
ನಟ ಅಲ್ಲು ಅರ್ಜುನ್ ಅವರು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ‘ಪುಷ್ಪ 2’ ಬಂದ ಬಳಿಕ ಅವರು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಜಪಾನ್ ಅಲ್ಲ ಸಿನಿಮಾ ರಿಲೀಸ್ ಆಗಿ ಹಿಟ್ ಆಗಿದೆ. ಅಲ್ಲು ಅರ್ಜುನ್ ಅವರು ಈ ಹಂತಕ್ಕೆ ಬರಲು ಕಾರಣ ಅನೇಕರಿದ್ದಾರೆ. ಈ ಮೊದಲು ಅವರು ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಬಗ್ಗೆ ಇಲ್ಲಿದೆ ವಿವರ.
ಅಲ್ಲು ಅರ್ಜುನ್ ಅವರಿಗೆ ಸಿನಿಮಾ ಹಿನ್ನೆಲೆ ಇದೆ. ಅವರ ತಂದೆ ಅಲ್ಲು ಅರವಿಂದ್ ಖ್ಯಾತ ನಿರ್ಮಾಪಕರು. ಅವರ ತಾತ ಅಲ್ಲು ರಾಮಲಿಂಗಯ್ಯ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದರು. ಅವರು 1000ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕಲಾವಿದ ಎಂಬ ಖ್ಯಾತಿ ಅವರಿಗೆ ಇದೆ. ಸಿನಿಮಾ ಬಗ್ಗೆ ಆಸಕ್ತಿ ಮೂಡಲು ಅವರು ಕೂಡ ಕಾರಣ.
Happy to share the @AlluCinemas ad film with you all.
Director @gowtam19 garu has crafted it with great vision and elegance.
A project made with immense passion and love. Grateful to everyone who contributed to bringing this film to life.
See you at the movies.
pic.twitter.com/Cx6lVL2gPi — Allu Arjun (@alluarjun) March 19, 2026
ಇಷ್ಟೆಲ್ಲ ಸ್ಟಾರ್ಗಳು ಇರುವ ಮನೆ ಅವರನ್ನು ವಿನಮ್ರವಾಗಿ ನಡೆದುಕೊಳ್ಳುವಂತೆ ಮಾಡಿತಂತೆ. ‘ನಾನು ಈ ಮಟ್ಟಕ್ಕೆ ಬೆಳೆಯಲು ಕುಟುಂಬಕ್ಕೆ ಇದರ ಕ್ರೆಡಿಟ್ ಕೊಡುತ್ತೇನೆ’ ಎಂದು ಅವರು ಹೇಿದ್ದರು. ‘ನಾನೇ ಬೆಳೆದು ನಿಂತವನಲ್ಲ. ನಾನು ಎಲ್ಲರಿಂದ ಆದವನು. ನನ್ನ ನಿರ್ದೇಶಕರು, ತಂತ್ರಜ್ಞರು, ಕುಟುಂಬದವರು, ಅಭಿಮಾನಿಗಳು ಹಾಗೂ ಎಲ್ಲರೂ ನನ್ನ ಬೆಳವಣಿಗೆಗ ಕಾರಣ. ನಾನು ಬೆಳೆಯಲು ಎಷ್ಟು ಸಹಾಯಬೇಕೋ ಅದನ್ನು ತೆಗೆದುಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ತುಂಬಾನೇ ಶ್ರೀಮಂತ ಅಲ್ಲು ಅರ್ಜುನ್; ಅವರ ಬಳಿ ಇರೋ ದುಬಾರಿ ವಸ್ತುಗಳಿವು
ಅಲ್ಲು ಅರ್ಜುನ್ ಹಾಗೂ ಅಟ್ಲಿ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ಇಂದು ಅನೌನ್ಸ್ ಆಗುವ ಸಾಧ್ಯತೆ ಇದೆ. ಈ ಸಿನಿಮಾದ ಟೈಟಲ್ ಏನು ಎಂಬುದು ಇಂದು ಗೊತ್ತಾಗಲಿದೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.