ನವದೆಹಲಿ, ಜುಲೈ 30: ಕ್ಯಾನ್ಸರ್(Cancer) ರೋಗದಿಂದ ಕಣ್ಮುಚ್ಚುವ ಕೆಲವೇ ಕ್ಷಣಗಳ ಮುನ್ನ, ತಂದೆಯೊಬ್ಬರು ತಮ್ಮ ಮುಗ್ದ ಮಗನಿಗೆ ಕೊನೆಯ ಉಪದೇಶ ನೀಡುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ನೆಟ್ಟಿಗರನ್ನು ಕಣ್ಣೀರಿಡುವಂತೆ ಮಾಡಿದೆ. ವೋಕ್ ಎಮಿನೆಂಟ್ ಎಂಬ ಎಕ್ಸ್ ಬಳಕೆದಾರರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಮಾಸ್ಕ್ ಧರಿಸಿರುವ ತಂದೆಯೊಬ್ಬರು ತನ್ನ ಸಾವು ಹತ್ತಿರದಲ್ಲಿದೆ ಎಂದು ತಿಳಿದೂ ಅತ್ಯಂತ ಶಾಂತವಾಗಿ ಪಕ್ಕದಲ್ಲಿದ್ದ ತಮ್ಮ ಚಿಕ್ಕ ಮಗ ‘ಮಂತ್ರ’ನಿಗೆ ಧೈರ್ಯ ತುಂಬಿದ್ದಾನೆ. ತನ್ನ ಸಾವು ಮಗನ ಮುಗ್ಧ ಮನಸ್ಸಿನ ಮೇಲೆ ಆಘಾತ ಉಂಟುಮಾಡಬಾರದೆಂದು ಮೃದುವಾಗಿ ತಿಳಿಸಿ ಹೇಳಿದ್ದಾರೆ.
‘‘ಮಂತ್ರ, ನಾನು ನಿನ್ನ ಬಿಟ್ಟು ದೂರ ಹೋದರೆ ಅಮ್ಮನ ಮಾತು ಕೇಳು, ಹಠ ಮಾಡಬೇಡ, ನಿನ್ನ ಅಮ್ಮ ಮತ್ತು ಇಬ್ಬರು ಸಹೋದರಿಯರನ್ನು ಜವಾಬ್ದಾರಿಯಿಂದ ಚೆನ್ನಾಗಿ ನೋಡಿಕೋ. ‘ಅಪ್ಪ ಎಲ್ಲಿಗೆ ಹೋದರು?’ ಅಂತ ಯಾವತ್ತೂ ಕೇಳಬೇಡ. ನೀನು ನನ್ನನ್ನು ನೆನಪಿಸಿಕೊಂಡಾಗಲೆಲ್ಲಾ ನಾನು ನಿನ್ನ ಆಸುಪಾಸಿನಲ್ಲೇ ಇರುತ್ತೇನೆ” ಎಂದು ಹೇಳಿದ್ದಾರೆ. ತಾನಿಲ್ಲದಿದ್ದರೂ ಮಗ ಧೈರ್ಯವಾಗಿ, ಉತ್ಸಾಹದಿಂದ ಬದುಕಬೇಕು ಎಂದು ಭರವಸೆ ನೀಡುವ ಈ ದೃಶ್ಯ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೊಗೆ ಸಾವಿರಾರು ಜನರು ಭಾವುಕರಾಗಿ ಕಾಮೆಂಟ್ ಮಾಡಿದ್ದಾರೆ. ಎಂತಹ ವಿಧಿಯಾಟ, ತಂದೆಯ ಮಾತಿನ ಆಳ ಮತ್ತು ಗಂಭೀರತೆ ಅರಿಯದ ಆ ಮುಗ್ಧ ಮಗುವಿನ ಮುಖ ನೋಡಿದರೆ ಎಂಥವರ ಮನಸ್ಸೂ ಕರಗುತ್ತದೆ.
ಪೋಸ್ಟ್
Father talking to his son for the last time 💔
In a deeply moving and heartbreaking moment, a father battling terminal cancer left a poignant final message for his young son, Mantra,
Before passing away. In his last words, he gently instructed Mantra to always listen to his… pic.twitter.com/S578O8xeKX— Woke Eminent (@WokePandemic) July 29, 2026
ಯಾವ ಕುಟುಂಬಕ್ಕೂ ಇಂತಹ ಸಂದರ್ಭ ಬಾರದಿರಲಿ, ಆ ತಂದೆ ತನ್ನಿಲ್ಲದ ಮುಂದಿನ ಜೀವನಕ್ಕೆ ಮಗನನ್ನು ಸಿದ್ಧಪಡಿಸುತ್ತಿರುವ ರೀತಿ ಅತ್ಯಂತ ಕಠಿಣವಾದದ್ದು ಎಂದು ಕಂಬನಿ ಮಿಡಿದಿರುವ ನೆಟ್ಟಿಗರು, ಆ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ತಂದೆಯ ಮಾತಿನ ಆಳ ಮತ್ತು ಗಂಭೀರತೆ ಅರಿಯದ ಆ ಮುಗ್ಧ ಮಗುವಿನ ಮುಖ ನೋಡಿದರೆ ಎಂಥವರ ಮನಸ್ಸೂ ಕರಗುತ್ತದೆ.
ಆ ತಂದೆ ತನ್ನಿಲ್ಲದ ಮುಂದಿನ ಜೀವನಕ್ಕೆ ಮಗನನ್ನು ಸಿದ್ಧಪಡಿಸುತ್ತಿರುವ ರೀತಿ ಅತ್ಯಂತ ಕಠಿಣವಾದದ್ದು ಎಂದು ಕಂಬನಿ ಮಿಡಿದಿರುವ ನೆಟ್ಟಿಗರು, ಆ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ತನ್ನ ಸಾವು ಮಗನ ಮುಗ್ಧ ಮನಸ್ಸಿನ ಮೇಲೆ ಆಘಾತ ಉಂಟುಮಾಡಬಾರದೆಂದು ಮೃದುವಾಗಿ ಹೇಳಿದ್ದಾರೆ.
ಮತ್ತಷ್ಟು ಓದಿ: ಕ್ಯಾನ್ಸರ್ ಹೇಗೆ ಹರಡುತ್ತದೆ? ಸಂಶೋಧನೆಯಿಂದ ಬೆಳಕಿಗೆ ಬಂತು ಹೊಸ ವಿಚಾರ
ಈ ಘಟನೆಯು ಕೇವಲ ಒಂದು ಕುಟುಂಬದ ವೈಯಕ್ತಿಕ ದುಃಖವಾಗಿ ಉಳಿಯದೆ, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಕುಟುಂಬಗಳಿಗೆ ಮಾನಸಿಕ ಬೆಂಬಲ ನೀಡುವ ಅಗತ್ಯವನ್ನು ಇಡೀ ಸಮಾಜಕ್ಕೆ ನೆನಪಿಸಿದೆ. ಜೀವಿತಾವಧಿಯ ಕೊನೆಯ ದಿನಗಳಲ್ಲಿ ಪ್ರೀತಿಪಾತ್ರರೊಂದಿಗೆ ಕಳೆಯುವ ಪ್ರತಿ ಕ್ಷಣವೂ ಎಷ್ಟು ಅಮೂಲ್ಯವಾದುದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ