
ತೆಲಂಗಾಣದ ಕೊಮಾರಂಭಿಮ್ ಆಸಿಫಾಬಾದ್ ಜಿಲ್ಲೆಯ ರಾಮ ದೇವಾಲಯದಲ್ಲಿ ನಡೆದ ಅಪರೂಪದ ದೃಶ್ಯವೊಂದು ವೈರಲ್ ಆಗಿದೆ. ದೇವಾಲಯದ ಅರ್ಚಕರು ಹನುಮಂತನ ವಿಗ್ರಹಕ್ಕೆ ಮಂಗಳಾರತಿ ಬೆಳಗುತ್ತಿದ್ದ ಕ್ಷಣದಲ್ಲಿ, ಎಲ್ಲಿಂದಲೋ ಬಂದ ಕೋತಿಯೊಂದು ಶಾಂತವಾಗಿ ನಿಂತು ಪೂಜೆಯನ್ನು ಕಣ್ತುಂಬಿಸಿಕೊಂಡಿದೆ. ಮಂಗಳಾರತಿ ಪೂರ್ಣಗೊಂಡ ನಂತರ, ಸಾಕ್ಷಾತ್ ಹನುಮಂತನ ಪ್ರತಿರೂಪದಂತಿದ್ದ ಆ ಕೋತಿ ನೇರವಾಗಿ ವಿಗ್ರಹದ ಬಳಿಗೆ ತೆರಳಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದೆ. ಅಷ್ಟೇ ಅಲ್ಲದೆ, ಅರ್ಚಕರು ನೀಡಿದ ತೀರ್ಥ ಮತ್ತು ಪ್ರಸಾದವನ್ನು ಸ್ವೀಕರಿಸಿ, ನೆರೆದಿದ್ದ ಭಕ್ತರನ್ನು ಆಶ್ಚರ್ಯಚಕಿತಗೊಳಿಸಿ ಅಲ್ಲಿಂದ ನಿರ್ಗಮಿಸಿದೆ. ಈ ಅದ್ಭುತ ಘಟನೆಯನ್ನು ಕಂಡ ಅರ್ಚಕರು ಮತ್ತು ಭಕ್ತರು, ಹನುಮಂತನೇ ಸ್ವತಃ ಕೋತಿಯ ರೂಪದಲ್ಲಿ ಬಂದು ನಮಗೆ ದರ್ಶನ ನೀಡಿದ್ದಾನೆ ಎಂದು ಭಾವಿಸಿ ಪುಳಕಿತರಾಗಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.
ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ