Viral Post: ಬೆಂಗಳೂರಿನ ಇಸ್ತ್ರಿ ದರ ಕೇಳಿ ಬೆಚ್ಚಿಬಿದ್ದ ನೋಯ್ಡಾ ನಿವಾಸಿ; ವೈರಲ್ ಆಯ್ತು ಪೋಸ್ಟ್

ಬೆಂಗಳೂರಿನ ಇಸ್ತ್ರಿ ದರ ಕೇಳಿ ಬೆಚ್ಚಿಬಿದ್ದ ನೋಯ್ಡಾ ನಿವಾಸಿImage Credit source: Twitter/@sajithpai

ಬೆಂಗಳೂರು: ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಜೀವನ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮನೆ ಬಾಡಿಗೆ, ದಿನಸಿ, ಪ್ರಯಾಣ ಮಾತ್ರವಲ್ಲದೆ ಸಾಮಾನ್ಯ ಸೇವೆಗಳ ದರವೂ ಜನರನ್ನು ಅಚ್ಚರಿಗೊಳಿಸುತ್ತಿದೆ. ಇದೀಗ ಬೆಂಗಳೂರಿನ ಇಸ್ತ್ರಿ ದರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಡೆದ ಚರ್ಚೆ ಭಾರೀ ವೈರಲ್ ಆಗಿದೆ. ನೋಯ್ಡಾದಿಂದ ಇತ್ತೀಚೆಗಷ್ಟೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಶಿಫ್ಟ್ ಆದ ‘ಸಜಿತ್ ಪೈ’ (Sajith Pai) ಎಂಬ ಸಾಹಸೋದ್ಯಮ ಬಂಡವಾಳಶಾಹಿ (Venture Capitalist), ಇಲ್ಲಿನ ಬಟ್ಟೆ ಇಸ್ತ್ರಿ ದರವನ್ನು ನೋಡಿ ದಂಗಾಗಿದ್ದಾರೆ. ಈ ಅನುಭವವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

5 ರಿಂದ ನೇರ 20ರೂ:

ತಮ್ಮ ಪೋಸ್ಟ್‌ನಲ್ಲಿ ಸಜಿತ್ ಪೈ, “ನಾನು ಇದೇ ತಿಂಗಳ ಆರಂಭದಲ್ಲಿ ಬೆಂಗಳೂರಿಗೆ ಬಂದೆ. ಇಲ್ಲಿ ನನಗೆ ಅತಿ ಹೆಚ್ಚು ಶಾಕ್ ನೀಡಿದ ಸಂಗತಿ ಎಂದರೆ ಬಟ್ಟೆ ಇಸ್ತ್ರಿಗೆ ತೆಗೆದುಕೊಳ್ಳುವ ಹಣ” ಎಂದು ಬರೆದಿದ್ದಾರೆ. ಅವರ ಪ್ರಕಾರ, ನೋಯ್ಡಾದಲ್ಲಿ ಪ್ರತಿ ಬಟ್ಟೆಗೆ ಕೇವಲ 5ರೂ. ಕೊಟ್ಟರೆ ಸಾಕಾಗುತ್ತಿತ್ತು. ಆದರೆ ಬೆಂಗಳೂರಿನ ಇಂದಿರಾನಗರ ಪ್ರದೇಶದಲ್ಲಿ ಪ್ರತಿ ಬಟ್ಟೆಗೆ 12 ರಿಂದ 20ರೂ. ವರೆಗೆ ಕೇಳುತ್ತಿರುವುದು ಅವರಿಗೆ ಅಚ್ಚರಿಯಾಗಿದೆ. ಮುಂಬೈನಿಂದ ಬೆಂಗಳೂರಿಗೆ ಬಂದಿರುವ ತಮ್ಮ ಸ್ನೇಹಿತರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಸ್ತ್ರಿ ದರ ಏಕೆ ದುಬಾರಿ?

ಈ ಬೆಲೆ ವ್ಯತ್ಯಾಸಕ್ಕೆ ಕಾರಣವನ್ನೂ ಸಜಿತ್ ಪೈ ವಿವರಿಸಿದ್ದಾರೆ. ಉತ್ತರ ಭಾರತದ ಹಲವೆಡೆ ಇನ್ನೂ ಕಲ್ಲಿದ್ದಲು ಆಧಾರಿತ ಇಸ್ತ್ರಿ ಪೆಟ್ಟಿಗೆಗಳನ್ನು ಬಳಸಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಬಹುತೇಕ ಇಸ್ತ್ರಿ ಅಂಗಡಿಗಳು ಎಲ್‌ಪಿಜಿ (ಗ್ಯಾಸ್) ಚಾಲಿತ ಇಸ್ತ್ರಿಗಳನ್ನು ಬಳಸುತ್ತಿವೆ.

ಉತ್ತರ ಭಾರತದಲ್ಲಿ ಕಲ್ಲಿದ್ದಲು ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಲಭ್ಯವಾಗಬಹುದು. ಆದರೆ ಬೆಂಗಳೂರಿನಲ್ಲಿ ಗ್ಯಾಸ್ ಬೆಲೆ ಏರಿಕೆ, ಕಾರ್ಮಿಕ ವೆಚ್ಚ ಮತ್ತು ನಗರ ಜೀವನದ ಹೆಚ್ಚಿದ ಖರ್ಚು ಇಸ್ತ್ರಿ ದರ ಹೆಚ್ಚಲು ಪ್ರಮುಖ ಕಾರಣಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮನೆ ಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ಚಹಾ ಬಿಸ್ಕೆಟ್ ಕೊಟ್ಟು ಉಪಚರಿಸುವ ಮಹಿಳೆ

ನೆಟ್ಟಿಗರ ಪ್ರತಿಕ್ರಿಯೆ:

ಸಜಿತ್ ಪೈ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ವಿವಿಧ ನಗರಗಳ ಜನರು ತಮ್ಮ ಊರಿನ ಇಸ್ತ್ರಿ ದರಗಳನ್ನು ಹಂಚಿಕೊಂಡಿದ್ದಾರೆ. ಮುಂಬೈ ಮೂಲದ ಬಳಕೆದಾರರೊಬ್ಬರು, “ಠಾಣೆಯಲ್ಲಿ ಸಾಮಾನ್ಯ ಇಸ್ತ್ರಿಗೆ 7 ಮತ್ತು ಸ್ಟೀಮ್ ಇಸ್ತ್ರಿಗೆ 20ರೂ..ಬೆಂಗಳೂರಿನ ದರ ಕೇಳಿ ನಮಗೂ ಶಾಕ್ ಆಯಿತು” ಎಂದು ಕಾಮೆಂಟ್ ಮಾಡಿದ್ದಾರೆ. ಬೆಂಗಳೂರಿನ ನಿವಾಸಿಯೊಬ್ಬರು, “ಮೊದಲು 10ರೂ. ಇದ್ದ ಇಸ್ತ್ರಿ ದರ, ಗ್ಯಾಸ್ ಸಿಲಿಂಡರ್ ಬೆಲೆ ಏರಿದ ಬಳಿಕ 15 ರಿಂದ 20ರೂ. ಆಯಿತು. ಸಣ್ಣ ಇಂಡೇನ್ ಸಿಲಿಂಡರ್ ಬೆಲೆ ಭಾರೀ ಏರಿಕೆಯಾಗಿದೆ” ಎಂದು ಹೇಳಿದ್ದಾರೆ.

ಮೆಟ್ರೋ ನಗರಗಳ ದುಬಾರಿ ಜೀವನಕ್ಕೆ ಮತ್ತೊಂದು ಉದಾಹರಣೆ:

ಒಟ್ಟಿನಲ್ಲಿ, ಬೆಂಗಳೂರಿನ ಇಸ್ತ್ರಿ ದರದ ಕುರಿತ ಈ ಚರ್ಚೆ ಮೆಟ್ರೋ ನಗರಗಳಲ್ಲಿ ಸಾಮಾನ್ಯ ಸೇವೆಗಳ ವೆಚ್ಚವೂ ಎಷ್ಟು ವೇಗವಾಗಿ ಏರುತ್ತಿದೆ ಎಂಬುದನ್ನು ತೋರಿಸಿದೆ. ಮನೆ ಬಾಡಿಗೆ ಮತ್ತು ಟ್ರಾಫಿಕ್ ಸಮಸ್ಯೆಗಳ ಜೊತೆಗೆ, ಈಗ ದಿನನಿತ್ಯದ ಸಣ್ಣ ಸೇವೆಗಳೂ ಜನರ ಖರ್ಚಿನ ಪಟ್ಟಿಯಲ್ಲಿ ದೊಡ್ಡ ಪಾತ್ರವಹಿಸುತ್ತಿವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *