ಇತ್ತೀಚೆಗಿನ ದಿನಗಳಲ್ಲಿ ರೀಲ್ಸ್ ಹುಚ್ಚಿನಿಂದ ಯುವಕ ಯುವತಿಯರು ಪ್ರಾಣಕ್ಕೆ ಕುತ್ತು ತರುವಂತಹ ಸಾಹಸಗಳನ್ನು ಮಾಡುತ್ತಿದ್ದಾರೆ. ಲೈಕ್ಸ್ ಹಾಗೂ ವೀವ್ಸ್ ಗಾಗಿ ಹರಸಾಹಸಗಳನ್ನು ಮಾಡುತ್ತಿದ್ದಾರೆ. ಇದೀಗ ಇಲ್ಲೊಬ್ಬ ಯುವಕನದ್ದು (young man) ಅದೇ ಕಥೆ. ಯುವಕನೊಬ್ಬ ಬೀಡಿಗಳನ್ನು ಮೂಗಿನೊಳಗೆ ಇಟ್ಟು, ಬಾಯಿಂದ ಹೊಗೆ ಬಿಟ್ಟಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಲೈಕ್ಸ್ ವೀವ್ಸ್ ಗಾಗಿ ಇಂತಹ ಅಪಾಯಕಾರಿ ಹುಚ್ಚಾಟ ಮೆರೆಯುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಹಿ ಶುಕ್ಲ (Arohi Shukla) ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಯುವಕನೊಬ್ಬ ಉರಿಯುತ್ತಿರುವ ಬೀಡಿಗಳನ್ನು ಮೂಗಿನೊಳಗೆ ಇಟ್ಟು ಬಾಯಲ್ಲಿ ಹೊಗೆ ಬಿಟ್ಟಿದ್ದಾನೆ. ಹೊಗೆಯ ಘಾಟಿಗೆ ಕೆಮ್ಮಲು ಶುರು ಮಾಡಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
देश चुनौतीयों से नहीं, चूतियों से परेशान है l pic.twitter.com/2AiCyEffZu
— Arohi Shukla (@arohishukl50402) August 18, 2026
ಇದನ್ನೂ ಓದಿ: ತನ್ನ ಜತೆಗೆ ವಾಕಿಂಗ್‌ಗೆ ಬಂದ ಶ್ವಾನವನ್ನು ಮನೆಗೆ ಕರೆದೊಯ್ಯಲು ಹರಸಾಹಸ ಪಟ್ಟ ಯುವಕ
ಆಗಸ್ಟ್ 18 ರಂದು ಹಂಚಿಕೊಳ್ಳಲಾದ ಈ ಕ್ಲಿಪಿಂಗ್ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಸಾಹಸ ಮಾಡಲು ಹೋಗಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದಿದ್ದಾರೆ. ಇನ್ನೊಬ್ಬರು, ಇಂತಹ ಹುಚ್ಚಾಟಗಳಿಗೆ ಕೈ ಹಾಕುವುದು ಮೂರ್ಖತನ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇಂದಿನ ಯುವಕರಿಗೆ ಬುದ್ಧಿ ಅನ್ನೋದೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 1:14 pm, Wed, 19 August 26