ಅಕ್ಷಯ್ ಕುಮಾರ್ (Akshay Kumar) ನಟಿಸಿ ನಿರ್ಮಾಣ ಮಾಡಿರುವ ‘ವೆಲ್ ಕಮ್ ಟು ಜಂಗಲ್’ ಹಾಸ್ಯ ಪ್ರಧಾನ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು 100 ಕೋಟಿಗೂ ಹೆಚ್ಚು ಮೊತ್ತ ಗಳಿಸುವ ಮೂಲಕ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಹಾಸ್ಯಪ್ರಧಾನ ಸಿನಿಮಾನಲ್ಲಿ ಬಾಲಿವುಡ್ನ ಹಲವಾರು ಮಂದಿ ನಟ, ನಟಿಯರು ನಟಿಸಿದ್ದಾರೆ. ಭಾರಿ ದೊಡ್ಡ ಸ್ಟಾರ್ ಕಾಸ್ಟ್ ಈ ಸಿನಿಮಾಕ್ಕಿದೆ. ಸಿನಿಮಾನಲ್ಲಿ ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡೀಸ್, ರವೀನಾ ಟಂಡನ್, ಮಾನುಷಿ ಚಿಲ್ಲರ್, ಲಾರಾ ದತ್ತ ಅಂಥಹಾ ಸ್ಟಾರ್ ನಟಿಯರು ಸಹ ಇದ್ದಾರೆ. ನಟಿ ರವೀನಾ ಟಂಡನ್ ಸಹ ಸಿನಿಮಾನಲ್ಲಿ ನಟಿಸಿದ್ದಾರೆ, ಆದರೆ ಸಿನಿಮಾ ಹಿಟ್ ಆದ ಬಳಿಕ ಸಿನಿಮಾದ ಬಗ್ಗೆ ಟೀಕೆ ಮಾಡಿದ್ದಾರೆ.
‘ವೆಲ್ ಕಮ್ ಟು ಜಂಗಲ್’ ಸಿನಿಮಾನಲ್ಲಿ ರವೀನಾ ಟಂಡನ್ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಆದರೆ ಹಾಸ್ಯ ಸಿನಿಮಾಗಳಲ್ಲಿ ನಟಿಯರನ್ನು ಕೇವಲ ಗ್ಲಾಮರ್ಗಾಗಿ ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಟೀಕೆ ಮಾಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ನಟ, ನಿರ್ಮಾಪಕ ಅಕ್ಷಯ್ ಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ. ಏಕೆಂದರೆ ಅವರ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಾಯಕಿಯರನ್ನು ಅತಿಯಾಗಿ ಗ್ಲಾಮರ್ಗೆ ಬಳಸಿಕೊಳ್ಳಲಾಗುತ್ತದೆ. ‘ವೆಲ್ ಕಮ್ ಟು ಜಂಗಲ್’ ಸಿನಿಮಾನಲ್ಲಿಯೂ ಅದೇ ಸೂತ್ರವನ್ನು ಪುನರಾವರ್ತಿಸಲಾಗಿದೆ.
ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಟಿಯರ ಪಾತ್ರದ ಬಗ್ಗೆ ಮಾತನಾಡಿರುವ ರವೀನಾ ಟಂಡನ್, ಮೊದಲೆಲ್ಲ ಹಾಸ್ಯ ಸಿನಿಮಾಗಳಲ್ಲಿ ನಾಯಕಿಯರಿಗೂ ಸಹ ಹಾಸ್ಯ ಮಾಡಲು ಅವಕಾಶ ಇರುತ್ತಿತ್ತು. ಖುದ್ದು ನಾನು (ರವೀನಾ) ‘ಅಂದಾಜ್ ಅಪ್ನಾ ಅಪ್ನಾ’, ‘ಪರದೇಸಿ ಬಹು’, ‘ದೂಲ್ಹೆ ರಾಜ’ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದೇನೆ. ನಟಿಯರು ಅದ್ಭುತವಾಗಿ ಕಾಮಿಡಿ ಮಾಡಬಲ್ಲರು, ಜೂಹಿ ಚಾವ್ಲಾ ಕೆಲವು ನೆನಪುಳಿವ ಹಾಸ್ಯ ದೃಶ್ಯಗಳಲ್ಲಿ ನಟಿಸಿದ್ದಾರೆ. ‘ಮಿಸ್ಟರ್ ಇಂಡಿಯಾ’ ಸಿನಿಮಾನಲ್ಲಿ ಶ್ರೀದೇವಿ ಸಹ ಚಾರ್ಲಿ ಚಾಪ್ಲಿನ್ ಆಗಿ ಕಾಣಿಸಿಕೊಂಡಿದ್ದರು. 90ರ ದಶಕ ಹಾಸ್ಯ ಸಿನಿಮಾಗಳಲ್ಲಿ ನಟಿಯರಿಗೆ ಸುವರ್ಣ ಕಾಲ ಆಗಿತ್ತು’ ಎಂದಿದ್ದಾರೆ.
ಇದನ್ನೂ ಓದಿ:Welcome To The Jungle: 2000 ಕೋಟಿ ರೂ. ನಕಲಿ ಸಿನಿಮಾ; ಫ್ಲಾಪ್ ನಟ ಅಕ್ಷಯ್ ಕುಮಾರ್ ಪರಿಸ್ಥಿತಿ ಇದು
ಆದರೆ ಇತ್ತೀಚೆಗೆ ಹಾಸ್ಯ ಸಿನಿಮಾನಲ್ಲಿ ನಟಿಯರಿಗೆ ಗ್ಲಾಮರ್ ಹೊರತಾಗಿ ಇನ್ಯಾವ ಕೆಲಸವೂ ಇಲ್ಲ. ಕೇವಲ ಗ್ಲಾಮರ್ಗಾಗಿ ಮಾತ್ರವೇ ನಟಿಯರನ್ನು ಹಾಸ್ಯ ಸಿನಿಮಾಗಳಿಗೆ ಹಾಕಿಕೊಳ್ಳಲಾಗುತ್ತದೆ. ಅಲ್ಲಿ ಅವರ ಕೆಲಸ ಕೇವಲ ದೇಹ ತೋರಿಸುವುದಷ್ಟೆ’ ಎಂದು ಟೀಕೆ ಮಾಡಿದ್ದಾರೆ ನಟಿ ರವೀನಾ ಟಂಡನ್.
ಈಗ ಅಕ್ಷಯ್ ಕುಮಾರ್ ನಟನೆಯ ‘ವೆಲ್ ಕಮ್ ಟು ಜಂಗಲ್’ ಸಿನಿಮಾನಲ್ಲಿ ಗ್ಲಾಮರ್ಗೆ ಹೆಸರಾಗಿರುವ ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡೀಸ್ ಅವರುಗಳನ್ನು ಇದೇ ಕಾರಣಕ್ಕೆ ಹಾಕಿಕೊಳ್ಳಲಾಗಿದೆ. ತಮಗೆ ಕೊಟ್ಟಿರುವ ಕೆಲಸವನ್ನು ಆ ನಟಿಯರು ಸಹ ‘ಚೆನ್ನಾಗಿ ನಿರ್ವಹಿಸಿದ್ದಾರೆ’. ಏನೇ ಆಗಲಿ ಸಿನಿಮಾ ಸೂಪರ್ ಹಿಟ್ ಆಗಿದೆ. ನಿರ್ಮಾಪಕ ಅಕ್ಷಯ್ ಕುಮಾರ್ ಜೇಬು ತುಂಬಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
