ಅಮುಕು ಡುಮುಕು ಎಂಬ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಿರಬದು. ಸೋಶಿಯಲ್ ಮೀಡಿಯಾದಲ್ಲಿ ಈ ವ್ಯಕ್ತಿಯು ಸಾಕಷ್ಟು ಜನಪ್ರಿಯತೆ ಪಡೆದರು. ಜೀ ಕನ್ನಡದ ರಿಯಾಲಿಟಿ ಶೋಗೆ ಅತಿಥಿಯಾಗೂ ತೆರಳಿದ್ದರು. ಈಗ ಆ ವ್ಯಕ್ತಿ ಮಾಡಿಕೊಂಡ ಒಂದು ಎಡವಟ್ಟು ಚರ್ಚೆಗೆ ಕಾರಣ ಆಗಿದೆ. ಸಿನಿಮಾ ಪ್ರಚಾರಕ್ಕಾಗಿ ಅವರು ಪೆಟ್ರೋಲ್ ಕುಡಿದರು ಮತ್ತು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂಬ ವಿಡಿಯೋ ವೈರಲ್ ಆಯಿತು. ಈ ವಿಡಿಯೋದ ಅಸಲಿಯತ್ತು ಹೊರ ಬಂದಿದೆ.
ಅಮುಕು ಡುಮುಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದ ಈ ವ್ಯಕ್ತಿ ಹೆಸರು ಮಂಜು. ಸೋಶಿಯಲ್ ಮೀಡಿಯಾದಲ್ಲಿ ವಿವಿಧ ವಿಡಿಯೋಗಳನ್ನು ಹಾಕಿಕೊಂಡು ವೈರಲ್ ಆಗುತ್ತಾ ಇರುತ್ತಾರೆ. ಈಗ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ಸೂರಿ ಅಣ್ಣ ಸಿನಿಮಾ ಗೆಲ್ಲಬೇಕು ಎಂದು ಪೆಟ್ರೋಲ್ ಕುಡಿದರು. ಆ ಬಳಿಕ ಅವರು ಒದ್ದಾಡಿದರು. ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಈ ವಿಡಿಯೋ ಸಾಕಷ್ಟು ಹರಿದಾಡಿತು. ಮಂಜುಗೆ ಪೂರ್ತಿಯಾಗಿ ಹುಚ್ಚು ಹಿಡಿದಿದೆ ಎಂದು ಹೇಳಲಾಯಿತು. ಸೋಶಿಯಲ್ ಮೀಡಿಯಾ ಜನಪ್ರಿಯತೆ ಹಾಗೂ ಸಿನಿಮಾ ಜನಪ್ರಿಯತೆಗೆ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು ಎಂದೆಲ್ಲ ಮಾತನಾಡಿಕೊಳ್ಳಲಾಯಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಮಂಜು ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಅಸಲಿಗೆ ಅದು ಪೆಟ್ರೋಲ್ ಆಗಿಯೇ ಇರಲಿಲ್ಲವಂತೆ.
A Chapri influencer just drank petrol in front of an actor all so his favorite movie wins!
This isn’t creativity it’s literally dying for views.
Pathetic clout-chasing at its lowest. 🚫💀@BlrCityPolice Please stop these dangerous stunts this endangers lives!… pic.twitter.com/HOTudXHEgZ— ಸನಾತನ (सनातन) (@sanatan_kannada) February 26, 2026
‘ಅಣ್ಣ ನಿಂಗೆ ಯಾರು ಏನೇ ಅನ್ನಲ್ಲಿ, ನಿಮ್ಮ ಸಿನಿಮಾ ಗೆಲ್ಲಬೇಕು. ಸಲಗ ಸೂರಿ ಅಣ್ಣನ ಸಿನಿಮಾ ಗೆಲ್ಲಬೇಕು’ ಎನ್ನುತ್ತಾ ಪೆಟ್ರೋಲ್ ಕುಡಿದರು. ಸೂರಿ ಅಣ್ಣ ಅವರನ್ನು ಎತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದೃಶ್ಯ ಇತ್ತು.
ಇದನ್ನೂ ಓದಿ: ಮದುವೆಯಲ್ಲಿ ರಶ್ಮಿಕಾ ಮಂದಣ್ಣ ಆಸೆ ಈಡೇರಿಸಿದ ವಿಜಯ್ ದೇವರಕೊಂಡ
ಇದಕ್ಕೂ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಬಿಂದು ಜೀರಾಗೆ ಜೇನು ತುಪ್ಪ ಬೆರೆಸಿದ್ದರು ಮಂಜು. ಆಗ ಪೆಟ್ರೋಲ್ ಕಲರ್ಗೆ ಅದು ತಿರುಗಿತ್ತು. ಈ ರೀತಿಯಲ್ಲಿ ಮಾಡಿ ಅವರು ಪೆಟ್ರೋಲ್ ಎಂದು ಕುಡಿದಿದ್ದರು. ಇದು ಸಿನಿಮಾ ಪ್ರಚಾರ ಅಲ್ಲ ಎಂದಿದ್ದರು.
ಮತ್ತಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
