Headlines

Video: ಸೇತುವೆ ಬಳಿ ರೀಲ್ಸ್ ಮಾಡೋದ್ರಲ್ಲಿ ಮಹಿಳೆ ಬ್ಯುಸಿ, ಬಿಡ್ಜ್‌ನತ್ತ ತೆವಳುತ್ತಾ ಹೋದ ಕಂದಮ್ಮ – Kannada News | Woman makes Reels near a bridge after putting her child down

ರೀಲ್ಸ್ ರೀಲ್ಸ್ ರೀಲ್ಸ್…. ಈಗಿನ ಕಾಲದ ಯುವಕ ಯುವತಿಯರಲ್ಲಿ ರೀಲ್ಸ್ (reels) ಕ್ರೇಜ್ ಹೆಚ್ಚಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗುವ ಸಲುವಾಗಿ ರೀಲ್ಸ್ ಮಾಡಲು ಹೋಗಿ ಅಪಾಯದಲ್ಲಿ ಸಿಲುಕುವುದಿದೆ. ಇಲ್ಲೊಬ್ಬ ಮಹಿಳೆಯದ್ದು ಅದೇ ಕಥೆ. ತಾಯಿಯೊಬ್ಬಳು ಸೇತುವೆ ಬಳಿ ಮಗುವನ್ನು  ಬಿಟ್ಟು ರೀಲ್ಸ್ ಮಾಡಲು ಮುಂದಾಗಿದ್ದಾಳೆ. ಈ ಮಹಿಳೆ ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ರೆ ಈ ಪುಟಾಣಿ ತೆವಳುತ್ತಾ ಸೇತುವೆ ಅಂಚಿಗೆ ಹೋಗಿರುವ ವಿಡಿಯೋ ವೈರಲ್ ಆಗಿದೆ.  ಈ ವಿಡಿಯೋ ನೋಡಿದ ನೆಟ್ಟಿಗರು ಈ ಮಹಿಳೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ರಿತೇಶ್ (Ritesh) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಮಹಿಳೆಯೊಬ್ಬಳು ಮಗುವನ್ನು ತನ್ನ ಹಿಂಬದಿ ಬಿಟ್ಟು ಸೇತುವೆ ಬಳಿ ನಿಂತು ರೀಲ್ಸ್ ಮಾಡುತ್ತಿದ್ದಾಳೆ. ಆದರೆ ತನ್ನ ಹಿಂಬದಿ ಏನು ನಡೆಯುತ್ತಿದೆ ಎನ್ನುವ ಬಗ್ಗೆ ಲಕ್ಷ್ಯವೇ ಕೊಡುತ್ತಿಲ್ಲ. ಮಗು ತೆವಳುತ್ತಾ ಅಂಚಿನ ಕಡೆಗೆ ಹೋಗುತ್ತಿದೆ. ಅಲ್ಲೇ ಇದ್ದ ವ್ಯಕ್ತಿ ಈ ಮಹಿಳೆಯ ಪತಿಯಂತೆ ಕಾಣುತ್ತದೆ. ಮಗು ತೆವಳುತ್ತಾ ಸೇತುವೆ ಅಂಚಿಗೆ ಹೋಗುತ್ತಿದ್ದಂತೆ ಓಡಿಬಂದ ಈ ವ್ಯಕ್ತಿ ಮಗುವನ್ನು ಎತ್ತಿಕೊಂಡು ಹೋಗಿ ಬೈಕ್ ಮೇಲೆ ಕೂರಿಸಿದ್ದಾರೆ. ಆದರೆ ಈ ಮಹಿಳೆಗೆ ಮಗುವಿನ ಬಗ್ಗೆ ಗಮನವೇ ಇಲ್ಲದಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: Video: ಪಿಜ್ಜಾ ಆರ್ಡರ್ ಮಾಡಿ ಅಜ್ಜಿಗೆ ಸರ್ಪ್ರೈಸ್ ಕೊಟ್ಟ ಮೊಮ್ಮಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ, ಎಷ್ಟು ಬೇಜವಾಬ್ದಾರಿಯುತ ಮಹಿಳೆ ಎಂದಿದ್ದಾರೆ. ಇನ್ನೊಬ್ಬರು, ಇದು ರೀಲ್ಸ್ ಹುಚ್ಚು ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ರೀಲ್ಸ್ ಹುಚ್ಚಿಗಾಗಿ ಮಗುವಿನ ಪ್ರಾಣದ ಜತೆಗೆ ಆಟ ಆಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *