ಬೆಂಗಳೂರು, (ಆಗಸ್ಟ್ 05): ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ನಲ್ಲಿ (Karnataka Congress) ಅಸಮಾಧಾನ ಸ್ಫೋಟಗೊಂಡಿದ್ದು, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹಲವು ಶಾಸಕರು ಬೇಸರಗೊಂಡಿದ್ದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಎಂ.ಕೃಷ್ಣಪ್ಪ ಸಹ ಅಸಮಾಧಾನಗೊಂಡಿದ್ದು, ಇದೀಗ ಕೃಷ್ಣಪ್ಪನವರನ್ನು ಮನವೊಲಿಸಲು ಖುದ್ದು ಹೈಕಮಾಂಡ್ ಅಖಾಡಕ್ಕಿಳಿದಿದೆ. ಹೌದು….ಎಂ ಕೃಷ್ಣಪ್ಪ ಅವರನ್ನ ಮನವೊಲಿಸಲು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮುಂದಾಗಿದ್ದು, ದೆಹಲಿಯಿಂದ ನೇರವಾಗಿ ಬೆಂಗಳೂರಿನ ವಿಜಯನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ್ದಾರೆ.
