ತಮಿಳು ಚಿತ್ರರಂಗದ ನಟ ಅಜಿತ್ ಕುಮಾರ್ (Ajit Kumar) ಇತ್ತೀಚೆಗೆ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿರಲಿಲ್ಲ. ಈಗ ಅವರು ಹೊಸ ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಅಭಿಮಾನಿಗಳಿಗೆ ಒಂದೇ ದಿನ ಎರಡೆರಡು ಸಿಹಿ ಸುದ್ದಿ ಸಿಕ್ಕಿದೆ. ಅಜಿತ್ ಅವರ 64ನೇ ಸಿನಿಮಾಗೆ ‘ಡೇರ್ಡೆವಿಲ್’ ಎಂದು ಶೀರ್ಷಿಕೆ ಇಡಲಾಗಿದೆ. ಇದರ ಜೊತೆಗೆ ಅಜಿತ್ ಅವರ ಕಾರು ರೇಸಿಂಗ್ ಪಯಣದ ಕುರಿತ ‘ಗ್ಲಾಡಿಯೇಟರ್ಸ್’ ಸಾಕ್ಷ್ಯಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.
ಶಾಲಿನ್ ನಿರ್ಮಾಣದ ‘ಡೇರ್ಡೆವಿಲ್’
ಅಜಿತ್ ಅಭಿನಯದ ‘ಎಕೆ 64’ ಸಿನಿಮಾವನ್ನು ಅಧಿಕೃತವಾಗಿ ‘ಡೇರ್ಡೆವಿಲ್’ ಎಂದು ಕರೆಯಲಾಗಿದೆ. ಈ ಸಿನಿಮಾವನ್ನು ನಿರ್ದೇಶಕ ಅಧಿಕ್ ರವಿಚಂದ್ರನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅಜಿತ್ ಅವರ ಪತ್ನಿ ಶಾಲಿನ್ ಚಿತ್ರರಂಗಕ್ಕೆ ಮರಳಿದ್ದಾರೆ. ಅವರು ‘ಬ್ರೇವ್ ಹಾರ್ಟ್ಸ್ ಪ್ರೊಡಕ್ಷನ್’ ಎಂಬ ಹೊಸ ಬ್ಯಾನರ್ ಆರಂಭಿಸಿದ್ದಾರೆ. ಈ ಬ್ಯಾನರ್ ಅಡಿಯಲ್ಲೇ ಸಿನಿಮಾ ನಿರ್ಮಾಣವಾಗಲಿದೆ. ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸಲಿದೆ ಎಂಬ ಇಂಗಿತವನ್ನು ತಂಡ ವ್ಯಕ್ತಪಡಿಸಿದೆ.
34 years of breaking barriers, inspiring millions, and redefining stardom. A journey built on passion, perseverance, and unmatched charisma-💥🎲 #DareDevil 🎲💥 is here , This is going to be very Special❤️🙏🏻 Thank you My Sir🙏🏻 #Ajithkumar sir for the Trust & Support❤️🙏🏻Thank you… pic.twitter.com/rW71vGZmTW
— Adhik Ravichandran (@Adhikravi) August 3, 2026
#GLADIATORS – In Pursuit of Challenges
Directed by #Vijay @Akracingoffl @goldentrophyllp
Music by @gvprakash @SureshChandraa @rajakrishnan_mr @editoranthony #SandeepKVijay @madhankarky @DoneChannel1 @swathysekaran @AbdulNassarOffl pic.twitter.com/yQCS3fhgyL— Suresh Chandra (@SureshChandraa) August 3, 2026
ಸಿನಿಮಾದ ಚಿತ್ರಕಥೆ ಈಗಾಗಲೇ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಇದು ಅಜಿತ್ ಮತ್ತು ಅನಿರುದ್ಧ್ ಕಾಂಬಿನೇಷನ್ನ ನಾಲ್ಕನೇ ಸಿನಿಮಾವಾಗಿದೆ.
ರೇಸಿಂಗ್ ಸಾಕ್ಷ್ಯಚಿತ್ರ ‘ಗ್ಲಾಡಿಯೇಟರ್ಸ್’ ಫಸ್ಟ್ ಲುಕ್
ಅಜಿತ್ ಅವರ ಮೋಟಾರ್ ಸ್ಪೋರ್ಟ್ಸ್ ರೇಸಿಂಗ್ ಜೀವನದ ಕುರಿತು ಸಾಕ್ಷ್ಯಚಿತ್ರ ತಯಾರಾಗಿದೆ. ಈ ಸಾಕ್ಷ್ಯಚಿತ್ರಕ್ಕೆ ‘ಗ್ಲಾಡಿಯೇಟರ್ಸ್: ಇನ್ ಪರ್ಸ್ಯೂಟ್ ಆಫ್ ಚಾಲೆಂಜಸ್’ ಎಂದು ಹೆಸರಿಡಲಾಗಿದೆ. ಸೋಮವಾರ ಇದರ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.
ಇದನ್ನೂ ಓದಿ: ಅಜಿತ್ಗೆ ದೊಡ್ಡ ಮೊತ್ತದ ಸಂಭಾವನೆ ಕೊಡಲು ನಿರ್ಮಾಪಕರ ಹಿಂದೇಟು? ಶುರುವಾಗಿದೆ ಭಯ
ಈ ಸಾಕ್ಷ್ಯಚಿತ್ರವನ್ನು ಎ.ಎಲ್. ವಿಜಯ್ ನಿರ್ದೇಶಿಸಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಇದು ಸುಮಾರು 90 ನಿಮಿಷಗಳ ಸಾಕ್ಷ್ಯಚಿತ್ರವಾಗಿದೆ. ದುಬೈ ಮತ್ತು ಯುರೋಪ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ರೇಸಿಂಗ್ ಟ್ರ್ಯಾಕ್ಗಳ ದೃಶ್ಯಗಳು ಇದರಲ್ಲಿವೆ. ಅಜಿತ್ ಕುಮಾರ್ ಸ್ವತಃ ‘ಅಜಿತ್ ಕುಮಾರ್ ರೇಸಿಂಗ್’ ತಂಡದ ಮಾಲೀಕರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.