ಬಾಗಲಕೋಟೆ, (ಏಪ್ರಿಲ್ 24): ಬಾಗಲಕೋಟೆ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ (Bagalkot University Convocation) ಅದ್ಧೂರಿಯಾಗಿ ಜರುಗಿತು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರಧಾನ, ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿ ಗೌರವಿಸಲಾಯ್ತು. ಇನ್ನು ಮಕ್ಕಳ ತಾಯಿ ಆಗಿರುವ ಅಯಿಷಾ ಇಂಗ್ಲೀಷ್‌ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಎಲ್ಲರ ಗಮನಸೆಳೆದಿದರು.
ಹೌದು..ನಾಲ್ಕು ತಿಂಗಳ ಹಾಗೂ ಎರಡು ವರ್ಷದ ಮಕ್ಕಳನ್ನು ಕಟ್ಟಿಕೊಂಡು ಆಯಿಷಾ ಚಿನ್ನದ ಪದಕ ಗಳಿಸಿದ್ದು ವಿಶೇಷವಾಗಿದೆ. ಪತಿ ಹಾಗೂ ಅತ್ತೆಯ ಸಹಕಾರದಿಂದ ಇಂಗ್ಲೀಷ್‌ನಲ್ಲಿ ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು ಎಂದು ನಗೆ ಬೀರಿದರು.
