ಭಾರತಕ್ಕೆ ಹೋಲಿಸಿದ್ರೆ ವಿದೇಶದಲ್ಲಿ (foreign) ಜೀವನ ನಡೆಸುವುದು ತುಂಬಾ ಸುಲಭ. ಕೈ ತುಂಬಾ ಸಂಬಳ ಸಿಗುತ್ತದೆ, ಹೀಗಾಗಿ ಆರಾಮಾದಾಯಕವಾಗಿದೆ ಜೀವನ ನಡೆಸಬಹುದು ಅಂದುಕೊಳ್ತಾರೆ. ದಿನನಿತ್ಯ ಅಗತ್ಯಗಳನ್ನು ಪೂರೈಸಿಕೊಳ್ಳಲು ತಿಂಗಳ ಸಂಬಳ ಸಾಲುವುದಿಲ್ಲ. ಅಗ್ಗದ ಬೆಲೆಗೆ ದಿನಸಿ ವಸ್ತುಗಳು ಸಿಗಲ್ಲ. ಇದೀಗ ಭಾರತೀಯ ಮಹಿಳೆ ಲಂಡನ್‌ನಲ್ಲಿ (London) ಚಾಲೆಂಜ್ ಸ್ವೀಕರಿಸಿದ್ದಾರೆ. ಕೇವಲ 100 ರೂಯೊಳಗೆ ದಿನಸಿ ಸಾಮಗ್ರಿಗಳನ್ನು ಖರೀದಿಸುವುದೇ ಬಹುದೊಡ್ಡ ಚಾಲೆಂಜ್. ಆದರೆ ಕೊನೆಗೆ ಈ ಮಹಿಳೆ 100 ರೂಗೆ ಖರೀದಿಸಲು ಸಾಧ್ಯವಾದ ವಸ್ತು ತಿಳಿದ್ರೆ ನೀವು ಶಾಕ್ ಆಗ್ತೀರಾ. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ವಿದೇಶಿ ದುಬಾರಿ ಜೀವನ ಕಂಡು ಶಾಕ್ ಆಗಿದ್ದಾರೆ.
@veggiewander ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಭಾರತೀಯ ಮಹಿಳೆ ಲಂಡನ್‌ನಲ್ಲಿ 100 ರೂಗೆ ದಿನಸಿ ಸಾಮಗ್ರಿಗಳನ್ನು ಖರೀದಿಸಿರುವ ಚಾಲೆಂಜ್ ಸ್ವೀಕರಿಸಿರುವುದನ್ನು ಕಾಣಬಹುದು. ಮಹಿಳೆಯೂ 100 ರೂ ನೋಟು ಹಿಡಿದು ಲಂಡನ್‌ನ ಅಂಗಡಿಯೊಂದಕ್ಕೆ ನಡೆದು ಹೋಗಿದ್ದಾರೆ. ಈ ಬಜೆಟ್ ಒಳಗೆ ಏನನ್ನಾದರೂ ಖರೀದಿಸಲು ಪ್ರಯತ್ನಿಸುವ ಚಾಲೆಂಜ್ ನೊಂದಿಗೆ ಈ ವಿಡಿಯೋ ಆರಂಭವಾಗುತ್ತದೆ.
ವೈರಲ್ ವಿಡಿಯೋ ಇಲ್ಲಿದೆ
ಮೊದಲು ಸ್ಯಾಂಡ್‌ವಿಚ್ ವಿಭಾಗಕ್ಕೆ ಹೋಗಿ ಬೇಸಿಕ್ ಚೀಸ್ ಹಾಗೂ ಈರುಳ್ಳಿ ಸ್ಯಾಂಡ್‌ವಿಚ್ ಅನ್ನು ಎತ್ತಿಕೊಂಡು ಬೆಲೆ ಎಷ್ಟೆಂದು ನೋಡಿದಾಗ 1.50 ಪೌಂಡ್‌ಗಳು (ಸುಮಾರು 190 ರೂ ) ಎಂದು ತಿಳಿಯುತ್ತದೆ. ಆ ಬಳಿಕ ಆ ಮಹಿಳೆ 500 ಮಿಲಿ ನೀರಿನ ಬಾಟಲಿಯನ್ನು ತೆಗೆದುಕೊಂಡಿದ್ದಾರೆ. ಈ ಬಾಟಲಿಯ ಬೆಲೆ ಬೆಲೆ 1.15 ಪೌಂಡ್‌ಗಳು (ಸುಮಾರು 145 ರೂ) ಗಳಾಗಿದ್ದು, ಮತ್ತೆ 100 ರೂ ಒಳಗೆ ಖರೀದಿಸಬಹುದಾದ ದಿನಸಿ ವಸ್ತುವಿಗಾಗಿ ಹುಡುಕಾಟ ನಡೆಸಿದ್ದಾರೆ.
ತದನಂತರದಲ್ಲಿ 0.89 ಪೌಂಡ್‌ಗಳ (ಸುಮಾರು 113 ರೂ) ಬೆಲೆಯ ಎಲೆಕೋಸು ಮತ್ತು 1.65 ಪೌಂಡ್‌ಗಳ (ಸುಮಾರು 209 ರೂ ) ಬೆಲೆಯ ಓರಿಯೊ ಬಿಸ್ಕಟ್ ಪ್ಯಾಕ್ ಗಮನಿಸುತ್ತಾರೆ. ತನ್ನ ಬಜೆಟ್ ಚಾಲೆಂಜ್ ಗಿಂತ ಈ ಎಲ್ಲಾ ವಸ್ತುವಿನ ಬೆಲೆ ಹೆಚ್ಚಾಗಿರುವುದರಿಂದ ಅಲ್ಲಿಗೆ ಸುಮ್ಮನಾಗುತ್ತಾರೆ. ಆದರೆ ಕೊನೆಗೆ ಸಿಕ್ಕಿದ್ದು ಸಣ್ಣದಾದ ಕ್ಯಾರೆಟ್ ಪ್ಯಾಕೆಟ್. ಇದರ ಬೆಲೆ 0.60 ಪೌಂಡ್‌ಗಳ (ಸುಮಾರು 75 ರೂ). 100 ರೊಳಗೆ ಸಿಗುವ ಏಕೈಕ ವಸ್ತು ಅದೇ ಎಂದು ತೀರ್ಮಾನಿಸಿ, ಅದನ್ನು ಖರೀದಿಸಲು ನಿರ್ಧರಿಸುತ್ತಾರೆ.
ಇದನ್ನೂ ಓದಿ: ಜರ್ಮನ್‌ನಲ್ಲಿ ಡ್ರೀಮ್ ಜಾಬ್ ಗಿಟ್ಟಿಸಿಕೊಂಡ ಭಾರತೀಯ ಮಹಿಳೆ ಹೇಳಿದ್ದೇನು ನೋಡಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತದಲ್ಲಿ ಈ ಮೊತ್ತಕ್ಕೆ ಹಲವಾರು ದಿನಸಿ ವಸ್ತುಗಳನ್ನು ಸುಲಭವಾಗಿ ಕೊಂಡುಕೊಳ್ಳಬಹುದು ಎಂದು ಹೇಳಿದ್ದಾರೆ. ಇನ್ನೊಬ್ಬರು, ಭಾರತದೊಂದಿಗೆ ಏಕೆ ಹೋಲಿಸುತ್ತೀರಿ. ಹಾಗೆ ನೋಡಿದರೆ ನೀವು ಸಂಬಳವನ್ನು ಹೋಲಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಭಾರತಕ್ಕೂ ವಿದೇಶಕ್ಕೂ ಇಷ್ಟೇ ವ್ಯತ್ಯಾಸ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ