ಬೆಂಗಳೂರು, (ಜೂನ್ 27): ರೋಗಿಗಳ ಪಾಲಿನ ಸಂಜೀವಿನಿ ಎನ್ನಿಸಿಕೊಂಡಿರುವ ಆಂಬ್ಯುಲೆನ್ಸ್ (Ambulance)ಸೇವೆ ಸದ್ಯ ಹಲವು ಆರೋಪಗಳನ್ನು ಎದುರಿಸುತ್ತಿದೆ. ಸಕಾಲದಲ್ಲಿ ಆಂಬ್ಯುಲೆನ್ಸ್ ಸೇವೆ ಸಿಗಲ್ಲ, ಹಣ ಪಡಿತಾರೆ ಜೊತೆಗೆ ಸಿಕ್ಕಾಪಟ್ಟೆ ಲೇಟ್ ಬರುತ್ತೆ ಎಂಬಿತ್ಯಾದಿ ಆರೋಪಗಳಿದೆ. ಸದ್ಯ ಟ್ರಾಫಿಕ್ ನಗರಿ ಎನ್ನಿಸಿಕೊಂಡ ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್ ಸಕಾಲದಲ್ಲಿ ಆಸ್ಪತ್ರೆ ತಲುಪಲು ಸಾಧ್ಯವಾಗ್ತಿಲ್ಲ. ಉದಾಹರಣೆಗೆ ಸೈರನ್ ಹಾಕಿದ್ರೂ ವಿಕ್ಟೋರಿಯಾ ಆಸ್ಪತ್ರೆ ತಲುಪಲು ಕೆಲವೊಮ್ಮೆ 50 ನಿಮಿಷ ಬೇಕಾಗುತ್ತದೆ. 10 ಕಿಲೋಮೀಟರ್ ದೂರಕ್ಕೆ 2 ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಳ್ತಿದೆ. ಸ್ಟ್ಯಾಂಡರ್ಡ್ ಟೈಮಿಂಗ್ ಪ್ರಕಾರ ಒಂದು ಆಂಬ್ಯುಲೆನ್ಸ್ 8 ಕಿಲೋಮೀಟರ್ ಅನ್ನು 20 ನಿಮಿಷಕ್ಕೆ ತಲುಪಬೇಕು. ಆದರೆ ಬೆಂಗಳೂರಿನಲ್ಲಿ ಇದು ಡಬ್ಬಲ್ ಆಗ್ತಿದೆ. ಈ ವಿಚಾರವನ್ನು ಖುದ್ದು ಆರೋಗ್ಯ ಸಚಿವರೇ ಒಪ್ಪಿಕೊಂಡಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಬ್ರೇಕ್ ಹಾಕಿ, ಕೇವಲ 13 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಸೇವೆ ನೀಡುವ ಗುರಿಯನ್ನು ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಹೊಂದಿದ್ದಾರೆ.
ಆಂಬ್ಯುಲೆನ್ಸ್ ಪ್ರಾಯೋಗಿಕ ರೇಡಿಯಸ್ ಹೇಗಿದೆ?
ರಾಜ್ಯದಲ್ಲಿ ಒಟ್ಟು 715 ಆಂಬ್ಯುಲೆನ್ಸ್ ಗಳಿವೆ. ಈ ಪೈಕಿ 530 ಮಾತ್ರ ಲಭ್ಯವಿದೆ. ಇನ್ನುಳಿದ ಶೇ.25 ಆಂಬ್ಯುಲೆನ್ಸ್ ಗಳು ರಿಪೇರಿ, ಔಟ್ ಆಫ್ ಸರ್ವೀಸ್ ಇದೆ. ಇನ್ನು ಆಂಬ್ಯುಲೆನ್ಸ್ ಪ್ರಾಯೋಗಿಕ ರೇಡಿಯಸ್ ಹೇಗಿದೆ ಅಂತ ನೋಡುವುದಾದರೆ, ಸ್ಟ್ಯಾಂಡರ್ಡ್ 8 ಕಿ.ಮೀ 20 ನಿಮಿಷ, ಬೆಂಗಳೂರು ಸರಾಸರಿ 5-7 ಕಿ.ಮಿ 15 ನಿಮಿಷ, ಟ್ರಾಫಿಕ್ ಪೀಕ್ ಹವರ್ 2-3 ಕಿ.ಮೀ 30-50 ನಿಮಿಷ, ಗ್ರೀನ್ ಕಾರಿಡಾರ್ 14 ಕಿ.ಮೀ 13 ನಿಮಿಷ.
13 ನಿಮಿಷಗಳಿಗೆ ತರುವುದಕ್ಕೆ ಅನೇಕ ಸವಾಲುಗಳು
ಆಂಬ್ಯುಲೆನ್ಸ್ 13 ನಿಮಿಷಗಳಿಗೆ ತರುವುದಕ್ಕೆ ಅನೇಕ ಸವಾಲುಗಳಿವೆ. ಉದಾಹರಣೆಗೆ 19 ಕಿಲೋಮೀಟರ್ ಗೆ ಪೀಕ್ ಹವರ್ ನಲ್ಲಿ ಗಂಟೆಗಟ್ಟಲೆ ಬೇಕಾಗುತ್ತದೆ. ಆಂಬ್ಯುಲೆನ್ಸ್ ಕೊರತೆ ಸಮಸ್ಯೆ ಹೆಚ್ವಿಸಿದರೆ, ಪ್ರತಿ ಬಾರಿ ಗ್ರೀನ್ ಕಾರಿಡಾರ್ ಸಾಧ್ಯವಿಲ್ಲ.
ಒಟ್ನಲ್ಲಿ ಸಚಿವರ 13 ನಿಮಿಷದ ಗುರಿ ಸರಿಯೇ. ಆದರೆ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದೇ, ಕೇವಲ ಆಂಬ್ಯುಲೆನ್ಸ್ ಹೆಚ್ಚಿಸಿದರೆ ಸಾಲದು. ಗ್ರೀನ್ ಕಾರಿಡಾರ್, ಸಾರ್ವಜನಿಕರ ಸಹಕಾರ, ಸಿಗ್ನಲ್ ಮ್ಯಾನೇಜ್ಮೆಂಟ್ ಎಲ್ಲವೂ ಒಟ್ಟಿಗೆ ಸೇರಿದರೆ ಗುರಿ ಮುಟ್ಟಲು ಸಾಧ್ಯವಿದರೆ.
