ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ, ಆತಂಕದಲ್ಲಿ ಆಕೆಯ ಪೋಷಕರು – Kannada News | Hindu Young Woman Escaped With Muslim Youth at Mangaluru, Case Booked In surathkal Police station

ಮಂಗಳೂರು, (ಫೆಬ್ರವರಿ 10): ಅನ್ಯಕೋಮಿನ ಯುವಕನೊಂದಿಗೆ ಹಿಂದೂ (Hindu) ಯುವತಿ ಪರಾರಿಯಾಗಿರುವ ಘಟನೆ ಮಂಗಳೂರಿನ (Mangaluru) ಸುರತ್ಕಲ್​​ನಲ್ಲಿ ನಡೆದಿದೆ. ಸುರತ್ಕಲ್​ನ ಮುಕ್ಕ ಕಾಲೇಜಿನಲ್ಲಿ ಓದುತ್ತಿದ್ದ ಕಾಸರಗೋಡು ಆರ್.ಡಿ‌.ನಗರದ ಮೀಪುಗುರಿ ನಿವಾಸಿಯಾದ ವೈಶಾಲಿ ಪರಾರಿಯಾಗಿದ್ದು, ಜನವರಿ 31ರಂದು ಮಿದ್ಲಾಜ್ ಜತೆ ರಿಜಿಸ್ಟರ್​ ಮ್ಯಾರೇಜ್ ಆಗಿರುವ ಮಾಹಿತಿ ತಿಳಿದುಬಂದಿದೆ. ಆದ್ರೆ, ಮಗಳು ಸಂಪರ್ಕಕ್ಕೆ ಸಿಗದಿದ್ದರಿಂದ ಕಂಗಾಲಾಗಿರುವ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮನೆಯವರೆಗೆ ತಿಳಿಸದೇ ಜನವರಿ 31ರಂದು ಕೇರಳದ ವಯನಾಡು ನೋಂದಣಾಧಿಕಾರಿ ಕಚೇರಿಯಲ್ಲಿ ವೈಶಾಲಿ ಹಾಗೂ ಮಿದ್ಲಾಜ್ ರಿಜಿಸ್ಟರ್ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ ವಿಷಯ ತಿಳಿದ ಪೋಷಕರು, ಆಕೆ ಇದ್ದ ಪಿಜಿಗೆ ಬಂದು ವಿಚಾರಿಸಿದ್ದು, ಫೆಬ್ರವರಿ‌ 9ರಂದು ಪಿಜಿಯಿಂದ ತೆರಳಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಅಷ್ಟೇ. ಆದ್ರೆ, ಆಕೆ ಎಲ್ಲಿ ಹೋಗಿದ್ದಾಳೆ ಎನ್ನುವುದು ಗೊತ್ತಾಗಿಲ್ಲ. ಇದರಿಂದ ಭಯಗೊಂಡ ವೈಶಾಲಿ ಪೋಷಕರು, ನೀಡಿದ ದೂರಿನ ಮೇರೆಗೆ ಸುರತ್ಕಲ್ ಠಾಣೆಯಲ್ಲಿ ಎಫ್​​ಐಆರ್​​ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್‌ ‘ಚಿನ್ನು ಪಾಪು’ ಶವ ಪತ್ತೆ

ಬೇರೆ ಕಾಲೇಜಿಗೆ ಸೇರಲು ವಿದ್ಯಾರ್ಥಿನಿ ಕಿಡ್ನಾಪ್ ನಾಟಕ

ಇನ್ನೊಂದು ಕಡೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಸುದೇಮುಗೇರು ಬಳಿ ನಿನ್ನೆ ಶಾಕಿಂಗ್ ಸುದ್ದಿ ಬಂದಿತ್ತು.. ಕಾಶಿಬೆಟ್ಟುನಲ್ಲಿರುವ ಕಾಲೇಜಿನಲ್ಲಿ ಪ್ರಥಮ ಪಿಯು ಓದ್ತಿದ್ದ ವಿದ್ಯಾರ್ಥಿನಿ, ನನ್ನನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ರು ಅಂತೇಳಿದ್ಳು. ಪೊಲೀಸರು, ಶಾಸಕರೆಲ್ಲ ಸ್ಥಳಕ್ಕೆ ದೌಡಾಯಿಸಿದ್ರು.. ಸ್ಕೂಟಿಯಲ್ಲಿ ನಾನು ಕಾಲೇಜಿಗೆ ಹೋಗ್ತಿದ್ದಾಗ, ಓಮ್ನಿ ಕಾರಿನಲ್ಲಿ ಮೂವರು ಮಾಸ್ಕ್​​ ಧಾರಿಗಳು ನನ್ನ ಅಪಹರಿಸಲು ಯತ್ನಿಸಿದ್ರು. ನಾನು ಕಿರುಚಿಕೊಂಡಾಗ ಚೂರಿ ಇರಿದ್ರು. ನಾನು ಅವರಿಂದ ತಪ್ಪಿಸಿಕೊಂಡೇ, ನನ್ನ ಬ್ಯಾಗ್​​​ ಅವರೇ ಕೊಂಡೊಯ್ದರು ಅಂತೇಳಿದ್ದಳು. ಬಳಿಕ ತಂಡ ತಂಡವಾಗಿ ಪೊಲೀಸರು ತನಿಖೆಗೆ ಇಳಿದಾಗ, ಘಟನಾ ಸ್ಥಳದ ಅನತಿ ದೂರದಲ್ಲೇ ಬ್ಯಾಗ್ ಸಿಕ್ಕಿತ್ತು. ಅದರಲ್ಲಿ ನೀರಿನ ಬಾಟೆಲ್​ ಬಿಟ್ಟು ಪುಸ್ತಕಗಳು ನಾಪತ್ತೆ ಆಗಿದ್ದವು.

ಪೊಲೀಸರು ಯಾವ ಆ್ಯಂಗಲ್​​ನಲ್ಲಿ ಹುಡುಕಾಡಿದ್ರೂ ಕಿಡ್ನ್ಯಾಪರ್ಸ್​ ಸುಳಿವು ಸಿಗಲಿಲ್ಲ. ನಂತರ ಬಾಲಕಿಯನ್ನೇ ವಿಶ್ವಾಸಕ್ಕೆ ತೆಗೊಂಡು ವಿಚಾರಿಸಿದಾಗ, ಕಿಡ್ನಾಪ್ ನಡೆದೇ ಇಲ್ಲ ಅನ್ನೋದು ಗೊತ್ತಾಗಿದೆ. ಬೆಳ್ತಂಗಡಿ ಕಾಲೇಜಿನ ಬದಲು ಮಂಗಳೂರು ಕಾಲೇಜಿಗೆ ಸೇರಿಸುವಂತೆ ಬಾಲಕಿ ಕೇಳಿದ್ದಕ್ಕೆ ತಂದೆ ಒಪ್ಪಿರಲಿಲ್ವಂತೆ. ಹೀಗಾಗಿ ಬಾಲಕಿಯೇ ಕಿಡ್ನ್ಯಾಪ್​ ಕಥೆ ಕಟ್ಟಿರೋದು ಗೊತ್ತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *