ಅಜ್ಜಿ ಮೊಮ್ಮಗ ಕ್ಯೂಟ್ ಸಂಭಾಷಣೆImage Credit source: Instagram
ಕೆಲವರಿಗೆ ತಮ್ಮ ಹೆತ್ತವರಿಗಿಂತ ತಮ್ಮ ಅಜ್ಜ ಅಜ್ಜಿಯೇ (grand parents) ಎಲ್ಲವೂ ಆಗಿರುತ್ತಾರೆ. ಈ ಹಿರಿಜೀವಗಳ ಪ್ರೀತಿ, ಕಾಳಜಿಯೊಂದಿಗೆ ಬೆಳೆಯುತ್ತಾರೆ. ಇದೀಗ ಪುಟಾಣಿಯೊಂದು ತನ್ನ ಅಜ್ಜಿಯ ಮಾತಿಗೆ ಕ್ಯೂಟ್ ರಿಯಾಕ್ಷನ್ ನೀಡಿದೆ. ಅಡುಗೆ ಮನೆಯಲ್ಲಿ ಅಜ್ಜಿ ಹಾಗೂ ಮೊಮ್ಮಗನ ಸಿಹಿಯಾದ ಸಂವಾದವು ಹೃದಯಸ್ಪರ್ಶಿ ಕ್ಷಣವಾಗಿ ಮಾರ್ಪಟ್ಟಿದೆ. ಅಜ್ಜಿ ಉಪ್ಪಿನಕಾಯಿ ತಯಾರಿಸುವುದರಲ್ಲಿ ಬ್ಯುಸಿಯಾಗಿದ್ರೆ ಪುಟ್ಟ ಕಂದಮ್ಮ ತನ್ನನ್ನು ಎತ್ತಿಕೊಳ್ಳುವಂತೆ ಕೈ ಚಾಚಿರುವ ವಿಡಿಯೋ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ದೃಶ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ವಂದನಾ ವರ್ಮ (@vandanaverma911) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಅಜ್ಜಿ ಹಾಗೂ ಪುಟಾಣಿ ಕ್ಯೂಟ್ ಸಂಭಾಷಣೆಯನ್ನು ನೋಡಬಹುದು. ಅಡುಗೆ ಮನೆಯಲ್ಲಿ ಅಜ್ಜಿ ಉಪ್ಪಿನಕಾಯಿ ತಯಾರಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಮೊಮ್ಮಗನನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಂಭಾಷಣೆಯಲ್ಲಿ ತೊಡಗಿದ್ದಾರೆ. ಪುಟಾಣಿ ಅಜ್ಜಿ ಏನು ಮಾಡುತ್ತಿದ್ದಾಳೆಂದು ಬಹಳ ಕುತೂಹಲದಿಂದ ನೋಡುತ್ತಿದ್ದಾನೆ.
ತನ್ನ ಮೊಮ್ಮಗನ ಬಳಿ ಅಜ್ಜಿ ಏನು ಮಾಡ್ತಾ ಇದ್ದಾಳೆ ಎಂದು ಕೇಳುತ್ತಾಳೆ. ಕೊನೆಗೆ ಉಪ್ಪಿನಕಾಯಿ ಮಾಡುತ್ತಿದ್ದಾಳೆ ಎಂದು ಉತ್ತರಿಸಿದ್ದಾಳೆ. ಆ ಬಳಿಕ ಕತ್ತರಿಸಿಟ್ಟ ಮಾವಿನಕಾಯಿ ತುಂಡುಗಳಲ್ಲಿ ಸಣ್ಣ ತುಂಡನ್ನು ಮೊಮ್ಮಗ ಕೈಗೆ ಕೊಟ್ಟು ತಿನ್ನಲು ಹೇಳುವುದನ್ನು ನೀವು ನೋಡಬಹುದು. ತದನಂತರ ಕೀಟಲೆ ಮಾಡುತ್ತಾ ನನ್ನ ಬಾಯಲ್ಲಿ ನೀರೂರುತ್ತಿದೆ ಎಂದು ಹೇಳುವುದನ್ನು ಕಾಣಬಹುದು. ಈ ಪುಟಾಣಿಗೆ ಮಾವಿನಕಾಯಿ ತಿನ್ನುವಂತೆ ಅಜ್ಜಿ ಹೇಳಿದ್ದಾಳೆ. ಆದರೆ ಪುಟಾಣಿ ತನ್ನ ಎರಡು ಕೈಗಳನ್ನು ಚಾಚಿ ಮುಂದಕ್ಕೆ ಬಾಗಿದ್ದು ಅಜ್ಜಿಯ ಅಪ್ಪುಗೆಯನ್ನು ಬಯಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: 87ರ ವಯಸ್ಸಿನಲ್ಲಿ ಮೊದಲ ಬಾರಿ ಸಮುದ್ರ ತೀರಕ್ಕೆ ಹೋದ ಅಜ್ಜಿ, ರಿಯಾಕ್ಷನ್ ಹೇಗಿತ್ತು ನೋಡಿ
ಈ ವಿಡಿಯೋ ತೊಂಭತ್ತು ಸಾವಿರಕ್ಕೂ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಜ್ಜಿಯನ್ನು ಪ್ರೀತಿಸುವುದು ಇದೇ ಕಾರಣಕ್ಕೆ ಎಂದಿದ್ದಾರೆ. ಇನ್ನೊಬ್ಬರು, ಈ ಪುಟಾಣಿ ತುಂಬಾ ಒಳ್ಳೆಯವನು. ಈ ವಯಸ್ಸಿನ ಮಕ್ಕಳು ತಮ್ಮ ಕೈಯಲ್ಲಿರುವುದನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅಜ್ಜ ಅಜ್ಜಿಯ ಪ್ರೀತಿ ಸಿಕ್ಕಿರುವವರೇ ಪುಣ್ಯವಂತರು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 7:55 pm, Thu, 11 June 26