‘ಅಮೃತಧಾರೆ’ ಧಾರಾವಾಹಿಗೆ ಅಖಿಲಾಂಡೇಶ್ವರಿಯ ಎಂಟ್ರಿ – Kannada News | Amruthadhare Serial Twist: Gautam Devan’s Plan to Shock JD and Akhilandeshwari Entry

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಸಾಕಷ್ಟು ತಿರುವು ಎದುರಾಯಿತು. ಈಗ ಜೆಡಿಗೆ ಶಾಕ್ ಕೊಡೋಕೆ ಗೌತಮ್ ದೀವಾನ್ ರೆಡಿ ಆಗಿದ್ದಾನೆ. ಹಾಗಾದರೆ ಏನು ಆ ಶಾಕ್ ಏನು? ಅದನ್ನು ನಾವು ಇಂದು ಹೇಳುತ್ತಾ ಇದ್ದೇವೆ. ಗೌತಮ್ ಸಾಕಷ್ಟು ಸಾಲ ಮಾಡಿಕೊಂಡಿದ್ದಾನೆ. ಇದರಿಂದ ತಪ್ಪಿಸಿಕೊಳ್ಳಲು ಆತ ಕಂಪನಿಯನ್ನು ಮಾರಿ ಹೋಗುವ ಪ್ಲ್ಯಾನ್ ಅಲ್ಲಿ ಇದ್ದಾನೆ. ಆದರೆ, ಅಂದುಕೊಂಡಂತೆ ಇಲ್ಲಿ ನಡೆಯುತ್ತಿಲ್ಲ.

‘ಅಮೃತಧಾರೆ’ ಧಾರಾವಾಹಿಯಲ್ಲಿ ಈಗ ಒಂದು ದೊಡ್ಡ ತಿರುವು ಎದುರಾಗಿದೆ. ಆ ತಿರುವಿನ ಬಗ್ಗೆ ನಾವು ವಿವರಿಸುತ್ತಿದ್ದೇವೆ. ಜೆಡಿ ಒಂದು ಬೆಟ್ಟಿಂಗ್ ಕಂಪನಿ ಮೇಲೆ ಹೂಡಿಕೆ ಮಾಡಿದ್ದ. ಅದು ನೂರಾರು ಕೋಟಿ ರೂಪಾಯಿ. ಈಗ ದುಡ್ಡು ಕೊಟ್ಟವನು ಬಂದು ಈತನ ಹಿಂದೆ ಬಿದ್ದಿದ್ದಾನೆ. ಹೀಗಾಗಿ ಕಂಪನಿಯನ್ನು ಮಾರಿ ಹೋಗಲು ನಿರ್ಧರಿಸಿದ್ದಾನೆ ಜೆಡಿ.

ವಿಶೇಷ ಎಂದರೆ ಈ ಕಂಪನಿಯನ್ನು ಖರೀದಿ ಮಾಡಲು ಮುಂದಾಗಿರೋದು ಗೌತಮ್ ಅನ್ನೋದು ವಿಶೇಷ. ‘ಪಾರು’ ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರವನ್ನು ವಿನಯಾ ಪ್ರಸಾದ್ ಮಾಡಿದ್ದರು. ಈಗ ಆ ಪಾತ್ರವನ್ನು ಮತ್ತೆ ಕರೆತರಲಾಗಿದೆ ಎಂಬುದು ವಿಶೇಷ. ಗೌತಮ್ ದೀವಾನ್ ಉದ್ಯಮಕ್ಕೆ ಹೂಡಿಕೆ ಮಾಡಲು ಸಹಾಯಕ್ಕೆ ಬರುವ ವ್ಯಕ್ತಿಯಾಗಿ ವಿನಯಾ ಪ್ರಸಾದ್ ಕಾಣಿಸಿಕೊಂಡಿದ್ದಾರೆ.

ಗೌತಮ್ ದೀವಾನ್ ತಮ್ಮ ಉದ್ಯಮ ವಿಸ್ತರಣೆಗೆ ಹಣದ ಸಹಾಯ ಕೇಳಿ ಅಖಿಲಾಂಡೇಶ್ವರಿ ಬಳಿ ಹೋಗುತ್ತಾನೆ. ಆ ಸಮಯಕ್ಕೆ ಸರಿಯಾಗಿ ತಮ್ಮದೇ ಮನೆ ಹರಾಜಿಗೆ ಬಂದಿರೋ ವಿಷಯ ಗೊತ್ತಾಗುತ್ತದೆ. ಆಗ ಅಖಿಲಾಂಡೇಶ್ವರಿ ಬಳಿ ಬ್ಲ್ಯಾಂಕ್ ಚೆಕ್ ಪಡೆದು ಗೌತಮ್ ಹೋಗುತ್ತಾನೆ.

ಇದನ್ನೂ ಓದಿ: ‘ಅಮೃತಧಾರೆ’: ದೊಡ್ಡ ಸಾಧನೆ ಮಾಡಿದ ಮಲ್ಲಿ; ಜಯದೇವ್ ಬಾಳಲ್ಲಿ ಕತ್ತಲು

ಇನ್ನು, ಗೌತಮ್ ತಾಯಿ ಕಷ್ಟದಲ್ಲಿ ಇದ್ದಾಳೆ. ಆಕೆಯೂ ಸಾಲ ಮಾಡಿ ಸಿಕ್ಕಿ ಬಿದ್ದಿದ್ದಾಳೆ. ಹೀಗಿರುವಾಗಲೇ ಸಾಲ ಕೊಟ್ಟಿರುವವಳು ಆಕೆಯನ್ನು ಕಿಡ್ನ್ಯಾಪ್ ಮಾಡಿ ಹಿಡಿದಿಟ್ಟುಕೊಂಡಿದ್ದಳು. ಆಕೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಳು. ಇವಳನ್ನು ಸೇವ್ ಮಾಡುವ ಕೆಲಸವನ್ನು ಗೌತಮ್ ದೀವಾನ್ ಮಾಡಿದ್ದಾನೆ. ಶಕುಂತಲ ಸಂಪೂರ್ಣವಾಗಿ ಬದಲಾಗುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *