ಅನುಪಮಾ ಬ್ರೇಕಪ್​ಗೆ ಧ್ರುವ್ ಕಾರಣವೇ? ಕೊನೆಗೂ ಮೌನ ಮುರಿದ ನಟ – Kannada News | Dhruv Vikram Breaks Silence on Personal Life Criticism and Relationship Rumors

ತಮಿಳು ಚಿತ್ರರಂಗದ ಯುವ ನಟ ಧ್ರುವ ವಿಕ್ರಮ್ (Dhruv Vikram) ತಮ್ಮ ವೈಯಕ್ತಿಕ ಜೀವನದ ಮೇಲಿನ ಟೀಕೆಗಳ ಕುರಿತು ಮೌನ ಮುರಿದಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇಂತಹ ಟೀಕೆಗಳು ಸಹಜ ಎಂದು ಅವರು ಒಪ್ಪಿಕೊಂಡಿದ್ದಾರೆ. ಆರಂಭದಲ್ಲಿ ಈ ಮಾತುಗಳು ತಮ್ಮ ಮನಸ್ಸಿಗೆ ನೋವು ಉಂಟುಮಾಡಿದ್ದವು ಎಂದು ಅವರು ತಿಳಿಸಿದ್ದಾರೆ. ಆದರೆ ಚಿತ್ರರಂಗಕ್ಕೆ ಬಂದಮೇಲೆ ಇವೆಲ್ಲವನ್ನೂ ಎದುರಿಸಲು ಸಿದ್ಧವಾಗಿರುವುದಾಗಿ ಧ್ರುವ ಧೈರ್ಯದಿಂದ ಹೇಳಿದ್ದಾರೆ.

ಋಣಾತ್ಮಕ ಚಿಂತನೆಗಳಿಗೆ ಧ್ರುವ ಗುಡ್‌ಬೈ

ತಮ್ಮ ವಿರುದ್ಧ ಕೇಳಿಬರುವ ಋಣಾತ್ಮಕ ಮಾತುಗಳಿಗೆ ಧ್ರುವ ಯಾವುದೇ ಕಿವಿಕೊಡುತ್ತಿಲ್ಲ. ‘ಮನುಷ್ಯ ಸತ್ಯದ ಹಾದಿಯಲ್ಲಿ ಸಾಗಿದಾಗ ಹೊರಗಿನ ಅಪಸ್ವರಗಳು ತಾನಾಗಿಯೇ ಅಳಿದುಹೋಗುತ್ತವೆ. ಈ ಸತ್ಯವನ್ನು ನಾನು ಜೀವನದಲ್ಲಿ ದೃಢವಾಗಿ ನಂಬಿದ್ದೇನೆ. ನನ್ನನ್ನು ಪ್ರೀತಿಸುವ ಮತ್ತು ಬೆಂಬಲಿಸುವ ಅಭಿಮಾನಿಗಳಿಂದ ನಾನು ಶಕ್ತಿ ಕಂಡುಕೊಳ್ಳುತ್ತಿದ್ದೇನೆ. ಪ್ರತಿಯೊಂದು ನೆಗೆಟಿವ್ ವಿಚಾರವನ್ನು ಧನಾತ್ಮಕವಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಂಡಿದ್ದೇನೆ’ ಎಂದಿದ್ದಾರೆ ಅವರು.

ಕಷ್ಟದ ಸಮಯದಲ್ಲಿ ಜೊತೆ ನಿಂತ ಆಪ್ತರು

ಧ್ರುವ ವಿಕ್ರಮ್ ಅವರಿಗೆ ಅತ್ಯಂತ ಆಪ್ತರಾದ ಸಣ್ಣ ಸ್ನೇಹಿತರ ಬಳಗವಿದೆಯಂತೆ. ‘ನನ್ನ ಜೀವನದ ಪ್ರತಿಯೊಂದು ಕಷ್ಟದ ಹಂತದಲ್ಲೂ ಈ ಗೆಳೆಯರು ಜೊತೆಯಾಗಿ ನಿಂತಿದ್ದಾರೆ. ಇಂತಹ ಪ್ರೀತಿಯ ಆಪ್ತರ ಪ್ರೋತ್ಸಾಹವೇ ನನಗೆ ಮುಂದೆ ಸಾಗಲು ದೊಡ್ಡ ಧೈರ್ಯ ನೀಡಿದೆ. ಚಿತ್ರರಂಗದಲ್ಲಿ ಮತ್ತಷ್ಟು ಸಾಧನೆ ಮಾಡಲು ಈ ಬೆಂಬಲವೇ ಮೂಲ ಕಾರಣವಾಗಿದೆ. ವೃತ್ತಿಜೀವನದತ್ತ ಸಂಪೂರ್ಣ ಗಮನ ಹರಿಸಲು ಈ ಸೌಹಾರ್ದತೆ ಸಹಕಾರಿಯಾಗಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಅನುಪಮಾ ಪರಮೇಶ್ವರನ್ ಮಾಡಿದ ಟೀಕೆಗಳಿಗೆ ಧ್ರುವ್ ವಿಕ್ರಮ್ ತಿರುಗೇಟು

ಬ್ರೇಕಪ್ ಸುದ್ದಿ

ಅನುಪಮಾ ಪರಮೇಶ್ವರನ್ ಹಾಗೂ ಧ್ರುವ್ ಲವ್ ಬ್ರೇಕಪ್ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ನಟಿ ತಮ್ಮ ಸಂಬಂಧದಲ್ಲಿದ್ದ ಕಹಿ ನೆನಪುಗಳ ಕುರಿತು ಬಹಿರಂಗವಾಗಿ ಮಾತನಾಡಿದ್ದರು. ಕಳೆದ ಎರಡು ವರ್ಷಗಳಲ್ಲಿ ಅನುಭವಿಸಿದ ಮಾನಸಿಕ ಕಿರುಕುಳದ ಬಗ್ಗೆಯೂ ಅನುಪಮಾ ಹೇಳಿಕೊಂಡಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಧ್ರುವ್ ಈ ಎಲ್ಲ ಆರೋಪಗಳಿಗೆ ತಲೆ ಕೆಡಿಸಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *