ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ವಿವಾಹ ಆಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಸಮಂತಾ ವಿಚ್ಛೇದನದ ಬಳಿಕ ನಾಗ ಚೈತನ್ಯ ಬಾಳಲ್ಲಿ ಶೋಭಿತಾ ಬಂದರು. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಚ್ಯಾಟ್ ಮಾಡಿಕೊಂಡರು. ಆ ಬಳಿಕ ಎದುರು ಭೇಟಿ ಆಗಿ, ಗೆಳೆತನ ಮೂಡಿ, ಅದು ಪ್ರೀತಿಗೆ ತಿರುಗಿ ಈಗ ವಿವಾಹ ಆಗಿದ್ದಾರೆ. ಈಗ ನಾಗಚೈತನ್ಯ ಅವರು ಶೋಭಿತಾ ಬಗ್ಗೆ ಮಾತನಾಡಿದ್ದಾರೆ. ಶೋಭಿತಾ ಅವರನ್ನು ನೋಡಿದರೆ ಬೇಸರವಾಗುತ್ತದೆ ಎಂದಿದ್ದಾರೆ.
ಸಮಂತಾ ಜೊತೆಗಿನ ವಿಚ್ಛೇದನದ ಬಳಿಕ ಕೆಲ ಸಮಯ ನಾಗ ಚೈತನ್ಯ ಒಂಟಿಯಾಗೇ ಇದ್ದರು. ಈ ಒಂಟಿತನವನ್ನು ದೂರ ಮಾಡಿದ್ದು ಶೋಭಿತಾ. ಹಲವು ಸಮಯ ಇಬ್ಬರೂ ಒಟ್ಟಿಗೆ ಸುತ್ತಾಡಿದರು. ಆ ಬಳಿಕ ಮದುವೆ ಆಗುವ ನಿರ್ಧಾರಕ್ಕೆ ಬಂದರು. ಈ ಬೆನ್ನಲ್ಲೇ ಶೋಭಿತಾ ಸಾಕಷ್ಟು ಹೇಟ್ ಕಮೆಂಟ್ ಅನುಭವಿಸಬೇಕಾಯಿತು. ‘ನಾಗ ಚೈತನ್ಯ ಹಾಗೂ ಸಮಂತಾ ದೂರ ಆಗಲು ನೀವು ಕಾರಣ’ ಎಂದು ಅನೇಕರು ಶೋಭಿತಾ ಮೇಲೆ ಆರೋಪ ಹೊರಿಸಿದರು.
#NagaChaitanya speaks from the heart about his second marriage ❤️
I genuinely feel bad for her. Sobhita Dhulipala has no fault here. We met naturally on Instagram and built something real over time.
The hate around her is truly unfair. pic.twitter.com/MNb88Wybp3
— Cine Prasthanam (@CinePrasthanam) April 29, 2026
ಈ ವಿಷಯವಾಗಿ ನಾಗ ಚೈತನ್ಯ ಅವರು ಓಪನ್ ಆಗಿ ಮಾತನಾಡಿದ್ದು ಕಡಿಮೆ. ಈಗ ಅವರು ಈ ಬಗ್ಗೆ ಮೌನ ಮುರಿದಿದ್ದಾರೆ. ಅವರಿಗೆ ಶೋಭಿತಾ ಅವರ ಪರಿಸ್ಥಿತಿ ನೋಡಿ ಸಂಕಟವಾಗುತ್ತಿದೆ. ಶೋಭಿತಾ ತಮ್ಮನ್ನು ಅರ್ಥೈಸಿಕೊಳ್ಳುತ್ತಿರುವ ರೀತಿ ನೋಡಿ ಖುಷಿ ಕೂಡ ಇದೆ.
ಇದನ್ನೂ ಓದಿ: ನಾಗ ಚೈತನ್ಯ ಸಿಕ್ಸ್ ಪ್ಯಾಕ್: ವೈರಲ್ ಆದ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ
‘ಅವಳನ್ನು ನೋಡಿದ್ರೆ ಬೇಸರವಾಗುತ್ತದೆ. ಇದರಲ್ಲಿ ಅವಳ ತಪ್ಪೇನು ಇಲ್ಲ. ಸೋಶಿಯಲ್ ಮೀಡಿಯಾ ಚ್ಯಾಟ್ ಮೂಲಕ ಇಬ್ಬರೂ ಪರಿಚಯ ಆಗಿ, ಹಂತ ಹಂತವಾಗಿ ನಮ್ಮ ಸಂಬಂಧ ಬೆಳೆಯಿತು. ನನ್ನ ಹಿಂದಿನ ಜೀವನಕ್ಕೂ ಅವಳಿಗೂ ಯಾವುದೇ ಸಂಬಂಧ ಇಲ್ಲ. ಅವಳಿಗೆ ಸಾಕಷ್ಟು ಧನ್ಯವಾದ ಹೇಳಬೇಕು. ಪ್ರಬುದ್ಧವಾಗಿ ವರ್ತಿಸಿದ್ದಾರೆ. ಅವರು ನಿಜವಾದ ಹೀರೋ’ ಎಂದಿದ್ದಾರೆ ನಾಗ ಚೈತನ್ಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.