Headlines

Viral: ಮಗಳನ್ನು ಆಶೀರ್ವದಿಸಲು ಚಿಟ್ಟೆಯ ರೂಪದಲ್ಲಿ ಬಂದ ತಂದೆ, ಮುಂದೇನಾಯ್ತು ನೋಡಿ – Kannada News | Father disguised as a butterfly to greet daughter at wedding

ತಾಯಿಯು ತನ್ನ ಮಗುವನ್ನು ಒಂಬತ್ತು ತಿಂಗಳು ಗರ್ಭದಲ್ಲಿಟ್ಟುಕೊಂಡರೆ, ತಂದೆ (father) ತನ್ನ ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚವನ್ನು ತೋರಿಸುತ್ತಾನೆ. ಅಪ್ಪ ಅಂದ್ರೆನೇ ಆಕಾಶನೇ. ತಂದೆಗೂ ತನ್ನ ಮಗಳೆಂದರೆ ಜೀವಕ್ಕಿಂತಲೂ ಹೆಚ್ಚು. ತಂದೆ ಇಲ್ಲದ ಮಗಳು ತನ್ನ ಮದುವೆಯ ದಿನ ಅಪ್ಪನು ಹೇಳಿದ ಮಾತಿನಂತೆ ನಡೆದದ್ದನ್ನು ಕಂಡು ಭಾವುಕಳಾಗಿದ್ದಾಳೆ. ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಿಮ್ಮನ್ನು ಹಾರೈಸಲು ಬಂದಿದ್ದಾರೆ ಎಂದು ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಸೈನ್ಸ್ ಗರ್ಲ್’ (@sciencegirl) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ಗೆ ‘ಪ್ರೀತಿ ಎಂಬುದು ಕಣ್ಣಿಗೆ ಕಾಣದ ರೂಪದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಶೀರ್ಷಿಕೆ ನೀಡಲಾಗಿದೆ.

ವೈರಲ್‌ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಹೊಸದಾಗಿ ಮದುವೆಯಾದ ಜೋಡಿ ವೇದಿಕೆಯ ಮೇಲೆ ನಿಂತಿರುವುದನ್ನು ಕಾಣಬಹುದು. ಹಾರಿಬಂದ ಚಿಟ್ಟೆಯೊಂದು ವಧುವಿನ ಸುತ್ತಲೂ ಸುಳಿದು, ಆಕೆಯ ಕೈಯಲ್ಲಿದ್ದ ಹೂವಿನ ಬೊಕ್ಕೆಯ ಮೇಲೆ ಕುಳಿತಿದೆ.. ಆ ಬಳಿಕ ತಲೆಯ ಮೇಲೆ ಧರಿಸಿದ್ದ ದುಪಟ್ಟಾದ ಮೇಲೆ ಕುಳಿತು ಆಶೀರ್ವಾದ ಮಾಡಿದ್ದಂತೆ ಕಾಣಿಸುತ್ತಿದೆ. ಇದೇ ವೇಳೆ ಚಿಟ್ಟೆಯ ರೂಪದಲ್ಲಿ ತಂದೆ ಬಂದಿದ್ದಾರೆ ಎಂದು ನೆನೆದು ವಧು ಭಾವುಕಳಾಗಿದ್ದಾಳೆ. ಆಕೆಯ ಪತಿಯೂ ಚಿಟ್ಟೆಯನ್ನು ಓಡಿಸುತ್ತಿರುವ ದೃಶ್ಯವನ್ನು ಕಾಣಬಹುದು

ಇದನ್ನೂ ಓದಿ: ಮಗಳ ಭವಿಷ್ಯಕ್ಕಾಗಿ ತಂದೆಯ ಹೋರಾಟ; ತನ್ನ ಆಟೋದಲ್ಲಿ ಮಗಳನ್ನು ಮಲಗಿಸಿ ಆಟೋ ಓಡಿಸುವ ವ್ಯಕ್ತಿ

ಈ ವಿಡಿಯೋ ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿದ್ದು, ಒಬ್ಬ ಬಳಕೆದಾರ, ದೈಹಿಕವಾಗಿ ಅಪ್ಪ ಇಲ್ಲದಿದ್ದರೂ ಮಾನಸಿಕವಾಗಿ ಅಪ್ಪ ಜೀವಂತ ಎಂದು ಹೇಳಿದ್ದಾರೆ. ಇನ್ನೊಬ್ಬರು, ಅಪ್ಪನ ಆಗಮನ ಮಗಳಿಗೆ ಎಷ್ಟು ಖುಷಿ ತಂದಿದ್ದೆ ಎನ್ನುವುದನ್ನು ಆಕೆಯ ಕಣ್ಣೀರೇ ಹೇಳುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಪ್ಪನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *