ಕಾರ್ಪೊರೇಟ್ ಕಂಪನಿಗಳಲ್ಲಿ (corporate company) ಕೆಲಸ ಮಾಡುವವರಿಗೆ ರಜೆ ಸಿಗೋದೇ ಇಲ್ಲ. ರಜೆ ಕೇಳಿದ್ರೆ ಸಾಕು ಆಕಾಶ ಭೂಮಿ ಒಂದು ಮಾಡ್ತಾರೆ. ಇದೀಗ ಉದ್ಯೋಗಿಯೊಬ್ಬರು 45 ದಿನಗಳ ಮುಂಚಿತವಾಗಿ ರಜೆಗೆ ಅರ್ಜಿ ಹಾಕಿದ್ದಾರೆ. ಆದರೆ ಮ್ಯಾನೇಜರ್ ರಜೆ ಕೊಡಲ್ಲ ಎಂದಿದ್ದಾರೆ. ರೆಡ್ಡಿಟ್ ನಲ್ಲಿ ಟೆಕ್ಕಿಯೊಬ್ಬರು ತನ್ನ ಪತ್ನಿ ಭಾರತದ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮ್ಯಾನೇಜರ್ ಆಕೆಯ ರಜೆಗೆ ನಿರಾಕರಿಸಿದ್ದನ್ನು ಕಂಡು ಪತಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮ್ಯಾನೇಜರ್ ವರ್ತನೆಗೆ ನೆಟ್ಟಿಗರು ಗರಂ ಆಗಿದ್ದಾರೆ.
ಡೆವಲಪರ್ಸ್ ಇಂಡಿಯಾ (r/developers India)ಹೆಸರಿನ ರೆಡ್ಡಿಟ್ ಪೋಸ್ಟ್ನಲ್ಲಿ ಉದ್ಯೋಗಿಯೊಬ್ಬರು, ಕಾರ್ಪೊರೇಟ್ ಜಗತ್ತಿನ ಕರಾಳ ಮುಖ ಬಿಚ್ಚಿಟ್ಟಿದ್ದಾರೆ. ಈ ಪೋಸ್ಟ್ನಲ್ಲಿ ನನ್ನ ಪತ್ನಿ ಭಾರತದ ದೊಡ್ಡ ಐಟಿ ಸೇವಾ ಕಂಪನಿಗಳಲ್ಲಿ ಒಂದಾದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಹೀಗಾಗಿ ನನ್ನ ಪತ್ನಿ ಪ್ರವಾಸಕ್ಕೆ ಒಂದೂವರೆ ತಿಂಗಳು ಇರುವಾಗಲೇ ರಜೆಯ ಬಗ್ಗೆ ಮ್ಯಾನೇಜರ್ ಮತ್ತು ಟೀಮ್ ಲೀಡ್ಗೆ ತಿಳಿಸಿದ್ದಾಳೆ. 45 ದಿನಕ್ಕೂ ಮುಂಚಿತವಾಗಿ ರಜೆ ಕೇಳಿದ್ರು ಮ್ಯಾನೇಜರ್ ರಜೆ ನೀಡಲು ರೆಡಿ ಇಲ್ಲ. ಪ್ರವಾಸದ ದಿನವನ್ನು ಬದಲಾವಣೆ ಮಾಡಿ ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ
Manager at WITCH level companies not approving leaves
by
u/Historical_day_364 in
developersIndia
ಟ್ರಿಪ್ನ ದಿನಾಂಕಗಳನ್ನು ಬದಲಾಯಿಸುವುದು ಹೇಳಿದ್ದಷ್ಟು ಸುಲಭವಲ್ಲ, ಈಗಾಗಲೇ ಟ್ರಿಪ್ ಗೆ ಬೇಕಾದ ಎಲ್ಲಾ ವ್ಯವಸ್ಥೆಗಳು ಆಗಿದೆ. ಒಂದು ದಿನ ನಿಗದಿ ಪಡಿಸಿದ ಡೇಟ್ ಬದಲಾದ್ರೆ ಖರ್ಚು ಹೆಚ್ಚಾಗಿ ಬೀಳುತ್ತದೆ. ಕಳೆದ ಐದು ವರ್ಷಗಳಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸಾಕಷ್ಟು ರಜೆ ಖಾಲಿಯಿವೆ. ಏನಾದ್ರು ಕೆಲಸವಿದ್ದರೆ ಸ್ಲಾಕ್ ಅಥವಾ ವಾಟ್ಸ್ಆಪ್ ಮೂಲಕ ಕಾಂಟಾಕ್ಟ್ ಮಾಡುವೆ ಎಂದು ತನ್ನ ಪತ್ನಿ ಹೇಳಿದ್ದಾರಂತೆ. ಆದರೆ ಮ್ಯಾನೇಜರ್ ಮಾತ್ರ ಪಟ್ಟು ಬಿಡದೇ ರಜೆ ವಿಷ್ಯ ಬಿಟ್ಟು, ಟ್ರಿಪ್ ಡೇಟ್ ಬದಲಾವಣೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಕಂಪನಿಗಳಲ್ಲಿ ರಜೆಯ ವಿಷ್ಯದಲ್ಲಿ ಈ ರೀತಿ ವರ್ತಿಸುವುದು ಸಾಮಾನ್ಯ. ಟೂರ್ ದಿನಾಂಕವನ್ನು ಬುಕ್ ಮಾಡಲಾಗಿದೆ ಎಂದು ಮ್ಯಾನೇಜರ್ಗೆ ಮತ್ತೊಮ್ಮೆ ತಿಳಿಸುವುದು ಉತ್ತಮವೇ, ಇಲ್ಲವೆಂದರೆ ರಜೆಯ ಬಗ್ಗೆ ಎಚ್ಆರ್ ಬಳಿ ಮಾತನಾಡಬೇಕೇ ಎಂದು ನೆಟ್ಟಿಗರಲ್ಲಿ ಸಲಹೆ ಕೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಜೀವನ ಸಾಗಿಸಲು ವರ್ಷಕ್ಕೆ 50 ಲಕ್ಷ ರೂ. ಸಂಬಳವೂ ಸಾಕಾಗಲ್ಲವೇ? ಟೆಕ್ಕಿಯ ಲೆಕ್ಕಾಚಾರ ವೈರಲ್
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕಾರ್ಪೊರೇಟ್ ಕಂಪನಿಯಲ್ಲಿ ರಜೆ ಕೇಳಿದ್ರೆ ಮೈ ಮೇಲೆ ಬಿದ್ದವರಂತೆ ಆಡುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕೆಲಸ ಮುಖ್ಯವೇ ಆದರೆ ವೈಯುಕ್ತಿಕ ಜೀವನ ಕೂಡ ಅಷ್ಟೇ ಮುಖ್ಯ. ಹೀಗಾಗಿ ಸಾಧ್ಯವಾದರೆ ಆ ಕೆಲಸವನ್ನು ಬದಲಾಯಿಸಲು ನೋಡಿ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ರಜೆ ಬಗ್ಗೆ ಮತ್ತೊಮ್ಮೆ ಮ್ಯಾನೇಜರ್ ಹೇಳುವ ಅಗತ್ಯವಿಲ್ಲ, ಎಚ್ ಆರ್ ಗೆ ತಿಳಿಸಿ ರಜೆ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 2:48 pm, Fri, 14 August 26