Viral: ಬೆಂಗಳೂರಿಗೆ ಹೋಗಲು ಇಷ್ಟವಿಲ್ಲ; 34 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ಯುವಕ

Viral: ಬೆಂಗಳೂರಿಗೆ ಹೋಗಲು ಇಷ್ಟವಿಲ್ಲ; 34 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ಯುವಕ

ಉದ್ಯೋಗ (employment) ಎಲ್ಲರಿಗೂ ಅತ್ಯವಶ್ಯಕ. ಆದರೆ ಈಗಿನ ಕಾಲದಲ್ಲಿ ಎಷ್ಟೇ ಓದಿಕೊಂಡಿದ್ದರೂ ಕೈ ತುಂಬಾ ಸಂಬಳ ಸಿಗುವ ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ತುಂಬಾನೇ ಕಷ್ಟ. ತಾವು ಓದಿರುವುದಕ್ಕೆ ತಕ್ಕ ಉದ್ಯೋಗವಿಲ್ಲದೇ ಸಿಕ್ಕ ಕೆಲಸವನ್ನೇ ಅನಿವಾರ್ಯ ಕಾರಣಕ್ಕಾಗಿ ಮಾಡುವವರೇ ಹೆಚ್ಚು. ಆದರೆ ದೆಹಲಿಯ ಗುರುಗ್ರಾಮ ಮೂಲದ  ಇಂಜಿನಿಯರ್‌ರೊಬ್ಬ ಬೆಂಗಳೂರಿಗೆ (Bengaluru) ಶಿಫ್ಟ್ ಆಗೋಕೆ ಆಗಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ 34 ಲಕ್ಷ ರೂ ವಾರ್ಷಿಕ ಸಂಬಳ ಸಿಗುವ ಕೆಲಸದ ಆಫರ್ ತಿರಸ್ಕರಿಸಿದ್ದಾನೆ. ಉದ್ಯೋಗದ ಕುರಿತು ಈ ಯುವಕ ಮಾಡಿದ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Gaurav Sharan ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಇತ್ತೀಚೆಗೆ ನನಗೆ ಬೆಂಗಳೂರಿನಲ್ಲಿ 35 ಲಕ್ಷ ರೂ ಪ್ಯಾಕೇಜ್ ಕೆಲಸದ ಆಫರ್ ಲಭಿಸಿತು. ಪ್ಯಾಕೇಜ್ ಹಾಗೂ ಕಂಪನಿಯು ಚೆನ್ನಾಗಿತ್ತು. ಆದರೆ ಬೇರೆಡೆಗೆ ಸ್ಥಳಾಂತರವಾಗುವಂತೆ ಬೇಡಿಕೆ ಇರಿಸಲಾಗಿತ್ತು. ಆದರೆ ಈ ಆಫರ್ ಅನ್ನು ನಾನು ತಿರಸ್ಕರಿಸಿದ್ದೇನೆ. ಏಕೆಂದರೆ ನನಗೆ ಎಂದಿಗೂ ಬೆಂಗಳೂರಿಗೆ ಹೋಗಲು ಇಷ್ಟವಿಲ್ಲ ಎಂದು ಬರೆದುಕೊಂಡಿರುವುದನ್ನು ಕಾಣಬಹುದು.

ವೈರಲ್ ಪೋಸ್ಟ್‌ ಇಲ್ಲಿದೆ

ಇದನ್ನೂ ಓದಿ: ಬಾಸ್‌ನಿಂದ ಕಾಲ್ ಬಂದದ್ದೇ ತಡ ಮೆಟ್ರೋದೊಳಗೆ ಲ್ಯಾಪ್ ಟಾಪ್ ತೆರೆದು ಕೆಲಸ ಮಾಡಲು ಕುಳಿತ ಯುವಕ

ಮಾರ್ಚ್ 21 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರಿಗೆ ಹೋಗದಿರಲು ನಿರ್ದಿಷ್ಟ ಕಾರಣವೇನು ಎಂದು ಹೇಳಿದ್ದಾರೆ. ಇನ್ನೊಬ್ಬರು, ಅದ್ಭುತ, ದಯವಿಟ್ಟು ನಿಮ್ಮ ಭರವಸೆಯನ್ನು ಜೀವಮಾನವಿಡೀ ಉಳಿಸಿಕೊಳ್ಳಿ ಮತ್ತು ಬೆಂಗಳೂರಿಗೆ ಎಂದಿಗೂ ಬರಬೇಡಿ ಎಂದು ಖಾರವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ನಿರ್ಧಾರ. ಬೆಂಗಳೂರಿಗರು ನಿಮಗೆ ಸದಾ ಆಭಾರಿಯಾಗಿರುತ್ತಾರೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *