ಅಗ್ನಿಶಾಮಕ ಇಲಾಖೆ ಹುದ್ದೆಗಳ ಮರು ನಾಮಕರಣಕ್ಕೆ ಸರ್ಕಾರ ಅಸ್ತು: ಇನ್ಮುಂದೆ ಫೈರ್​ಮ್ಯಾನ್ ಅಲ್ಲ ಫೈರ್​​​ಫೈಟರ್ – Kannada News | Karnataka fire department: Fireman Renamed Fire Fighter; 10 percent Women Quota in Recruitment

ಅಗ್ನಿಶಾಮಕ (ಸಂಗ್ರಹ ಚಿತ್ರ)Image Credit source: google

ಬೆಂಗಳೂರು. ಫೆಬ್ರವರಿ 15: ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಅಗ್ನಿಶಾಮಕ ಇಲಾಖೆಯ ಹುದ್ದೆ ಮರು ನಾಮಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಇನ್ಮುಂದೆ ‘ಫೈರ್‌ಮ್ಯಾನ್’ (Fireman) ಬದಲಿಗೆ ‘ಫೈರ್ ಫೈಟರ್’ (Fire Fighter) ಎಂದು ಬದಲಾವಣೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಸಭೆಯ ತೀರ್ಮಾನದಂತೆ ಕ್ರಮಕೈಗೊಳ್ಳಲಾಗಿದೆ. ಆ ಮೂಲಕ ಅಗ್ನಿಶಾಮಕ ಇಲಾಖೆಯ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಲು ಸಿದ್ಧತೆ ನಡೆದಿದೆ.

ಆದೇಶದಲ್ಲೇನಿದೆ? 

ಕೇಂದ್ರ ಗೃಹ ಸಚಿವಾಲಯವು SFAC ಸಭೆಯಲ್ಲಿ ತೀರ್ಮಾನಿಸಿದಂತೆ ಅಗ್ನಿಶಾಮಕ ಇಲಾಖೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಫೈರ್‌ಮ್ಯಾನ್ ಹುದ್ದೆಯ ಹೆಸರನ್ನು ಫೈರ್ ಫೈಟರ್ ಎಂದು ಬದಲಾಯಿಸಲು ಅಗತ್ಯ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ರಾಜ್ಯಾದ್ಯಂತ ಏರುತ್ತಿದೆ ಗರಿಷ್ಠ ತಾಪಮಾನ, ಕರಾವಳಿ ಜಿಲ್ಲೆಗಳಲ್ಲಿ ಸೆಕೆ ಸೆಕೆ

ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಇವರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು 1964 ರಿಂದ ಜಾರಿಗೆ ಬಂದಿದ್ದು, ಅಗ್ನಿ ಅವಘಡ, ಪ್ರಕೃತಿ ವಿಕೋಪ, ನೆರೆ ಹಾವಳಿ, ಜಾನುವಾರುಗಳ ರಕ್ಷಣೆ, ವಿವಿಧ ಕಟ್ಟಡಗಳಲ್ಲಿ ಅಗ್ನಿಸುರಕ್ಷತೆ ಹಾಗೂ ಇತ್ಯಾದಿಗಳಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುತ್ತ ಬಂದಿದ್ದಾರೆ.

ಈ ಇಲಾಖೆಯಲ್ಲಿ ಪ್ರಸ್ತುತ ಒಟ್ಟು 7159 ವಿವಿಧ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ವಿವಿಧ ಹುದ್ದೆಗಳಲ್ಲಿ ಪ್ರಸ್ತುತ 5272 ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವುಗಳ ಪೈಕಿ ‘ಅಗ್ನಿಶಾಮಕ’ ಮತ್ತು ‘ಅಗ್ನಿಶಾಮಕ ಠಾಣಾಧಿಕಾರಿ’ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಶೇ.10 ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲು ಕ್ರಮಕೈಗೊಳ್ಳಲಾಗಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ಗುಡ್ ನ್ಯೂಸ್; ಬಳ್ಳಾರಿ- ಹೊಸಪೇಟೆ ನಡುವೆ ಹೊಸ ರೈಲು ಮಾರ್ಗಕ್ಕೆ ಒಪ್ಪಿಗೆ

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿಯಮಗಳು, 2013 ‘ಫೈರ್ ಮ್ಯಾನ್’ ಬದಲಿಗೆ ‘ಫೈರ್ ಫೈಟರ್’ ಹುದ್ದೆಗಳ ಪದನಾಮವಿರುತ್ತದೆ. ಈ ಹುದ್ದೆಗಳ ಪದನಾಮವನ್ನು ಅನುಕ್ರಮವಾಗಿ ‘ಲೀಡಿಂಗ್ ಫೈರ್‌ಮ್ಯಾನ್’ ಹುದ್ದೆಯು ‘ಲೀಡಿಂಗ್ ಫೈರ್ ಫೈಟರ್’ ಎಂದು ಮರು ನಾಮಕರಣಗೊಳಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *