ಸತೀಶ್ ನೀನಾಸಂ ನಟನೆಯ ‘ಅಯೋಗ್ಯ 2’ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ‘ಅಯೋಗ್ಯ’ ರೀತಿಯೇ ‘ಅಯೋಗ್ಯ 2’ ಚಿತ್ರದ ಹಾಡುಗಳು ಕೂಡ ಗಮನ ಸೆಳೆಯುತ್ತಿವೆ. ಮಹೇಶ್ ಕುಮಾರ್ ನಿರ್ದೇಶನದ ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ‘ಅಣ್ಣ ಬಂದ್ರೆ..’ ಹಾಡನ್ನು ಈಗ ರಿಲೀಸ್ ಮಾಡಲಾಗಿದೆ. ಈ ಹಾಡಿಗೆ ಆ್ಯಂಟನಿ ದಾಸನ್ ಅವರು ಧ್ವನಿ ನೀಡಿದ್ದಾರೆ. ಚೇತನ್ ಕುಮಾರ್ ಅವರು ಸಾಹಿತ್ಯ ಬರೆದಿದ್ದಾರೆ. ಈ ಹಾಡಿನಲ್ಲಿ ಸತೀಶ್ ನೀನಾಸಂ (Sathish Ninasam) ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚೇತನ್ ಕುಮಾರ್ ಅವರು ಮಾತನಾಡಿದ್ದಾರೆ. ಸತೀಶ್ ಅವರನ್ನು ಈ ರೀತಿ ಮಾಸ್ ಅವತಾರದಲ್ಲಿ ನೋಡಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಅದು ‘ಅಯೋಗ್ಯ 2’ ಸಿನಿಮಾದ ಈ ಹಾಡಿನ ಮೂಲಕ ಈಡೇರಿದೆ ಎಂದು ಚೇತನ್ ಕುಮಾರ್ ಅವರು ಹೇಳಿದ್ದಾರೆ. ಆಗಸ್ಟ್ 7ರಂದು ಈ ಸಿನಿಮಾ ತೆರೆಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
