ಡಾ. ರಾಜ್ಕುಮಾರ್ ಸಮಾಧಿ ಬಗ್ಗೆ ನಟ ಚೇತನ್ ಅಹಿಂಸಾ (Chetan Ahimsa) ಅವರು ನೀಡಿದ ಹೇಳಿಕೆಯಿಂದ ಶುರುವಾದ ವಿವಾದ ಮುಂದುವರಿದಿದೆ. ಚೇತನ್ ವಿರುದ್ಧ ಕನ್ನಡಪರ ಸಂಘಟನೆಗಳು, ರಾಜ್ಕುಮಾರ್ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಸಾರಾ ಗೋವಿಂದು ಅವರು ಮಾತನಾಡಿದರು. ‘ಅವನು ಅಹಿಂಸಾ ಚೇತನ್ ಅಲ್ಲ, ಹಿಂಸಾ ಚೇತನ್. ಅವನು ನನ್ನ ಮೇಲೆ ಕೇಸ್ ಹಾಕಿದ್ದ. ಅದು ಎಫ್ಐಆರ್ ಆಗಿದೆ. ಅವನ ಎಫ್ಐಆರ್ಗೆ ಹೆದರಿ ನಾವು ಯಾರೂ ಇಲ್ಲಿಗೆ ಬಂದಿಲ್ಲ. ಕನ್ನಡಪರ ಹೋರಾಟಗಾರರೆಲ್ಲ ಅವನ ವಿರುದ್ಧ ಮೊಕದ್ದಮೆ ಹೂಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಇಲ್ಲಿ ಕೇವಲ ರಾಜ್ಕುಮಾರ್ ಅಭಿಮಾನಿಗಳ ಸಂಘ ಮಾತ್ರ ಸೇರಿಲ್ಲ. ರಕ್ಷಣಾ ವೇದಿಕೆ, ಕನ್ನಡ ಸೇನೆ, ಕನ್ನಡ ಜಾಗೃತಿ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಇಲ್ಲಿಗೆ ಬಂದು ನನಗೆ ಬೆಂಬಲ ನೀಡಿದ್ದಾರೆ. ರಾಜ್ಕುಮಾರ್ ವಿಚಾರದಲ್ಲಿ ಈವರೆಗೂ ಯಾರೂ ಸೊಲ್ಲು ಎತ್ತಿರಲಿಲ್ಲ. ಆದರೆ ನಿರುದ್ಯೋಗಿ ಚೇತನ್ ಪ್ರಚಾರಕ್ಕಾಗಿ ಈ ಕೆಲಸ ಮಾಡಿದ್ದಾನೆ’ ಎಂದು ಸಾರಾ ಗೋವಿಂದು (Sa Ra Govindu) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.