Headlines

ಅರಮನೆ ನಗರಿಯಲ್ಲಿ ಭರ್ಜರಿ ರಿಯಲ್ ಎಸ್ಟೇಟ್ ಮೇಳ; ಮೈಸೂರಿನಲ್ಲಿ ಆ. 22, 23ರಂದು ‘ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ’ – Kannada News | TV9 Sweet Home Real Estate Expo at Mysuru on August 22 23rd, golden chance to buy properties

ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋImage Credit source: TV9 Network

ಅರಮನೆ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಟಿವಿ9 ಕನ್ನಡ ವತಿಯಿಂದ ಭರ್ಜರಿ ರಿಯಲ್ ಎಸ್ಟೇಟ್ ಎಕ್ಸ್​ಪೋ ಆಯೋಜಿಸಲಾಗುತ್ತಿದೆ. ಶರಣ್ಯ ಫಾರ್ಮ್ಸ್ ಪ್ರಸ್ತುತಪಡಿಸುವ ‘ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ’ ಇದೇ ತಿಂಗಳು (ಆಗಸ್ಟ್) 22 ಮತ್ತು 23ರಂದು ನಡೆಯಲಿದೆ. ನಿಮ್ಮ ಕನಸಿನ ಮನೆ, ನಿವೇಶನ (ಪ್ಲಾಟ್), ವಿಲ್ಲಾ, ಫಾರ್ಮ್‌ಲ್ಯಾಂಡ್ ಅಥವಾ ಕಮರ್ಷಿಯಲ್ ಪ್ರಾಪರ್ಟಿ ಖರೀದಿಸಲು ಬಯಸುವವರಿಗೆ ಇದೊಂದು ಸುವರ್ಣಾವಕಾಶ.

ಈ ರಿಯಲ್ ಎಸ್ಟೇಟ್ ಎಕ್ಸ್‌ಪೋದಲ್ಲಿ ನಂಬಿಕಸ್ಥ ಡೆವಲಪರ್‌ಗಳು ಮತ್ತು ಬಿಲ್ಡರ್‌ಗಳ 100ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳು ಒಂದೇ ಸೂರಿನಡಿ ಲಭ್ಯವಿರಲಿವೆ. ನಿಮ್ಮ ಬಜೆಟ್ ಮತ್ತು ಅಗತ್ಯಕ್ಕೆ ತಕ್ಕಂತೆ ವಿವಿಧ ಆಯ್ಕೆಗಳನ್ನು ಪರಿಶೀಲಿಸಿ ನಿಮಗೆ ಸೂಕ್ತವಾದ ಆಸ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಸಾಲ ಸೌಲಭ್ಯ ಹಾಗೂ ವಿಶೇಷ ಬಹುಮಾನಗಳು

ಬ್ಯಾಂಕ್ ಸಾಲ ಸೌಲಭ್ಯ: ಮನೆ ಅಥವಾ ಆಸ್ತಿ ಖರೀದಿಗೆ ಆರ್ಥಿಕ ನೆರವು ಬೇಕಾದವರಿಗಾಗಿ, ಪ್ರಮುಖ ಬ್ಯಾಂಕ್‌ಗಳು ಸುಲಭ EMI ಆಯ್ಕೆಗಳೊಂದಿಗೆ ಗೃಹ ಸಾಲದ ವಿವರಗಳನ್ನು ಒದಗಿಸಲಿವೆ.

ಆಕರ್ಷಕ ಬಹುಮಾನಗಳು: ಎಕ್ಸ್‌ಪೋಗೆ ಭೇಟಿ ನೀಡುವ ಸಾರ್ವಜನಿಕರಿಗಾಗಿ ಚಿನ್ನದ ನಾಣ್ಯಗಳು, ಹಾಸಿಗೆಗಳು (Mattresses) ಮತ್ತು ಹಲವು ಆಕರ್ಷಕ ಗಿಫ್ಟ್ ಹ್ಯಾಂಪರ್‌ಗಳನ್ನು ಗೆಲ್ಲುವ ಅವಕಾಶವಿದೆ.

ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ ವಿವರಗಳು

  • ದಿನಾಂಕ: ಆಗಸ್ಟ್ 22 ಮತ್ತು 23
  • ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 7:00 ರವರೆಗೆ
  • ಸ್ಥಳ: ರಾಜೇಂದ್ರ ಕಲಾಮಂದಿರ, ರಾಮಾನುಜ ರಸ್ತೆ, ಜೆಎಸ್‌ಎಸ್ ಆಸ್ಪತ್ರೆ ಹತ್ತಿರ, ಮೈಸೂರು
  • ಪ್ರವೇಶ: ಉಚಿತ

ನಿಮ್ಮ ಕುಟುಂಬದೊಂದಿಗೆ ‘ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ’ಗೆ ಭೇಟಿ ನೀಡಿ, ಡೆವಲಪರ್‌ಗಳೊಂದಿಗೆ ನೇರವಾಗಿ ಮಾತನಾಡಿ ನಿಮ್ಮ ಕನಸಿನ ಆಸ್ತಿಯನ್ನು ನಿಮ್ಮದಾಗಿಸಿಕೊಳ್ಳಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *