Headlines

ಅಪಘಾತದಲ್ಲಿ ಯುವಕ-ಯುವತಿ ದುರ್ಮರಣ: ಆದಿಯೋಗಿ ದರ್ಶನ ಪಡೆದು ಮರಳುತ್ತಿದ್ದವರು ಮಸಣಕ್ಕೆ – Kannada News | Young Man and Woman Die in Road Accident While Returning from Adiyogi Visit

ಚಿಕ್ಕಬಳ್ಳಾಪುರ, ಆಗಸ್ಟ್​​ 16: ಲಾರಿ ಡಿಕ್ಕಿಯಾಗಿ (accident) ಬೈಕ್​​ನಲ್ಲಿ ತೆರಳುತ್ತಿದ್ದ ಯುವಕ, ಯುವತಿ ದುರ್ಮರಣ ಹೊಂದಿರುವಂತಹ (death) ಘಟನೆ ಚಿಕ್ಕಬಳ್ಳಾಪುರ (chikkaballapur) ತಾಲೂಕಿನ ಲಿಂಗಶೆಟ್ಟಿಪುರ ಗೇಟ್ ಬಳಿ ನಡೆದಿದೆ. ಮೃತ ಯುವಕ-ಯುವತಿ ಉತ್ತರ ಪ್ರದೇಶ ಮೂಲದವರು ಎಂದು ತಿಳಿದುಬಂದಿದೆ. ಚಿಕ್ಕಬಳ್ಳಾಪುರ ಸಮೀಪರುವ ಈಶಾ ಆದಿಯೋಗಿ ದರ್ಶನ ಪಡೆದು ಬೈಕ್‌ನಲ್ಲಿ ವಾಪಸ್ ಮರಳುತ್ತಿದ್ದರು. ಈ ವೇಳೆ ಲಿಂಗಶೆಟ್ಟಿಪುರ ಗೇಟ್ ಬಳಿ ವೇಗವಾಗಿ ಬಂದ ಲಾರಿಯೊಂದು ಇವರ ಬೈಕ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೇತುವೆಗೆ ಕಾರು ಡಿಕ್ಕಿ: ಮಾಗಡಿ ಮೂಲದ ಇಬ್ಬರು ದುರ್ಮರಣ, 7 ಮಂದಿಗೆ ಗಾಯ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಎರ್ಟಿಗಾ ಕಾರು ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ರಭಸವಾಗಿ ಡಿಕ್ಕಿ ಹೊಡಿದಿದ್ದು, ಇಬ್ಬರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರು: ಕರ್ತವ್ಯನಿರತ ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ; ಬಾಡಿ ಶೇಮಿಂಗ್ ಮಾಡಿದ ನಾಲ್ವರ ವಿರುದ್ಧ FIR

ಕಾರಿನಲ್ಲಿದ್ದ ರಾಮನಗರ ಜಿಲ್ಲೆಯ ಮಾಗಡಿ ಮೂಲದ ಶಿವಕುಮಾರ್ (37) ಹಾಗೂ ಮಲ್ಲಯ್ಯ (40) ಮೃತರು. ಕಾರಿನಲ್ಲಿದ್ದ ಉಳಿದ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಬೈಕ್‌ಗೆ ಕ್ಯಾಂಟರ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಬೈಕ್‌ಗೆ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಕ್ಯಾಂಟರ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರನ ಕಾಲು ಕಟ್ಟ ಆದ ಘಟನೆ ಮೊನ್ನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹುದುಕುಳ ಗೇಟ್‌ ಬಳಿ ನಡೆದಿದೆ. ಬೆಂಗಳೂರಿನ ಖಾಸಗಿ ಕಂಪನಿಗೆ ಕೆಲಸಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು.

ಇದನ್ನೂ ಓದಿ: ಗೇಲೆ ಮಾಡಿದ್ದಕ್ಕೆ ಕೊಲೆ: ರೀಲ್ಸ್ ನೋಡಿಕೊಂಡು ಗೆಳೆಯನಿಗೆ ಕೀಟಲೆ ಮಾಡಿದವನ ಹೆಣ ಬಿತ್ತು!

ಬಂಗಾರಪೇಟೆ ತಾಲೂಕಿನ ಸೋರೇಗೌಡನ ಕೋಟೆ ನಿವಾಸಿ ಸಂದೀಪ್ ಕುಮಾರ್ (27) ಮೃತಪಟ್ಟಿದ್ದು, ರೆಡ್ಡಹಳ್ಳಿ ನಿವಾಸಿ ರಾಜು (26) ಗಾಯಾಳು. ಸದ್ಯ ಗಾಯಾಳು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *