ಉನ್ನಾವೊ, ಮಾರ್ಚ್ 4: ಉತ್ತರ ಪ್ರದೇಶದ ಉನ್ನಾವೊದ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ ಭೀಕರ ಅಪಘಾತ ಸಂಭವಿಸಿದೆ. ಬಂಗಾರ್ಮೌ ಪೊಲೀಸ್ ಠಾಣೆ ಪ್ರದೇಶದ ಗಹರ್ ಪೂರ್ವಾ ಗ್ರಾಮದ ಬಳಿ ಅತಿ ವೇಗವಾಗಿ ಬಂದ ಪಿಕಪ್ ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ. ಪಿಕಪ್ ಚಾಲಕ ಮತ್ತು 3 ವರ್ಷದ ಬಾಲಕಿ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಪಿಕಪ್ನಲ್ಲಿದ್ದ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾದ ಭಯಾನಕ ವಿಡಿಯೋ ಇಲ್ಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ