವಾಲ್ವ್ ಅನ್ನು ಸಕಾಲಕ್ಕೆ ಬದಲಾಯಿಸದೆ ನಿರ್ಲಕ್ಷಿಸುವುದರಿಂದ ಗಾಳಿಯ ಒತ್ತಡ ಹೊರಹೋಗದೆ ಈ ರೀತಿ ಆಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಓದಿ: ಅಡುಗೆಮನೆಯಲ್ಲಿ ಕುಕ್ಕರ್ ನಿಮಗೆ ಕಾಟ ಕೊಡುತ್ತಿದೆಯಾ? ಹಾಗಾದರೆ ಇಲ್ಲಿದೆ ಕೆಲವು ಸೂಪರ್ ಟಿಪ್ಸ್!
ಗ್ಯಾಸ್ ಸ್ಟೌವ್ ಅನ್ನು ಯಾವಾಗಲೂ ಸಿಲಿಂಡರ್‌ನ ಮೇಲ್ಭಾಗದ ಮಟ್ಟದಲ್ಲಿ ಇಡಬೇಕು. ಸಿಲಿಂಡರ್ ಪಕ್ಕದಲ್ಲೇ ಒಲೆ ಇಟ್ಟಿರುವುದೂ ಈ ದುರಂತಕ್ಕೆ ಕಾರಣ ಇರಬಹುದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ವಿಡಿಯೋ
Pressure Cooker Explosion at Private Hostel Kitchen
📍Shajapur, Madhya Pradesh & Injures Woman Staff Member. pic.twitter.com/Fogyi2OSsF— Deadly Kalesh (@Deadlykalesh) June 15, 2026
ಈ ವಿಡಿಯೋ ಪ್ರತಿಯೊಬ್ಬರಿಗೂ ದೊಡ್ಡ ಪಾಠವಾಗಿದೆ. ಅಡುಗೆಮನೆಯಲ್ಲಿ ಪ್ರೆಶರ್ ಕುಕ್ಕರ್ ಬಳಸುವಾಗ ಅದರ ವಿಸ್ಲಿಂಗ್ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಪರೀಕ್ಷಿಸುವುದು ಮತ್ತು ಬ್ರಾಂಡೆಡ್ ಪಾತ್ರೆಗಳನ್ನೇ ಬಳಸುವುದು ಜೀವ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಕಡ್ಡಾಯವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ