ಆಂಧ್ರದ ಭೋಗಾಪುರಂನಲ್ಲಿ ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜು; 13,000 ವಿದ್ಯಾರ್ಥಿಗಳಿಂದ ಧಿಂಸಾ ನೃತ್ಯ ತಾಲೀಮು – Kannada News | 13,000 students to welcome PM Narendra Modi with Dhimsa Tribal dance in Andhra Pradesh Bhogapuram

ವಿಜಯನಗರ, ಜುಲೈ 31: ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಭೋಗಾಪುರಂನಲ್ಲಿ ನಿರ್ಮಿಸಲಾಗಿರುವ ‘ಅಲ್ಲುರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದ ಉದ್ಘಾಟನೆಗಾಗಿ ಆಗಸ್ಟ್ 1ರಂದು ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಅತ್ಯಂತ ಭವ್ಯ ಸ್ವಾಗತ ಕೋರಲು ಆಂಧ್ರಪ್ರದೇಶ ರಾಜ್ಯ ಸರ್ಕಾರವು ಸಮಗ್ರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಉದ್ಘಾಟನಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ನಾಳೆ ಸುಮಾರು 13,000 ಮಕ್ಕಳು ಸಾಂಪ್ರದಾಯಿಕ ಬುಡಕಟ್ಟು ಜನಪದ ನೃತ್ಯವಾದ ಧಿಂಸಾವನ್ನು ಪ್ರದರ್ಶಿಸಲಿದ್ದಾರೆ. ಇದಕ್ಕಾಗಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವಿದ್ಯಾರ್ಥಿಗಳು ವಿಶೇಷ ರಿಹರ್ಸಲ್ ನಡೆಸಿದರು.

ಉತ್ತರ ಆಂಧ್ರದ ಬುಡಕಟ್ಟು ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಇಡೀ ದೇಶಕ್ಕೆ ಸಾರುವ ಉದ್ದೇಶದಿಂದ ಈ ಬೃಹತ್ ‘ಧಿಂಸಾ’ ಸಮೂಹ ನೃತ್ಯವನ್ನು ಆಯೋಜಿಸಲಾಗಿದೆ. ಪ್ರಧಾನಿ ಮೋದಿ ನಾಳೆ ಭೋಗಾಪುರಂ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದ ನಂತರ ತೆರೆದ ವಾಹನದಲ್ಲಿ ಸಾಗುವಾಗ ಈ ಬೃಹತ್ ನೃತ್ಯ ಪ್ರದರ್ಶನದ ಮೂಲಕ ಅವರನ್ನು ಸ್ವಾಗತಿಸಲಾಗುವುದು.

ಧಿಂಸಾ ಎಂಬುದು ಮುಖ್ಯವಾಗಿ ಆಂಧ್ರಪ್ರದೇಶ ಮತ್ತು ಒಡಿಶಾ ಗಡಿಭಾಗದಲ್ಲಿರುವ ಅರಕು ಕಣಿವೆ ಹಾಗೂ ವಿಶಾಖಪಟ್ಟಣಂ, ವಿಜಯನಗರ, ಕೊರಾಪುಟ್ ಪ್ರದೇಶಗಳಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗದವರು ಪ್ರದರ್ಶಿಸುವ ಅತ್ಯಂತ ಜನಪ್ರಿಯ ಮತ್ತು ಸಾಂಪ್ರದಾಯಿಕ ಸಮೂಹ ನೃತ್ಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *